More

    ಹಿರಿಯಡ್ಕದಲ್ಲಿ ರೌಡಿಶೀಟರ್ ಹತ್ಯೆ ಪ್ರಕರಣ, 4 ತನಿಖಾ ತಂಡ ರಚನೆ

    ಉಡುಪಿ/ ಕಾರ್ಕಳ: ಹಿರಿಯಡ್ಕ ಪೇಟೆಯಲ್ಲಿ ಶುಕ್ರವಾರ ನಡೆದ ಕೊಲೆ ಕೃತ್ಯದಲ್ಲಿ ಮಂಗಳೂರಿನ ಕೋಡಿಕೆರೆ ತಂಡ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೋಡಿಕೆರೆ ತಂಡ ಹಾಗೂ ಕಿಶನ್ ನಡುವಣ ಹಣಕಾಸು ವೈಷಮ್ಯ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಕಿಶನ್ ಜತೆಗಿದ್ದ ದಿವ್ಯರಾಜ್ ಶೆಟ್ಟಿ ಎಂಬುವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಗಳ ಪತ್ತೆ ಸಲುವಾಗಿ 4 ತನಿಖಾ ತಂಡ ರಚನೆ ಮಾಡಿದ್ದು, ಬೆಂಗಳೂರು ಮತ್ತು ಮಂಗಳೂರಿಗೆ ಪೊಲೀಸರ ತಂಡ ತೆರಳಿದೆ.

    ಇರ್ವತ್ತೂರಿನಲ್ಲಿ ಕಾರು ಪತ್ತೆ:ಕಿಶನ್ ಹತ್ಯೆ ಪ್ರಕರಣದ ಆರೋಪಿಗಳು ಬಳಸಿದ್ದ ಕಾರು ಉಭಯ ಜಿಲ್ಲಾ ಗಡಿಭಾಗ ಇರ್ವತ್ತೂರಿನಲ್ಲಿ ಪತ್ತೆಯಾಗಿದೆ. ಇರ್ವತ್ತೂರಿನ ಹಾಡಿಯ ಬಳಿಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಕಾರನ್ನು ನಿಲ್ಲಿಸಿದ್ದು, ಇದೇ ಕಾರು ಹಿರಿಯಡ್ಕದ ಕೊಲೆಗೆ ಬಳಸಲಾಗಿತೆಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ಪೊಲೀಸರು ವಶಪಡಿಸಿದ್ದಾರೆ.

    ಧರ್ಮಸ್ಥಳದತ್ತ ಪರಾರಿ: ಕೃತ್ಯದಲ್ಲಿ ಭಾಗಿಯಾದವರಲ್ಲಿ ಮೂವರು ಧರ್ಮಸ್ಥಳ ಕಡೆಗೆ ಪರಾರಿಯಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಇನ್ನೂ ಮೂವರು ಕಾರ್ಕಳ ಪರಿಸರದಲ್ಲಿ ಬೀಡು ಬಿಟ್ಟಿದ್ದಾರೆನ್ನಲಾಗಿದೆ. ಕೊಲೆಗೀಡಾದ ಕಿಶನ್‌ಹೆಗ್ಡೆ ಬುಧವಾರ ತನ್ನ ಜತೆಗಾರರೊಂದಿಗೆ ಕಾರ್ಕಳಕ್ಕೆ ಬಂದಿದ್ದ ಎಂಬ ಮಾಹಿತಿಯೂ ಲಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts