More

    ನಾಡು ರಕ್ಷಣೆ ಪ್ರತಿಯೊಬ್ಬರ ಹೊಣೆ

    ಹಿರಿಯೂರು: ನಾಡು-ನುಡಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಹೊಣೆ ಆಗಿದ್ದು, ಇದನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ ಹೇಳಿದರು.

    ಕರ್ನಾಟಕ ಪ್ರಜಾಪರ ವೇದಿಕೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡಿಗರ ಹಬ್ಬ ಹಾಗೂ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಕರುನಾಡಿನ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ, ಕಲೆ-ಸಾಹಿತ್ಯ, ಮಾತೃ ಭಾಷೆ ಉಳಿಸಿ, ಬಳಸಿ, ಬೆಳೆಸುವ ಕುರಿತು ಯುವ ಸಮೂಹ ವಿಶೇಷ ಕಾಳಜಿ ವಹಿಸುವ ಅನಿವಾರ್ಯತೆ ಇದೆ ಎಂದರು.

    ವೇದಿಕೆ ಜಿಲ್ಲಾಧ್ಯಕ್ಷ ಬಿ.ಮಹಮ್ಮದ್ ರಫೀಕ್ ಮಾತನಾಡಿ, ಕನ್ನಡವನ್ನು ವಿಜ್ಞಾನ-ತ್ರಂತ್ರಜ್ಞಾನ, ಅನ್ನದ ಭಾಷೆಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ತಿಳಿಸಿದರು.

    ವೇದಿಕೆ ಅಧ್ಯಕ್ಷ ಎಂ.ಡಿ.ರಫಿ, ಆಸೀಫ್, ಪದಾಧಿಕಾರಿಗಳಾದ ಫಯಾಜ್, ಜಿ.ಎಲ್.ಮೂರ್ತಿ, ಕೆ.ಸಿ.ಹೊರಕೇರಪ್ಪ, ದಿವು ಶಂಕರ್, ಚಂದ್ರಶೇಖರ್, ರಂಗಪ್ಪ, ಗೌಡ, ಎಚ್.ಎಸ್.ನಾಗರಾಜ್, ನೆಲ್ಸನ್ ಡಿಸೋಜ, ಹಫೀಜ್ ಇತರರಿದ್ದರು.

    ಬೆಂಗಳೂರಿನ ಸಂತೋಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts