More

    ಕಾಯಕಲ್ಪಕ್ಕೆ ಕಾದಿದೆ ಹಿರೇಬಾವಿ

    ನರೇಗಲ್ಲ: ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಹಿರೇಬಾವಿ ಹಂದಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಬಾವಿ ತುಂಬ ಕಸದ ರಾಶಿ ತುಂಬಿಕೊಂಡಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಂದಾಗಿ ಐತಿಹಾಸಿಕ ಬಾವಿ ಅವನತಿಯ ಹಾದಿ ಹಿಡಿದಿದೆ. ಒಂದು ಎಕರೆ ಪ್ರದೇಶದಲ್ಲಿ ನಿರ್ವಣವಾಗಿದ್ದ ಬಾವಿಯ ಅರ್ಧದಷ್ಟು ಜಾಗ ಒತ್ತುವರಿಯೂ ಆಗಿದೆ.

    ಕ್ರಿ.ಶ. 951ರಲ್ಲಿ ಹಿರೇಬಾವಿ ಹಾಗೂ ಹಿರೇಕೆರೆ ನಿರ್ವಣವಾಗಿದೆ ಎಂದು ಹಿರೇಬಾವಿ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಕಾಲಾಂತರದಲ್ಲಿ ಪಕ್ಕದಲ್ಲೇ ಇದ್ದ ಐತಿಹಾಸಿಕ ನಾರಾಯಣ ದೇವಾಲಯದ ಪುಷ್ಕರಣಿಯಾಗಿ ಈ ಬಾವಿಯನ್ನು ಮಾರ್ಪಡಿಸಲಾಯಿತು ಎನ್ನುತ್ತಾರೆ ಸಂಶೋಧಕರು. ಮಹತ್ವದ ಹಿರೇಬಾವಿ ಇಂದು ಕಸದ ತಿಪ್ಪೆಯಾಗಿದೆ. ಬಾವಿಯಲ್ಲಿನ ಕಸ ಕೊಳೆತು ದುರ್ನಾತ ಬೀರುತ್ತಿದೆ. ಪುರಾತತ್ವ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ್ಕೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

    ಹಿರೇಬಾವಿಯ ಪಕ್ಕದಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಿತ್ಯವೂ ಧಾರ್ವಿುಕ ಕಾರ್ಯಕ್ರಮ ನಡೆಯುವುದರಿಂದ ಇಲ್ಲಿಗೆ ಬರುವ ಭಕ್ತರು ದುರ್ನಾತದಿಂದ ರೋಸಿ ಹೋಗಿದ್ದಾರೆ. ದೇವಾಲಯದ ಬಳಿಯೇ ಶುದ್ಧ ಕುಡಿಯುವ ನೀರಿನ ಘಟಕವಿದೆ. ನೀರು ತರಲು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

    ಉದ್ಘಾಟನೆಯಾಗದ ಹೈಟೆಕ್ ಶೌಚಗೃಹ

    ಪಟ್ಟಣ ಪಂಚಾಯಿತಿ 2018-19ನೇ ಎಸ್​ಎಫ್​ಸಿಯ 14 ಲಕ್ಷ ರೂ. ಅನುದಾನದಲ್ಲಿ ಹಿರೇಬಾವಿ ಪಕ್ಕದಲ್ಲಿ ಹೈಟೆಕ್ ಶೌಚಗೃಹ ನಿರ್ವಣವಾಗಿದ್ದು, ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಶೌಚಗೃಹಕ್ಕೆ ನೀರು ಮತ್ತು ವಿದ್ಯುತ್ ಸೌಕರ್ಯವಿಲ್ಲ. ಇದರಿಂದಾಗಿ, ಮಹಿಳೆಯರು ಶೌಚಕ್ಕಾಗಿ ಬಾವಿ ಸುತ್ತಲಿನ ಪ್ರದೇಶವನ್ನೇ ಅವಲಂಬಿಸಿದ್ದಾರೆ. ಹಂದಿಗಳ ಹಾವಳಿ ಹೆಚ್ಚಾಗಿ, ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ.

    ಹಿರೇಬಾವಿ ಸಂಪೂರ್ಣ ಹಾಳಾಗಿದೆ. ಪಪಂ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಮಾನ ಮನಸ್ಕ ಯುವಕರ ತಂಡದವರು ಬಾವಿ ಸ್ವಚ್ಛಗೊಳಿಸಲು ಮುಂದಾಗಿದ್ದರು. ಆದರೆ, ಪಪಂ ಮತ್ತು ಸಾರ್ವಜನಿಕರು ಸಹಕರಿಸಲಿಲ್ಲ. ಹೀಗಾಗಿ ಸ್ವಚ್ಛತಾ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇನ್ನಾದರೂ, ಸಂಬಂಧಪಟ್ಟವರು ಬಾವಿಯ ಜಾಗ ಒತ್ತುವರಿ ತೆರವುಗೊಳಿಸಿ, ಅದನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು.

    | ರವಿ ಗೋರ್ಲಿ, ಶಿವು ಸಂಗನಾಳ ಸ್ಥಳೀಯರು

    ಹಿರೇಬಾವಿಯ ವಿಸ್ತೀರ್ಣ ಅಳತೆ ಮಾಡುವಂತೆ ಭೂಮಾಪನ ಇಲಾಖೆಗೆ ಪತ್ರ ಬರೆಯಲಾಗುವುದು. ಹೈಟೆಕ್ ಸುಲಭ ಶೌಚಗೃಹಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಂಡು ಪ್ರಾರಂಭಿಸಲಾಗುವುದು. ಬಾವಿಯ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಸೂಚಿಸಲಾಗುವುದು.

    | ಮಹೇಶ ನಿಡಶೇಶಿ, ಮುಖ್ಯಾಧಿಕಾರಿ ಪಪಂ ನರೇಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts