ನಾಗೇನಹಳ್ಳಿ ನಾಲೆ ದುರಸ್ತಿಗೆ ಆಗ್ರಹ

blank

ಹಿರಿಯೂರು: ವಾಣಿ ವಿಲಾಸ ಸಾಗರದ ನಾಲೆಗಳ ಜಂಗಲ್ ತೆರವು, ಹೂಳು ತೆಗೆಯುವ ಕಾಮಗಾರಿ ಕ್ರಿಯಾಯೋಜನೆಗೆ ಟಿ.ನಾಗೇನಹಳ್ಳಿ ಬಳಿಯ ನಾಲೆಯನ್ನು ಸೇರಿಸಿಲ್ಲ ಎಂದು ಆರೋಪಿಸಿ ಬುಧವಾರ ರೈತ ಸಂಘ ಪದಾಧಿಕಾರಿಗಳು ನಾಲೆ ಬಳಿ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ನಾಲೆ ಸ್ವಚ್ಛಗೊಳಿಸುವ ಕಾಮಗಾರಿಯ ಕ್ರಿಯಾಯೋಜನೆ ತಯಾರಿಸುವಾಗ ಟಿ.ನಾಗೇನಹಳ್ಳಿ ಭಾಗದ ನಾಲೆ ಸೇರಿಸಿಲ್ಲ. ಇದರಿಂದ ರಂಗನಾಥಪುರ, ನಾಗೇನಹಳ್ಳಿ, ಉಪ್ಪಳಗೆರೆ, ಕೂಡ್ಲಹಳ್ಳಿ, ಆರನಕಟ್ಟೆ ಹಾಗೂ ದೊಡ್ಡಕಟ್ಟೆ ಗ್ರಾಮ ವ್ಯಾಪ್ತಿಯ 1500 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವುದು ಅಸಾಧ್ಯವಾಗಿದೆ. ಸಂಬಂಧಪಟ್ಟವರು ಕೂಡಲೇ ನಾಲೆಗಳಲ್ಲಿ ಬೆಳೆದ ಜಂಗಲ್ ತೆರವುಗೊಳಿಸಿ ಹೂಳು ತೆಗೆಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಹಾಸ ಮಾತನಾಡಿ, ಕಂಟ್ರ್ಯಾಕ್ಟರ್ ಅವರಿಗೆ ಹೇಳಿ ಜಂಗಲ್ ತೆರವುಗೊಳಿಸಿ ನೀರು ಹೋಗಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ರೈತ ಮುಖಂಡರಾದ ಆರನಕಟ್ಟೆ ಶಿವಕುಮಾರ್, ಸಿದ್ದರಾಮಣ್ಣ, ಒ.ಶಿವಕುಮಾರ್, ರಂಗನಾಥಪುರ ತಿಮ್ಮಣ್ಣ, ರಾಘವೇಂದ್ರ, ಕೃಷ್ಣಪ್ಪ, ಲೋಕೇಶಗೌಡ, ಚಂದ್ರಶೇಖರ್, ವಿರೇಂದ್ರನಾಥ್, ಗಿರೀಶ್ ಇತರರಿದ್ದರು.

Share This Article

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…