Himachal Pradesh: ರೆಸ್ಟೋರೆಂಟ್ ಮಾಲೀಕರ ವ್ಯವಸ್ಥಾಪಕರ ಹೆಸರು ಪ್ರದರ್ಶನ ಕಡ್ಡಾಯ

hm
Published on

ನವದೆಹಲಿ: ಉತ್ತರ ಪ್ರದೇಶದ ಬೆನ್ನಲ್ಲೇ ಹಿಮಾಚಲ ಪ್ರದೇಶದ Himachal Pradesh ಕಾಂಗ್ರೆಸ್ ಸರ್ಕಾರ ಅಲ್ಲಿನ ಢಾಬಾಗಳು, ರೆಸ್ಟೋರೆಂಟ್​ಗಳು ಸೇರಿದಂತೆ ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳಲ್ಲಿ ಅವುಗಳ ಮಾಲೀಕರು, ವ್ಯವಸ್ಥಾಪಕರ ಹಾಗೂ ಸಿಬ್ಬಂದಿ ಹೆಸರುಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಹೇಳಿದೆ.

ಪಾರದರ್ಶಕತೆ ಮತ್ತು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಜಾರಿ ಮಾಡುತ್ತಿರುವುದಾಗಿ ಹೇಳಿದೆ. ಬುಧವಾರದಿಂದ ರಾಜ್ಯಾದ್ಯಂತ ಎಲ್ಲ ಆಹಾರ ಸಂಸ್ಥೆಗಳಲ್ಲಿ ಮಾಲೀಕರು ಮತ್ತು ವ್ಯವಸ್ಥಾಪಕರು ಮತ್ತು ವ್ಯವಸ್ಥಾಪಕರ ಹೆಸರು, ವಿಳಾಸಗಳನ್ನು ಪ್ರದರ್ಶಿಸಬೇಕು ಎಂದು ಆದೇಶಿಸಲಾಗಿದೆ.

ಈ ಕುರಿತು ಟ್ಟೀಟ್ ಮಾಡಿರುವ ರಾಜ್ಯ ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್, "ಹಿಮಾಚಲ ಪ್ರದೇಶದಲ್ಲಿರುವ ಢಾಬಾಗಳು, ರೆಸ್ಟೋರೆಂಟ್​ಗಳು ಸೇರಿದಂತೆ ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳಲ್ಲಿ ಅವುಗಳ ಮಾಲೀಕರು, ವ್ಯವಸ್ಥಾಪಕರ ಹಾಗೂ ಸಿಬ್ಬಂದಿ ಹೆಸರುಗಳಿರುವ ಗುರುತಿನ ಚೀಟಿಯನ್ನು ಪ್ರದರ್ಶಿಸುತ್ತವೆ. ಇದರಿಂದ ಜನರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುವುದಿಲ್ಲ" ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಢಾಬಾ, ರೆಸ್ಟೋರೆಂಟ್​ಗಳಲ್ಲಿ ಆಹಾರ ಪದಾರ್ಥಗಳು ಹಾಗು ಹಣ್ಣಿನ ಜ್ಯೂಸ್​ನಲ್ಲಿ ಮೂತ್ರ ಸೇರಿಸಲಾಗುತ್ತಿದೆ. ಅವುಗಳ ಮೇಲೆ ಉಗುಳಲಾಗುತ್ತಿದೆ ಎಂಬ ವ್ಯಾಪಕ ಆರೋಪಗಳ ಕೇಳಿ ಬಂದ ಬೆನ್ನಲ್ಲೇ ಸರ್ಕಾರ ಈ ನಿರ್ದೇಶನ ನೀಡಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net