More

    ವಿದ್ಯುತ್ ಮಸೂದೆ ವಿರೋಧಿಸಿ ಹೆಸ್ಕಾಂ ಗುತ್ತಿಗೆ ನೌಕರರ ಪ್ರತಿಭಟನೆ

    ಹುಬ್ಬಳ್ಳಿ: ಸಂಸತ್​ನಲ್ಲಿ ಮಂಡನೆಯಾದ ಖಾಸಗೀಕರಣದ ನೀಲಿನಕ್ಷೆ ವಿದ್ಯುತ್ ಬಿಲ್-2022 ವಿರೋಧಿಸಿ ಕೆಪಿಟಿಸಿಎಲ್ ಅಧಿಕಾರಿಗಳ ಹಾಗೂ ನೌಕರರ ಒಕ್ಕೂಟ, ಕೆಪಿಟಿಸಿಎಲ್ ನೌಕರರ ಸಂಘ ಹಾಗೂ ಆಲ್ ಇಂಡಿಯಾ ಪವರ್​ವೆುನ್ಸ್ ಫೆಡರೇಷನ್, ಹೆಸ್ಕಾಂ ಗುತ್ತಿಗೆ ನೌಕರರ ಸಂಘಟನೆಗಳ ನೇತೃತ್ವದಲ್ಲಿ ನಗರದ ಹೆಸ್ಕಾಂ ಎಂಡಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

    ಕೆಪಿಟಿಸಿಎಲ್ ನೌಕರರ ಸಂಘದ ಕಾರ್ಯದರ್ಶಿ ಅಡಿವೆಪ್ಪ ಮೆಣಸಿನಕಾಯಿ ಮಾತನಾಡಿ, ಈ ಮಸೂದೆ ಜನರು, ರೈತ-ಕಾರ್ವಿುಕ ವಿರೋಧಿಯಾಗಿದೆ. ಈ ಹಿಂದೆ ವಿದ್ಯುತ್ ಕ್ಷೇತ್ರದ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಾಗ ಎಲ್ಲೆಡೆ ಬೃಹತ್ ಚಳವಳಿಗಳು ಭುಗಿಲೆದ್ದವು. ರೈತ, ನೌಕರರು, ಗುತ್ತಿಗೆ ಕಾರ್ವಿುಕರ ಹೋರಾಟಕ್ಕೆ ಬೆದರಿ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಹಿಂದೆ ಸರಿದಿತ್ತು. ಈಗಲೂ ವಿದ್ಯುತ್ ಖಾಸಗೀಕರಣವನ್ನು ತಡೆಯಲು ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದರು.

    ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಆಸಿಫ್ ಶಿವಳ್ಳಿ ಮಾತನಾಡಿ, ಈ ಮಸೂದೆ ಜಾರಿಗೊಳಿಸಿದಲ್ಲಿ ಖಾಸಗೀಕರಣವಾಗಲಿದೆ. ಗ್ರಾಹಕರಿಂದ ಹೆಚ್ಚು ಹಣ ವಸೂಲಿಯಾಗಲಿದೆ. ಸಾರ್ವಜನಿಕರ ಹಣದಿಂದ ಕಟ್ಟಿದ ಈ ವಲಯವನ್ನು ರಕ್ಷಿಸಲು ಎಲ್ಲರೂ ಒಂದಾಗಿ ಹೋರಾಡಬೇಕಿದೆ ಎಂದರು. ಗಂಗಾಧರ ಬಡಿಗೇರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts