More

    ಮತಾಂಧತೆ ಬಿಟ್ಟು ಮಕ್ಕಳಲ್ಲಿ ಬೌದ್ಧಿಕ ಜ್ಞಾನ ಬಿತ್ತಿ

    ಮೈಸೂರು: ರಾಜಕೀಯ ಪಕ್ಷಗಳು, ಸಂಘಟನೆಗಳು ರಾಜ್ಯದ ಯುವ ಸಮುದಾಯಕ್ಕೆ ಮತಾಂಧತೆಯ ಅಫೀಮುನ್ನು ಹಂಚುವುದನ್ನು ನಿಲ್ಲಿಸಿ ಮಕ್ಕಳಲ್ಲಿ ಶಿಕ್ಷಣದ ಬೌದ್ಧಿಕ ಜ್ಞಾನ ಬಿತ್ತಬೇಕು ಎಂದು ಎಂದು ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಒತ್ತಾಯಿಸಿದ್ದಾರೆ.


    ಶಾಲೆ, ಕಾಲೇಜಿನ ಆವರಣದಲ್ಲಿ ಇರಬೇಕಾದ್ದು ಹಿಜಾಬ್, ಕೇಸರಿ ಶಾಲಿನ ವಿವಾದವಲ್ಲ. ಜ್ಞಾನದ ಹಸಿವು ಮಾತ್ರ. ಇದನ್ನು ಇಂದಿನ ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು.
    ಉನ್ನತ ವ್ಯಾಸಂಗ ಮುಗಿಸಿ, ಕೆಲಸಕ್ಕೆ ಸೇರುವಾಗ ನಿಮ್ಮ ಧರ್ಮದವರು ನಡೆಸುವ ಕಂಪನಿಗಳಲ್ಲಿ ಕೆಲಸ ಪಡೆಯುತ್ತೀರಾ?. ಅದು ಸಾಧ್ಯವೇ? – ಸಾಧುವೇ?. ನಿಮ್ಮಲ್ಲಿ ಅರ್ಹತೆ ಇಲ್ಲದಿದ್ದರೂ ನೀವು ತಮ್ಮ ಧರ್ಮದವರು ಎಂದು ಆ ಕಂಪನಿ ಕೆಲಸ ಕೊಡುವುದೇ? ಯೋಚಿಸಿ. ನಿಮ್ಮ ಜ್ಞಾನವೇ ನಿಮ್ಮನ್ನು ಕೈಹಿಡಿಯುವುದು, ಅದನ್ನು ನೀವು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಿ.


    ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೀಟುಗಳಿಗೆ ನೀಟ್ ಪರೀಕ್ಷೆ ಜಾರಿಯಾಗಿ ರಾಜ್ಯದ ಯುವಕರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಸಿಬಿಎಸ್‌ಇ ಪಠ್ಯಕ್ರಮ ಆಧಾರಿತ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ರಾಜ್ಯ ಪಠ್ಯಕ್ರಮ ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಸಿಗದೆ ಸಿಕ್ಕಿದ ಕೋರ್ಸ್ ಓದಿ ನಿರುದ್ಯೋಗಿಗಳಾಗುತ್ತಿದ್ದಾರೆ.

    ಈ ಬಗ್ಗೆ ವಿದ್ಯಾರ್ಥಿಗಳು, ರಾಜಕೀಯ ನಾಯಕರು, ಸಂಘಟನೆಗಳು ಹೋರಾಟ ಮಾಡಬೇಕು. ರಾಜ್ಯದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶದಲ್ಲಿ, ಪ್ರವೇಶ ಪರೀಕ್ಷೆಗಳಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಿ, ನೀಟ್‌ನಲ್ಲಿ ಇಂಗ್ಲಿಷ್ ಜತೆಗೆ 8 ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಅದರಲ್ಲಿ ಕನ್ನಡ ಇಲ್ಲವೆಂಬುದು 7 ಕೋಟಿ ಕನ್ನಡಿಗರಿಗೆ ಸರಕಾರಗಳು ಮಾಡುತ್ತಿರುವ ಅನ್ಯಾಯ ಈ ಬಗ್ಗೆ ಹೋರಾಟ ಮಾಡಿ, ರಾಜ್ಯದ ನದಿ ನೀರು ಪರ ರಾಜ್ಯದ ಪಾಲಾಗುವುದನ್ನು ತಡೆಯಲು ಹೋರಾಟ ಮಾಡಿ, ಕನ್ನಡಿಗರಿಗೆ ಉದ್ಯೋಗಾವಕಾಶಕ್ಕಾಗಿ ಹೋರಾಟ ಮಾಡಿ, ಕನ್ನಡ ಶಾಲೆಗಳನ್ನು ಉಳಿಸಲು ಹೋರಾಟ ಮಾಡಿ. ಅದನ್ನು ಬಿಟ್ಟು ಮತಾಂಧತೆ ಬಿತ್ತಬೇಡಿ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts