More

    ಅಸ್ಸಾಂನ 15ನೇ ಸಿಎಂ ಆದ ಹಿಮಂತ ಬಿಸ್ವ ಸರ್ಮ

    ಗೌಹಾಟಿ : ಹಿರಿಯ ಶಾಸಕ ಹಾಗೂ ಬಿಜೆಪಿ ಮುಖಂಡ ಹಿಮಂತ ಬಿಸ್ವ ಸರ್ಮ ಅವರು ಇಂದು ಅಸ್ಸಾಂನ 15ನೇ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಸ್ಸಾಂನಲ್ಲಿ ಭಾರೀ ಬಹುಮತದಿಂದ ಗೆದ್ದಿರುವ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ದಾಯಿತ್ವವನ್ನು ಸರ್ಮ ವಹಿಸಿಕೊಂಡಿದ್ದಾರೆ.

    ಗೌಹಾಟಿಯ ಸ್ರೀಮಂತ ಸಂಕರದೇವ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಮತ್ತು ಇತರ ನಾಯಕರು, ವಿರೋಧ ಪಕ್ಷದ ನಾಯಕರು ಭಾಗವಹಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಚಿತ್ರಗಳೊಂದಿಗೆ ಟ್ವೀಟ್​ ಮಾಡಿರುವ ಸಿಎಂ ಸರ್ಮ, “ರಾಜ್ಯ ಸರ್ಕಾರವು ಅಸ್ಸಾಂ ಜನರ ಸೇವೆ ಮಾಡಲು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರಪ್ರೇಮದ ಪವಿತ್ರ ಆದರ್ಶಗಳನ್ನು ಪಾಲಿಸಲು ಬದ್ಧವಾಗಿದೆ” ಎಂದಿದ್ದಾರೆ.

    52 ವರ್ಷ ವಯಸ್ಸಿನ ಸರ್ಮ ಅವರು ಅಸ್ಸಾಂನ ಜಕುಲ್​ಬರಿ ವಿಧಾನಸಭಾ ಕ್ಷೇತ್ರದಿಂದ 2001 ರಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಮುಂಚಿನ ಬಿಜೆಪಿ ಸರ್ಕಾರದಲ್ಲಿ ಪ್ರಮುಖ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. (ಏಜೆನ್ಸೀಸ್)

    ಸ್ವಕ್ಷೇತ್ರದಲ್ಲೇ‌ ಇರಲು ಸಂಸದ-ಶಾಸಕರಿಗೆ ಸಿಎಂ ಬಿಎಸ್​ವೈ ಸಲಹೆ

    ಕರ್ಫ್ಯೂ ಇದೆ ಅಂತ ಆ್ಯಂಬುಲೆನ್ಸ್​ನಲ್ಲಿ ಪ್ರಯಾಣಿಸಿದ ಬಿಗ್​ ಬಾಸ್​ ಸ್ಪರ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts