More

  ಹಿರೇಜಂತಕಲ್ ಖಬರಸ್ತಾನ್ ಭೂಮಿ ಸರ್ವೇ ಮಾಡಿ – ಮುಸ್ಲಿಂ ಸಮುದಾಯದ ಒತ್ತಾಯ

  ಗಂಗಾವತಿ: ನಗರದ ಹಿರೇಜಂತಕಲ್ ಖಬರಸ್ತಾನ್ ಭೂಮಿ ಹದ್ದು ಬಸ್ತಿಗೆ ಸರ್ವೇ ಕೈಗೊಳ್ಳುವಂತೆ ಒತ್ತಾಯಿಸಿ ಸುನ್ನಿ ಖಬರಸ್ಥಾನ ಕಮಿಟಿ ಸದಸ್ಯರು ತಾಲೂಕು ಆಡಳಿತ ಸೌಧದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಸಲ್ಲಿಸಿದರು.

  ಇದನ್ನೂ ಓದಿ: ಕಾಂಗ್ರೆಸ್​ನ ಮತಗಳಿಗೆ ಕೈ ಹಾಕಿದ ಜನಾರ್ದನ ರೆಡ್ಡಿ! ಗಣಿ ಒಡೆಯನ ಪಾಳಯಕ್ಕೆ ಕುರುಬ, ಮುಸ್ಲಿಂ ಸಮುದಾಯದ ಮುಖಂಡರು

  ಕಮಿಟಿ ಅಧ್ಯಕ್ಷ ಗಸ್ತಿ ಬುಡನ್‌ಸಾಬ್ ಮಾತನಾಡಿ, ನಗರದ ಹಿರೇಜತಂಕಲ್ ಸ.ನಂ.61ಕ್ಕೆ ಸೇರಿದ 1.39 ಎಕರೆ ಭೂಮಿಯನ್ನು ಸುನ್ನಿ ಖಬರಸ್ತಾನ್‌ಗೆ ನೀಡಿದ್ದು, ಕೆಲವೆಡೆ ಒತ್ತುವರಿಯಾಗಿದೆ. ಸರ್ವೇ ಮೂಲಕ ಹದ್ದುಬಸ್ತು ಮಾಡಿಕೊಡುವಂತೆ 2021ರಲ್ಲಿ ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

  ಒತ್ತುವರಿ ಮಾಡಿಕೊಂಡ ಕೆಲವರು ಬಿಟ್ಟುಕೊಡುವ ಬಗ್ಗೆ ಒಪ್ಪಿಕೊಂಡಿದ್ದು, ಕೂಡಲೇ ಸರ್ವೇ ಕೈಗೊಳ್ಳುವ ಮೂಲಕ ಹದ್ದುಬಸ್ತು ಮಾಡಿಕೊಡುವಂತೆ ಮನವಿ ಮಾಡಿದರು. ಪದಾಧಿಕಾರಿಗಳಾದ ಖಮರ್‌ಪಾಷಾ, ಎಂ.ಡಿ.ಗೌಸ್, ಎಸ್.ಹುಸೇನ್‌ಸಾಬ್, ಅಲಿ ಸಾಬ್, ಮಹೆಬೂಬ್‌ಸಾಬ್, ಇಬ್ರಾಹಿಂ ಸಾಬ್, ಇರ್ಷಾದ್, ಖುತುಬುದ್ದೀನ್, ವಲೀಸಾಬ್, ಬಾಬಾಸಾಬ್, ನವಾಬ್ ಸಾಬ್, ಜೀಲಾನ್‌ಸಾಬ್, ಉಸ್ಮಾನ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts