More

    ಗಡಿ ಚೆಕ್‌ಪೋಸ್ಟ್‌ಗೆ ಎಸ್ಪಿ ರಾಧಿಕಾ ಭೇಟಿ

    ಹಿರಿಯೂರು: ತಾಲೂಕಿನ ಪಿ.ಡಿ.ಕೋಟೆ ಗ್ರಾಮದ ಬಳಿ ನಿರ್ಮಿಸಿರುವ ಇಂಟರ್ ಸ್ಟೇಟ್ ಚೆಕ್‌ಪೋಸ್ಟ್‌ಗೆ ಎಸ್ಪಿ ಜಿ.ರಾಧಿಕಾ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

    ಕರ್ನಾಟಕ-ಆಂಧ್ರ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ, ಸಿಸಿ ಟಿವಿ, ಸೂಚನಾ ಫಲಕ, ಸಿಗ್ನಲ್ ಲೈಟ್, ವಾಹನ ತಪಾಸಣೆ ಸೇರಿ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಶಿರಾ ತಾಲೂಕಿನಲ್ಲಿ ಕರೊನಾ ಸೋಂಕಿನಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ ಇತರೆಡೆ ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಆದ್ದರಿಂದ ಇಂಟರ್ ಸ್ಟೇಟ್ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಿ, ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

    ಠಾಣೆ ಹಂತದಲ್ಲಿ ಪಾಸ್: ಗಡಿ ಗ್ರಾಮದ ರೋಗಿಗಳು-ಜನರು ಮಣಿಪಾಲ್, ಬೆಂಗಳೂರು, ಮಂಗಳೂರು, ಶಿವಮೊಗ್ಗ ಇತರೆಡೆಗೆ ಚಿಕಿತ್ಸೆ ಪಡೆಯಲು ತೆರಳಲು ಪಾಸ್ ಅಗತ್ಯವಾಗಿದ್ದು, ಹಳ್ಳಿ ಜನತೆ ಜಿಲ್ಲಾಧಿಕಾರಿ-ಎಸ್ಪಿ ಹಂತದಲ್ಲಿ ಹೋಗಿ ಪಾಸ್ ಪಡೆಯುವುದು ಕಷ್ಟಸಾಧ್ಯ. ಆದ್ದರಿಂದ ಠಾಣಾ ವ್ಯಾಪ್ತಿಯಲ್ಲಿ ಪಾಸ್ ವಿತರಣೆಗೆ ಅನುಮತಿ ನೀಡಿದರೆ ಒಳಿತು ಎಂದು ಪೊಲೀಸ್ ಅಧಿಕಾರಿಗಳು ಎಸ್ಪಿ ಗಮನ ಸೆಳೆದರು. ಪ್ರತಿಕ್ರಿಯಿಸಿದ ರಾಧಿಕಾ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿ, ಹರಿಯಬ್ಬೆ, ಧರ್ಮಪುರ ಗ್ರಾಮದ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆಯುತ್ತಿರುವುದನ್ನು ಗಮನಿಸಿದ ಎಸ್ಪಿ ಅವರು ಸಿಬ್ಬಂದಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

    ತಾಲೂಕು ಆಡಳಿತ, ಆರೋಗ್ಯ, ಕಂದಾಯ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಉತ್ತಮ ಹೊಂದಾಣಿಕೆಯಿಂದ ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ, ಜನರನಲ್ಲಿ ಜಾಗೃತಿ ಮೂಡಿಸಿರುವ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಡಿವೈಎಸ್ಪಿ ರಮೇಶ್, ಸಿಪಿಐ ರಾಘವೇಂದ್ರ, ಪಿಎಸ್‌ಐ ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts