More

    ಹವಾಮಾನ ಮಾಹಿತಿಗೆ ಮೇಘದೂತ್

    ಹಿರಿಯೂರು: ಕೇಂದ್ರ ಕೃಷಿ ಮತ್ತು ಭೂ ವಿಜ್ಞಾನ ಸಚಿವಾಲಯ ಅಭಿವೃದ್ಧಿಪಡಿಸಿರುವ ಮೇಘದೂತ್ ತಂತ್ರಾಂಶವಿರುವ ಸ್ಮಾರ್ಟ್ ಫೋನ್ ಬಳಸಿ ಹವಾಮಾನ ಆಧಾರಿತ ಕೃಷಿ ಚಟುವಟಿಕೆ ಮಾಹಿತಿಯನ್ನು ಸ್ಥಳೀಯ ಭಾಷೆಯಲ್ಲಿ ಪಡೆಯಬಹುದಾಗಿದೆ.

    ಈ ಕುರಿತು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಗ್ರಾಮಾಂತರ ಹವಾಮಾನ ಸೇವಾ ವಿಭಾಗ ಪ್ರಕಟಣೆ ತಿಳಿಸಿದೆ.

    ಆ್ಯಪ್‌ನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳಿಗೆ ತಗುಲಬಹುದಾದ ಕೀಟ, ರೋಗ ಬಾಧೆಗಳ ಬಗ್ಗೆ ಮಾಹಿತಿ ದೊರೆಯಲಿದೆ. ದೆಹಲಿಯ ಐಐಟಿಎಂ ಮತ್ತು ಐಎಂಡಿ ಸಹಯೋಗದೊಂದಿಗೆ ಹೈದರಬಾದ್‌ನ ಇಂಟರ್ ನ್ಯಾಷನಲ್ ಕ್ರಾಪ್ಸ್ ರಿಸರ್ಚ ಇನ್‌ಸ್ಟಿಟ್ಯೂಟ್ ಫಾರ್ ಸೆಮಿ-ಅರಿಡ್ ಟ್ರಾಪಿಕ್ಸ್‌ನಲ್ಲಿ ಡಿಜಿಟಲ್ ಆಗ್ರಿಕಲ್ಚರಲ್ ರಿಸರ್ಚ್‌ಥೀಮ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.

    ಇದು ಅಗತ್ಯಕ್ಕೆ ಅನುಗುಣವಾಗಿ ಹವಾಮಾನ ಮಾಹಿತಿ ಪೂರೈಸಲಿದೆ. ಕರ್ನಾಟಕ ಸೇರಿ ದೇಶದ ಒಟ್ಟು 150 ಜಿಲ್ಲೆಗಳಲ್ಲಿ ಪ್ರಯೋಗರ್ಥಾವಾಗಿ ಈ ತಂತ್ರಾಂಶ ಬಳಕೆಗೆ ಚಾಲನೆ ನೀಡಲಾಗಿದೆ. ಆಗಸ್ಟ್ 2019ರಲ್ಲಿ ಇದನ್ನು ಪರಿಚಯಿಸಲಾಗಿದ್ದು, ಕೆಲ ಲೋಪ ಸರಿಪಡಿಸಿ ಮತ್ತಷ್ಟು ರೈತ ಸ್ನೇಹಿಗೊಳಿಸಲಾಗಿದೆ.

    ಕನ್ನಡ, ತೆಲುಗು, ಮರಾಠಿ, ತಮಿಳು, ಹಿಂದಿ, ಇಂಗ್ಲಿಷ್ ಅಲ್ಲದೆ ಒಟ್ಟು 10 ಭಾಷೆಗಳಲ್ಲಿ ರೈತರಿಗೆ ಜಿಲ್ಲಾವಾರು ವಾರದಲ್ಲಿ ಎರಡು ಬಾರಿ ಹವಾಮಾನದ ಉಷ್ಣಾಂಶ, ಆರ್ದ್ರತೆ, ಮಳೆ, ಮೋಡ, ಗಾಳಿ ಬೀಸುವ ದಿಕ್ಕು ಮತ್ತು ವೇಗ ಹಾಗೂ ಮುಂದಿನ ಐದು ದಿನಗಳಲ್ಲಿ ಇರಬಹುದಾದ ಹವಾಮಾನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದೆ.

    ದೇಶದ ಆಯಾ ಜಿಲ್ಲೆಯ ಬೆಳೆ ಪದ್ಧತಿ ಮತ್ತು ಹವಾಮಾನ ಪರಿಸ್ಥಿತಿ ಭಿನ್ನವಾಗಿದ್ದು, ಆ್ಯಪ್ ಮೂಲಕ ಮಾಹಿತಿ ನೀಡುವ ಮತ್ತು ಆಪ್ಡೇಟ್ ಮಾಡುವ ಜವಾಬ್ದಾರಿಯನ್ನು ಗ್ರಾಮೀಣ ಕೃಷಿ ಮೌಸಮ್ ಸೇವಾ ವಿಭಾಗದ ನೋಡಲ್ ಅಧಿಕಾರಿ ಮತ್ತು ತಾಂತ್ರಿಕ ಅಧಿಕಾರಿಗಳಿಗೆ ವಹಿಸಲಾಗಿದೆ.
    ಪ್ರತಿ ಮಂಗಳವಾರ ಮತ್ತು ಶುಕ್ರವಾರ ಆಗ್ರೋ ಮೇಟ್‌ಫೀಲ್ಡ್ ಯೂನಿಟ್ ನೀಡುವ ಜಿಲ್ಲೆಯ ಬೆಳೆವಾರು ಸಲಹೆ ನೀಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts