More

    ಧಾರಾಕಾರ ಮಳೆ: ಬದುಕು ಮೂರಾಬಟ್ಟೆ, ಮನೆಗಳಿಗೆ ನುಗ್ಗಿದ ನೀರು, ಬೆಳೆ ನಾಶ

    ಚಿತ್ರದುರ್ಗ: ಜಿಲ್ಲೆಯಾದ್ಯಂತ ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಬಡಾವಣೆಗಳು ದ್ವೀಪದಂತಾಗಿವೆ. ಲಕ್ಷಾಂತರ ರೂ. ಮೌಲ್ಯದ ಬಾಳೆ, ಅಡಿಕೆ ಬೆಳೆ ನಾಶವಾಗಿವೆ. ನಗರದ ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕಾರು, ಬೈಕು ಸೇರಿದಂತೆ ಹಲವು ವಾಹನ ನೀರಿನಲ್ಲಿ ಮುಳುಗಡೆಯಾಗಿವೆ.

    ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಚಿಕ್ಕಮಗಳೂರು, ಹಾಸನ, ಕೊಡುಗು,ಮೈಸೂರು, ಉತ್ತರಕನ್ನಡ, ತುಮಕೂರು, ಮಂಡ್ಯ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಗುರುವಾರ ಆರಂಭವಾದ ಈ ಅಕಾಲಿಕ ಮಳೆ ಇನ್ನೂ ಎರಡು ದಿನ ಮುಂದುವರಿಯಲಿದೆ. ಮೊದಲ ದಿನದ ಮಳೆಗೆ ಚಿತ್ರದುರ್ಗ ಅಕ್ಷರಶಃ ನಲುಗಿದ್ದು, ಬಿರುಗಾಳಿ ಸಹಿತ ಮಳೆಗೆ ಬಾಳೆತೋಟ-ಅಡಕೆ ತೋಟ ಹಾನಿಯಾಗಿದೆ.

    ಧಾರಾಕಾರ ಮಳೆ: ಬದುಕು ಮೂರಾಬಟ್ಟೆ, ಮನೆಗಳಿಗೆ ನುಗ್ಗಿದ ನೀರು, ಬೆಳೆ ನಾಶಹೊಸದುರ್ಗ ತಾಲೂಕು ಬಾಲೇನಹಳ್ಳಿ, ಕಂಚಿಪುರ ಗ್ರಾಮಗಳಲ್ಲಿ ಬೆಳೆಹಾನಿ ಪ್ರಮಾಣ ಹೆಚ್ಚಾಗಿದೆ. ಹಲವು ಅಡಕೆ, ತೆಂಗು ಮರಗಳು ನೆಲಕ್ಕುರುಳಿವೆ. ಕೈಗೆ ಬಂದ ಬಾಳೆಬೆಳೆ ಮಳೆಗೆ ನಾಶವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.

    ಇನ್ನು ಚಿತ್ರದುರ್ಗ ನಗರದ ಗುಮಾಸ್ತ ಬಡಾವಣೆ ಮಳೆ ನೀರಿಗೆ ಮುಳುಗಡೆಯಾಗಿದ್ದು, ನೂರಾರು ಮನೆಗಳು ಜಲಾವೃತವಾಗಿವೆ. ಬಡಾವಣೆಯ ರಸ್ತೆಗಳ ಮೇಲೆ ನದಿಯಂತೆ ನೀರು ಹರಿಯುತ್ತಿದ್ದು, ಮನೆಯೊಳಗೂ ಇರಲಾರದೆ, ಹೊರಗೂ ಹೋಗಲಾರದೆ ಜನ ಪರದಾಡುತ್ತಿದ್ದಾರೆ. ಮನೆಗೆ ನುಗ್ಗಿರುವ ಮಳೆ ನೀರನ್ನು ಹೊರ ಹಾಕಲು ಜನತೆ ಹರಸಾಹಸ ಪಡುತ್ತಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

    ಪತ್ನಿಯ ಕುಟುಂಬಸ್ಥರಿಂದಲೇ ಗಂಡನ ಹತ್ಯೆ! ಪ್ರೀತಿಯ ಗಂಡನ ಬರ್ತ್​ ಡೇ ಸಂಭ್ರಮದಲ್ಲಿದ್ದವಳಿಗೆ ಆಘಾತ…

    ಸುಂದರಿ ಮೋಹಕ್ಕೆ ಸಿಲುಕಿದ್ದ ಗಂಡನಿಂದಲೇ ಗರ್ಭಿಣಿ ಕೊಲೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ನವವಿವಾಹಿತ ಬರ್ಬರ ಹತ್ಯೆ: 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವಳ ಬಾಳಿಗೆ ಅಣ್ಣ-ಚಿಕ್ಕಪ್ಪನೇ ವಿಲನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts