More

    ಭದ್ರೆ ತ್ವರಿತಕ್ಕೆ ಸಚಿವರಿಗೆ ಶಾಸಕಿ ಮನವಿ

    ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆಗೆ ವೇಗ ನೀಡುವಂತೆ ಶಾಸಕಿ ಕೆ.ಪೂರ್ಣಿಮಾ ನೇತೃತ್ವದಲ್ಲಿ ರೈತರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಅವರಿಗೆ ಮನವಿ ಸಲ್ಲಿಸಿದರು.

    ಬೆಂಗಳೂರಿನ ವಿಧಾನ ಸೌಧ ನೀರಾವರಿ ಸಚಿವರ ಕಚೇರಿಯಲ್ಲಿ ಬುಧವಾರ ಭೇಟಿ ಮಾಡಿದ ನಿಯೋಗ, ಕಾಮಗಾರಿ ಮುಕ್ತಾಯಕ್ಕೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಮಹಾತ್ವಕಾಂಕ್ಷೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕೆಲಸ ವಿಳಂಬದಿಂದ ಜನವರಿಯಿಂದ ವಿವಿ ಸಾಗರಕ್ಕೆ ಭದ್ರ ನೀರು ಸ್ಥಗಿತಗೊಳಿಲಾಗಿದೆ. ಇಲ್ಲಿಯವರೆಗೆ ಪ್ಯಾಕೇಜ್ 1 ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಇದರ ಬಗ್ಗೆ ತುರ್ತು ಕ್ರಮ ಕೈಗೊಳ್ಳವಂತೆ ಸಚಿವರಿಗೆ ಮನವರಿಕೆ ಮಾಡಲಾಯಿತು.

    ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಪೂರ್ಣಕ್ಕೆ ಸಚಿವ ರಮೇಶ್ ಜಾರಕಿ ಹೊಳಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳಕ್ಕೆ ಶೀಘ್ರದಲ್ಲಿ ಸಚಿವರು ಭೇಟಿ ನೀಡಿಲಿದ್ದು, ಹಿರಿಯೂರು ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೂರ್ಣಿಮಾ ತಿಳಿಸಿದರು.

    ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ಆಲೂರು ಶಿವಕುಮಾರ್.ಸಿದ್ದರಾಮಣ್ಣ, ಕಸವನಹಳ್ಳಿ ರಮೇಶ್, ಸುರೇಶ್, ಸಿದ್ದರಾಮಣ್ಣ ಇದ್ದರು.

    ರೈತರ ಬೇಡಿಕೆಗಳು: ಅಜ್ಜಂಪುರ ಬಳಿ ರೈಲ್ವೆ ಸೇತುವೆ ಕೆಳಗೆ ತಾತ್ಕಾಲಿಕವಾಗಿ ಅಳವಡಿಸಿರುವ ಪೈಪುಗಳನ್ನು ಬದಲಾಯಿಸಿ, ಕಾಂಕ್ರೀಟ್ ಬ್ಲಾಕ್ ಸೇತುವೆ ನಿರ್ಮಿಸಿಕೊಡುವುದು.

    ಹೆಬ್ಬೂರು, ಅಬ್ಬಿನಹೊಳಲು ಗ್ರಾಮದ ಹತ್ತಿರ 22 ರೈತರಿಂದ ಜಮೀನು ಸ್ವಾಧೀನಕ್ಕೆ ಸರ್ಕಾರದ ಆದೇಶವಾಗಿದ್ದು, ಕಾರ್ಯರೂಪಕ್ಕೆ ಬರಬೇಕು.

    ಚಿತ್ರದುರ್ಗ-ತುಮಕೂರು ಶಾಖಾ ಕಾಲುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು.

    ನಾಲೆ ದುರಸ್ತಿಗೊಳಿಸಿ ತಕ್ಷಣ ವಿವಿ ಸಾಗರಕ್ಕೆ ನೀರು ಹರಿಸಬೇಕು.

    ವಿವಿ ಸಾಗರ ಜಲಾಶಯದ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸ್ಥಾಪಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts