More

    ಕಾಸರಗೋಡಿನಲ್ಲಿ 13ರಿಂದ ಹೈಯರ್ ಸೆಕೆಂಡರಿ ಸಮತ್ವ ಪರೀಕ್ಷೆ

    ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆ ಸಾಕ್ಷರತಾ ಮಿಷನ್ ಮೂಲಕ ನಡೆಸುವ ಹೈಯರ್ ಸೆಕೆಂಡರಿ ಸಮತ್ವದ ಆರನೇ ಬ್ಯಾಚ್‌ನ 1 ಮತ್ತು 2ನೇ ವರ್ಷದ ಪರೀಕ್ಷೆಗಳು ಆಗಸ್ಟ್ 13ರಂದು ಆರಂಭಗೊಳ್ಳಲಿದೆ. ಮೊದಲ ವರ್ಷ 282 ಹಾಗೂ ದ್ವಿತೀಯ ವರ್ಷದಲ್ಲಿ 404 ಒಟ್ಟು 686 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

    ಕನ್ನಡದಲ್ಲಿ ಪ್ರಥಮ ವರ್ಷ 53 ಹಾಗೂ ದ್ವಿತೀಯ ವರ್ಷ 102 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 468 ಮಹಿಳೆಯರು ಮತ್ತು 218 ಪುರುಷರು ಹೈಯರ್ ಸೆಕೆಂಡರಿ ಸಮತ್ವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

    ರಾಜಪುರಂನ ಹೋಲಿ ಫ್ಯಾಮಿಲಿ ಹೈಯರ್ ಸೆಕೆಂಡರಿಯಲ್ಲಿ ಪರೀಕ್ಷೆಗೆ ಹಾಜರಾಗುತ್ತಿರುವ 23 ವರ್ಷದ ಅಂಜು ಪರೀಕ್ಷೆ ಬರೆಯಲಿರುವ ಕಿರಿಯ ಹಾಗೂ ಜಿಎಚ್‌ಎಸ್‌ಎಸ್ ಚಾಯೋತ್‌ನಲ್ಲಿ ಪರೀಕ್ಷೆ ಬರೆಯುತ್ತಿರುವ ಕಾಳಿಚ್ಚಂಪಾರ ಅಯ್ಯಂಗಾವ್ ನಿವಾಸಿ 52 ವರ್ಷದ ರಾಜಗೋಪಾಲನ್ ಜಿಲ್ಲೆಯ ಹಿರಿಯ ಪರೀಕ್ಷಾರ್ಥಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts