More

    ಚುಕ್ಕಾಣಿ ಹಿಡಿಯಲು ಪೈಪೋಟಿ

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    31 ಸದಸ್ಯ ಬಲದ ನಗರಸಭೆಯಲ್ಲಿ 13-ಕಾಂಗ್ರೆಸ್, 2-ಜೆಡಿಎಸ್, 6-ಬಿಜೆಪಿ, 9 ಪಕ್ಷೇತರ ಸದಸ್ಯರಿದ್ದಾರೆ. ಅಧಿಕಾರಕ್ಕೇರಲು 16 ಸದಸ್ಯ ಬಲದ ಅಗತ್ಯವಿದೆ.

    ಕಳೆದ ಬಾರಿ ಒಂದು ಸ್ಥಾನ ಗೆಲ್ಲದಿದ್ದರೂ ಕಾಂಗ್ರೆಸ್, ಜೆಡಿಎಸ್, ಬಿಎಸ್‌ಆರ್ ಹಾಗೂ ಪಕ್ಷೇತರರನ್ನು ಸೆಳೆದು ನಗರಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಈ ಅಂಶ ಬಿಜೆಪಿ ಗೆಲುವಿಗೂ ಪೂರಕವಾಯಿತು. ಪ್ರಸ್ತುತ ಖಾತೆ ತೆರೆದಿರುವ ಬಿಜೆಪಿ ಮತ್ತೆ ಕೈ ಪಡೆಗೆ ಮಾಸ್ಟರ್ ಸ್ಟ್ರೋಕ್ ನೀಡಲು ರಣತಂತ್ರ ರೂಪಿಸಿದೆ ಎನ್ನಲಾಗಿದೆ.

    ಆಪರೇಷನ್ ಕಮಲ ಭೀತಿ: ನಗರಸಭೆ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದ ಕಾರಣ ಬಿಜೆಪಿ ಕೇವಲ 6 ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದಲ್ಲಿ 13+2 ಸದಸ್ಯರಿದ್ದು, ಅಧಿಕಾರ ಏರಲು ಸ್ಪಷ್ಟ ಬಹುಮತವಿದೆ. ಆದರೆ, ಈ ಉತ್ಸಾಹದಲ್ಲಿರುವ ಕೈ ನಾಯಕರಿಗೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಲು ಬಿಜೆಪಿ ಪ್ಲಾನ್ ರೂಪಿಸತೊಡಗಿದೆ.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಜಿಲ್ಲೆಯಲ್ಲಿ ಐವರು ಶಾಸಕರು, ಒಬ್ಬರು ಸಂಸದರು ಇರುವುದು ಕಮಲ ಪಡೆಗೆ ಆನೆ ಬಲ ಬಂದಿದೆ. ನಗರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದರೆ ಮುಂದೆ ವಿಧಾನಸಭೆ ಚುನಾವಣೆಗೆ ನೆರವಾಗಲಿದೆ ಎಂಬುದು ಬಿಜೆಪಿ, ಕಾಂಗ್ರೆಸ್ ಲೆಕ್ಕಾಚಾರ.

    ಜೆಡಿಎಸ್‌ಗೆ ಅಳಿವು ಉಳಿವು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ 15 ಸ್ಥಾನ ಪಡೆದಿದ್ದು ಮೈತ್ರಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಳೆದ ಬಾರಿ 5 ಸ್ಥಾನ ಗಳಿಸಿದ್ದ ಜೆಡಿಎಸ್‌ನಿಂದ ಮೂವರು ಗೆದ್ದಿದ್ದರೂ ಪಾಂಡುರಂಗ ನಿಧನದಿಂದ 2 ಸ್ಥಾನಕ್ಕೆ ಕುಸಿದಿದೆ.

    ವಿಧಾನಸಭೆ ಚುನಾವಣೆಗೆ ಮೆಟ್ಟಿಲು: ನಗರಸಭೆ ಚುಕ್ಕಾಣಿ ಹಿಡಿವ ರಾಜಕೀಯ ತಂತ್ರಗಾರಿಕೆ ವಿಧಾನಸಭೆ ಚುನಾವಣೆಯ ಗೆಲುವಿಗೆ ಮೆಟ್ಟಿಲಾಗಲಿದ್ದು. ಕಳೆದ ಬಾರಿ ಕಮಲ ತಂತ್ರಗಾರಿಕೆಗೆ ಅಧಿಕಾರದಲ್ಲಿದ್ದರೂ ಗದ್ದುಗೆ ಕಳೆದುಕೊಂಡಿದ್ದ ಕೈ ಪಡೆ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ರಾಜಕೀಯ ದಾಳ ಉರುಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts