More

    ದೆಹಲಿ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಬಿಜೆಪಿ ಸಂಸದ ರಾಮ್​ ಸ್ವರೂಪ್​ ಶರ್ಮಾ ಶವ ಪತ್ತೆ

    ನವದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್​ ಸ್ವರೂಪ್​ ಶರ್ಮಾ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಅವರ ದೆಹಲಿ ನಿವಾಸದಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

    ಮೂಲಗಳ ಪ್ರಕಾರ ಸಂಸದರು ತಮ್ಮ ನಿವಾಸದಲ್ಲಿ ಬೆಳಗ್ಗೆ 7 ಸಮಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯೋ? ಎಂಬುದನ್ನು ತನಿಖೆ ನಡೆಸುತ್ತಿದ್ದೇವೆಂದು ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿರಿ: ಭವಾನಿ ರೇವಣ್ಣ ಶಾಸಕಿ ಆಗ್ತಾರಾ? ಈ ಕುರಿತು ದೇವೇಗೌಡರ ಸೊಸೆ ಹೇಳಿದ್ದೇನು?

    ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಂದು ನಡೆಯಬೇಕಿದ್ದ ಸಂಸದೀಯ ಸಭೆಯನ್ನು ಬಿಜೆಪಿ ರದ್ದು ಮಾಡಿದೆ.

    ರಾಮ್​ ಸ್ವರೂಪ್​ ಶರ್ಮಾ ಅವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜಲ್ಪೆಹರ್​ ಗ್ರಾಮದಲ್ಲಿ 1958, ಜೂನ್​ 10ರಂದು ಜನಿಸಿದರು. ಶರ್ಮಾ ಅವರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

    ಶರ್ಮಾ ಅವರು 16 ಮತ್ತು 17ನೇ ಲೋಕಸಭೆಗೆ ಮಂಡಿ ಕ್ಷೇತ್ರದಿಂದ ಕ್ರಮವಾಗಿ 2014 ಮತ್ತು 2019ರಲ್ಲಿ ಆಯ್ಕೆಯಾಗಿದ್ದರು. (ಏಜೆನ್ಸೀಸ್​)

    ತಾಯಿಯ ಕಪಾಳಕ್ಕೆ ಬಾರಿಸಿದ ಮಗ: ಸ್ಥಳದಲ್ಲೇ ಪ್ರಾಣ ಬಿಟ್ಟ ಜನ್ಮದಾತೆ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಪ್ಲೀಸ್​ ಬಿಟ್ಟು ಹೋಗ್ಬೇಡ.. ಕಾಲಿಡಿದು ಗೋಗರೆದ್ರೂ ಬೈಕ್​ ಏರಿ ಮತ್ತೊಬ್ಬನ ಜತೆ ಹೊರಟೇ ಹೋದ್ಳು!

    ಲಾರಿ ಡಿಕ್ಕಿಯ ರಭಸಕ್ಕೆ ಕುಸಿದ ಹೋಟೆಲ್ ಕಟ್ಟಡ: ಅದೃಷ್ಟವಶಾತ್​ ತಪ್ಪಿತು ಭಾರೀ ಅನಾಹುತ! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts