More

    ಹಿರಿಯೂರಿನಲ್ಲಿ ಸಂಭ್ರಮದ ದಿಂಡಿ ಉತ್ಸವ

    ಹಿರಿಯೂರು: ಇಲ್ಲಿನ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ಮೂರು ದಿನಗಳ ಕಾಲ ದಿಂಡಿ ಉತ್ಸವ ಸಂಭ್ರಮದಿಂದ ನೆರವೇರಿತು.

    ಉತ್ಸವ ನಿಮಿತ್ತ ಪಂಡರಿ ಭಜನೆ, ಕಲ್ಯಾಣೋತ್ಸವ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ವಿಠ್ಠಲ ರುಕ್ಮಿಣಿ ದೇವರ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು.

    ಪಾಂಡುರಂಗನ ಭಕ್ತರು ಭಜನೆ-ಭಕ್ತಿಗೀತೆಗಳನ್ನು ಹಾಡಿದರು. ದಾರಿಯುದ್ದಕ್ಕೂ ಭಕ್ತರ ಮನೆಗಳಲ್ಲಿ ಶ್ರೀಸ್ವಾಮಿಗೆ ಪೂಜೆ ನೆರವೇರಿಸಲಾಯಿತು.

    ಉತ್ಸವದ ನೇತೃತ್ವ ವಹಿಸಿದ್ದ ಶ್ರೀ ನಾಮದೇವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಭಗವಂತನ ನಾಮಸ್ಮರಣೆಯಿಂದ ಜೀವನ ಪಾವನವಾಗುತ್ತದೆ. ಪ್ರತಿದಿನ ಪಾಂಡುರಂಗನ ಧ್ಯಾನ ಮಾಡಬೇಕು. ವಿಠ್ಠಲ ವಿಠ್ಠಲ ಎಂದು ಭಜನೆ ಮಾಡಿದರೆ ಅನೇಕ ಕಾಯಿಲೆಗಳು ದೂರ ಆಗುತ್ತವೆ. ವರ್ಷಕ್ಕೆ ಒಮ್ಮೆಯಾದರೂ ಪಂಢರಾಪುರಕ್ಕೆ ಹೋಗಿಬನ್ನಿ. ಸಾಧ್ಯವಾಗದಿದ್ದರೆ ನಿಮ್ಮೂರಲ್ಲಿ ಇರುವ ಆತನ ದೇಗುಲಕ್ಕೆ ಹೋಗಿ ಭಕ್ತಿಯಿಂದ ನಮಿಸಿದರೆ ಸಂಕಷ್ಟಗಳು ದೂರಾಗುತ್ತವೆ ಎಂದರು.

    ಶ್ರೀ ಸುಬೋಧಾನಂದ ಚೈತನ್ಯ ಸ್ವಾಮೀಜಿ ಮಾತನಾಡಿ, ನಾವು ಸಮುದ್ರದಲ್ಲಿನ ಮುತ್ತಿನ ಹಾಗೆ ಬದುಕು ರೂಪಿಸಿಕೊಳ್ಳಬೇಕು ಎಂದರು.

    ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನದಾಸೋಹ ನಡೆಯಿತು. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಎನ್. ಮಂಜುನಾಥ್ ಘಾಗರವಾಳೆ, ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts