More

    ವಿಂಟೇಜ್ ಕಾರುಗಳ ಐತಿಹಾಸಿಕ ಪಯಣ

    ಬೆಂಗಳೂರು: ಯುನೆಸ್ಕೋದ ಅಧಿಕೃತ ಪಾಲುದಾರ ಫೆಡರೇಷನ್ ಆಫ್ ವೆಹಿಕಲ್ಸ್ ಆಫ್ ಇಂಡಿಯಾ (ಎಫ್​ಐವಿಎ) ಸಹಯೋಗದಲ್ಲಿ ಭಾರತೀಯ ಐತಿಹಾಸಿಕ ವಾಹನಗಳ ಒಕ್ಕೂಟ ಆಯೋಜಿಸಿದ್ದ ವಿಂಟೇಜ್ ಕಾರುಗಳ ರ್ಯಾಲಿಯಲ್ಲಿ 13 ಕಾರುಗಳು ಭಾಗವಹಿಸಿದ್ದವು. ಗುಜರಾತ್ ಹಾಗೂ ರಾಜಸ್ಥಾನದ ಒಟ್ಟು 1,400 ಕಿ.ಮೀ. ಪ್ರಯಾಣಿಸಿದವು.

    ಗುಜರಾತ್ ವಿಂಟೇಜ್ ಆಂಡ್ ಕ್ಲಾಸಿಕ್ ಕಾರ್ಸ್ ಕ್ಲಬ್​ನ (ಜಿವಿಸಿಸಿಸಿ) ಸಹಯೋಗದಲ್ಲಿ 7 ದಿನ ನಡೆದ ರ್ಯಾಲಿಯಲ್ಲಿ ಅತಿ ಕಿರಿಯ 4 ವರ್ಷದ ಮಗುವಿನಿಂದ 80 ವರ್ಷದವರೆಗೆ ಭಾಗವಹಿಸಿದ್ದು ವಿಶೇಷವಾಗಿತ್ತು. ಪುರುಷ ಹಾಗೂ ಮಹಿಳಾ ಚಾಲಕರು ಮೌಟ್ ಅಬುವಿನ ಕಡಿದಾದ ರಸ್ತೆ, ರಣ್ ಆಫ್ ಕಚ್ ಜತೆಗೆ ಇದಾರ್, ಗೋಂಡಾಳ್, ವಾಂಕೆನಾರ್, ಬಿಕನೇರ್ ಅನ್ನು ಕಾರುಗಳು ಹಾದು ಬಂದವು.

    ಕಾರು, ಬೈಕ್ ಪ್ರದರ್ಶನ

    ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ 1933ರ ಷೆವರ್ಲೆ ಫೈಟನ್, 1940ರ ಲಿಂಕನ್ ಜಿಫೈರ್, 1947ರ ಎಂಜಿ ಟಿಸಿ, 1948ರ ಓಲ್ಡ್್ಸ ಮೊಬೈಲ್, 1956 ಷೆವರ್ಲೆ ಬೇಲೇರ್ ಮತ್ತಿತರ ಕಾರುಗಳು ಖಾಸಗಿ ಸಂಗ್ರಾಹಕರಿಗೆ ಸೇರಿದ 80 ವಿಂಟೇಜ್ ಕಾರುಗಳು ಹಾಗೂ 30 ಮೋಟಾರ್ ಬೈಕ್​ಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts