More

    ಪ್ಯಾರಾಮಿಲಿಟರಿಗಳ ಪೈಕಿ ಸಿಐಎಸ್​ಎಫ್​ನಲ್ಲೇ ಅತ್ಯಧಿಕ ಕರೊನಾ ಸಾವು!

    ನವದೆಹಲಿ: ಪ್ಯಾರಾಮಿಲಿಟರಿ ಪಡೆಗಳ ಪೈಕಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್​) ಸಿಬ್ಬಂದಿಯೇ ಹೆಚ್ಚಿನ ಪ್ರಮಾಣದಲ್ಲಿ ಕರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಬಹಿರಂಗಗೊಂಡಿದೆ.

    ಸಂಸತ್ತಿನಲ್ಲಿ ಭಾನುವಾರ ಸಂಸದ ಜಗದಂಬಿಕ ಪಾಲ್​ ಅವರು ಎತ್ತಿದ್ದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿದ್ದ ಮಾಹಿತಿಯಲ್ಲಿ ಈ ವಿಚಾರ ಗೊತ್ತಾಗಿದೆ. ಕರೊನಾ ಸೋಂಕಿಗೆ ಅತಿಹೆಚ್ಚು(9,158) ಒಳಗಾಗಿದ್ದು ಸಿಆರ್​​ಪಿಎಫ್​ ಆಗಿದ್ದರೂ, ಆ ಪೈಕಿ ಸಾವಿನ ಪ್ರಮಾಣ ಶೇ. 0.39 ಮಾತ್ರ. ಅವರಲ್ಲಿ ಗುಣವಾದವರ ಪ್ರಮಾಣ ಶೇ. 84 ಇದೆ.

    ಇನ್ನು ಬಿಎಸ್​ಎಫ್​ನ 8,934 ಮಂದಿ ಸೋಂಕಿಗೆ ಒಳಗಾಗಿದ್ದು ಅವರಲ್ಲಿ ಸಾವಿನ ಪ್ರಮಾಣ ಶೇ. 0.36 ಹಾಗೂ ಚೇತರಿಕೆ ಪ್ರಮಾಣ ಶೇ. 80.41 ಇದೆ. ಆದರೆ ಸಿಐಎಸ್​ಎಫ್​ನಲ್ಲಿ ಬರೀ 5,544 ಮಂದಿ ಸೋಂಕಿಗೆ ಒಳಗಾಗಿದ್ದರೂ ಸಾವಿನ ಪ್ರಮಾಣ ಶೇ. 0.43 ಹಾಗೂ ಗುಣವಾದವರ ಪ್ರಮಾಣ ಶೇ. 75.25 ಇದೆ ಎಂದು ಸರ್ಕಾರ ಮಾಹಿತಿ ನೀಡಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts