More

    ರಸ್ತೆ ಕಾಮಗಾರಿ ವಿಳಂಬಕ್ಕೆ ಖಂಡೇನಹಳ್ಳಿ ಗ್ರಾಮಸ್ಥರ ಆಕ್ರೋಶ


    ಹಿರಿಯೂರು: ತಾಲೂಕಿನ ಖಂಡೇನಹಳ್ಳಿ ಗ್ರಾಮದಿಂದ ಆಂಧ್ರ ಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

    2019-20ನೇ ಸಾಲಿನಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 1 ಕೋಟಿ ರೂ. ಮಂಜೂರಾಗಿದ್ದು, ಕೆಆರ್‌ಡಿಐಎಲ್ ಸಂಸ್ಥೆಗೆ ಕಾಮಗಾರಿ ನಿರ್ವಹಣೆ ವಹಿಸಿದ್ದು, ಎರಡು ವರ್ಷವಾದರೂ ಮುಗಿದಿಲ್ಲ. ಪರಿಣಾಮ ಗಡಿಭಾಗದ ಬೇತೂರು, ಹೊಸಕೆರೆ, ಖಂಡೇನಹಳ್ಳಿ, ಬೀರನಹಳ್ಳಿ, ಬುಡರಕುಂಟೆ, ಕಣಜನಹಳ್ಳಿ ಗ್ರಾಮಸ್ಥರು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

    ಅಪೂರ್ಣ ಕಾಮಗಾರಿ ನಿರ್ವಹಿಸಿದ್ದರೂ ಗುತ್ತಿಗೆದಾರನಿಗೆ ಬಿಲ್ ಪಾವತಿಸಲಾಗಿದೆ ಎಂದು ಗ್ರಾಮಸ್ಥರು ದೂರಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ನಾಗೇಂದ್ರಪ್ಪ, ಹನುಮಂತರಾಯಪ್ಪ, ಕೃಷ್ಣಮೂರ್ತಿ, ಗ್ರಾಪಂ. ಮಾಜಿ ಅಧ್ಯಕ್ಷೆ ಶಾಂತಮ್ಮ ನರಸಿಂಹಮೂರ್ತಿ, ವೆಂಕಟೇಶ್, ಗೋವಿಂದರಾಜ್, ಗುಜ್ಜಾರಪ್ಪ, ರಘುವೀರ್, ನಿಂಗಣ್ಣ, ನವೀನ್, ರಮೇಶ್, ತಿಪ್ಪೇಸ್ವಾಮಿ, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts