More

    ಸಂಕಷ್ಟದಲ್ಲಿರುವ ಜನತೆಗೆ ನೆರವಿನ ಹಸ್ತ

    ಹಿರಿಯೂರು: ಲಾಕ್‌ಡೌನ್ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಕಾಂಗ್ರೆಸ್ ಪಕ್ಷ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.

    ತಾಲೂಕಿನ ಧರ್ಮಪುರ, ಖಂಡೇನಹಳ್ಳಿ, ಹೊಸಕೆರೆ ಇತರೆಡೆ ಶುಕ್ರವಾರ ಕರೊನಾ ವೈರಸ್ ನಿಯಂತ್ರಣಕ್ಕಾಗಿ ರಾಸಾಯನಿಕ ದ್ರಾವಣ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿದರು.

    ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಧ್ವನಿಯಾಗಿ, ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

    ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರು, ಅನ್ನದಾತರು, ಸಾಮಾನ್ಯ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ರೈತರಿಂದ ನೇರವಾಗಿ ತರಕಾರಿ-ಹಣ್ಣು ಖರೀದಿಸಿ ಜನರಿಗೆ ವಿತರಿಸಲಾಗುತ್ತಿದೆ. ಸ್ವಂತ ಖರ್ಚಿನಲ್ಲಿ ರಾಸಾಯನಿಕ ಸಿಂಪಡಣೆ, ಆಹಾರ ಧಾನ್ಯದ ಕಿಟ್ ವಿತರಣೆ ಮೂಲಕ ಬಡವರಿಗೆ ನೆರವಿ ಹಸ್ತ ಚಾಚಲಾಗಿದೆ ಎಂದು ತಿಳಿಸಿದರು.

    ಎಪಿಎಂಸಿ ಮಾಜಿ ಅಧ್ಯಕ್ಷ ಈರಲಿಂಗೇಗೌಡ, ಕಾಂಗ್ರೆಸ್ ಮುಖಂಡರಾದ ಎಸ್.ಆರ್.ತಿಪ್ಪೇಸ್ವಾಮಿ, ನಾಗಣ್ಣ, ತಿಮ್ಮಯ್ಯ, ಪುಟ್ಟಸ್ವಾಮಿ ಗೌಡ, ಶ್ರವಣಗೆರೆ ಚಂದ್ರಶೇಖರ್, ಕೆ.ಎಸ್.ವೀರಣ್ಣ, ಅರಳಿಕೆರೆ ಕೃಷ್ಣಮೂರ್ತಿ, ಕೆ.ಟಿ.ಶ್ರೀನಿವಾಸ್, ಚಿದಾನಂದ್, ಡಿ.ಜಿ.ಗೋವಿಂದರಾಜ್, ತಿಮ್ಮರಾಯ, ವೆಂಕಟೇಶ್, ಜಿಯಾವುಲ್ಲಾ ಇತರರಿದ್ದರು.

    ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಮತ್ತೆ ಜನರ ಪ್ರೀತಿ, ವಿಶ್ವಾಸಗಳಿಸಿ ಫಿನಿಕ್ಸ್ ಹಕ್ಕಿಯಂತೆ ಎದ್ದು ಬರುವೆ. ಕೇಂದ್ರ -ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
    > ಡಿ.ಸುಧಾಕರ್ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts