More

    ಪೌರಾಯುಕ್ತರ ವಿರುದ್ಧ ಸದಸ್ಯರ ದೂರು

    ಹಿರಿಯೂರು: ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಸರಿ ಇಲ್ಲ ಎಂದು ಆರೋಪಿಸಿ 22 ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

    ನಗರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ. ಹಂದಿ, ನಾಯಿಗಳ ಹಾವಳಿ ಮಿತಿ ಮೀರಿದೆ ಎಂದು ಆಪಾದಿಸಿದ್ದಾರೆ.

    ಜನನ-ಮರಣ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಲಾಗುತ್ತಿದೆ. ಕುಡಿವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ನಗರಸಭೆ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸೇರಿ ವಿವಿಧ ವಿಷಯಗಳ ಕುರಿತು ಸದಸ್ಯರು ದೂರಿದ್ದಾರೆ.

    ಸದಸ್ಯರಾದ ಅಜಯ್‌ಕುಮಾರ್, ಗುಂಡೇಶ್ ಕುಮಾರ್, ಮಮತಾ, ಶಂಶು ಉನ್ನೀಸಾ, ಕವಿತಾ, ಈ.ಮಂಜುನಾಥ್, ಸುರೇಖಾ, ಈರಲಿಂಗೇಗೌಡ, ಸಣ್ಣಪ್ಪ, ದೇವೀರಮ್ಮ, ಚಿತ್ರಜಿತ್ ಯಾದವ್, ಸಮೀವುಲ್ಲಾ ಇತರರಿದ್ದರು.

    ಶಾಸಕರ ಪತಿ ವಿರುದ್ಧ ಆಕ್ರೋಶ: ನಗರಸಭೆ ಆಡಳಿತದಲ್ಲಿ ಶಾಸಕಿ ಕೆ.ಪೂರ್ಣಿಮಾ ಅವರ ಪತಿ ವಿನಾಕಾರಣ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿ ಕಾಂಗ್ರೆಸ್-ಜೆಡಿಎಸ್ ಹಾಗೂ ಕೆಲ ಪಕ್ಷೇತರರು ಸೇರಿ 22 ಸದಸ್ಯರು ಡಿಸಿಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts