More

    ನೀವು ಟಾಯ್ಲೆಟ್​ನಲ್ಲಿ​ ಮೊಬೈಲ್​ ಬಳಸುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಲೇಬೇಕು….

    ನವದೆಹಲಿ: ಈ ಆಧುನಿಕ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಮೊಬೈಲ್​ ಬಳಕೆ ಹೆಚ್ಚಾಗುತ್ತಿದ್ದು, ವ್ಯಸನವಾಗಿ ಬದಲಾಗುತ್ತಿದೆ. ಮೊಬೈಲ್​ ಬಿಟ್ಟು ಒಂದು ಕ್ಷಣ ಇರಲಾರದ ಸ್ಥಿತಿಗೆ ಮತ್ತು ಮೊಬೈಲ್​ ಇಲ್ಲದಿದ್ದರೆ ಏನೋ ಕಳೆದುಕೊಂಡಿರುವಂತೆ ವರ್ತಿಸುವ ಸ್ಥಿತಿಗೆ ಜನರು ತಲುಪಿದ್ದಾರೆ. ಊಟ ಮಾಡುವಾಗಲೂ ಮೊಬೈಲ್​ ಬಳಸುತ್ತಾರೆ. ಅಲ್ಲದೆ, ಬಹುತೇಕರು ಮೊಬೈಲ್​ ಇಲ್ಲದೆ ಟಾಯ್ಲೆಟ್​ಗೆ ಹೋಗುವುದಿಲ್ಲ. ಅಷ್ಟರ ಮಟ್ಟಿಗೆ ಮೊಬೈಲ್​ ಆವರಿಸಿಕೊಂಡಿದೆ. ಆರೋಗ್ಯ ತಜ್ಞರ ಪ್ರಕಾರ ಟಾಯ್ಲೆಟ್​ನಲ್ಲಿ ಫೋನ್ ಬಳಸುವ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಾರೆ.

    ಆರೋಗ್ಯಕ್ಕೆ ಒಳ್ಳೆಯದಲ್ಲ
    ಇತ್ತೀಚಿನ ದಿನಗಳಲ್ಲಿ ಯುವಕರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಫೋನ್ ಬಳಸುತ್ತಿದ್ದಾರೆ. ಅವುಗಳಿಗೆ ವ್ಯಸನಿಯಾಗಿದ್ದಾರೆ. ವಿಶೇಷವಾಗಿ ಯುವಕರು ಫೋನ್ ಬಳಸುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ತಮ್ಮ ಫೋನ್‌ಗಳನ್ನು ಶೌಚಾಲಯಕ್ಕೂ ಸಹ ತೆಗೆದುಕೊಂಡು ಹೋಗುತ್ತಾರೆ. ಟಾಯ್ಲೆಟ್ ಸೀಟಿನಲ್ಲಿ ಕುಳಿತುಕೊಂಡು ರೀಲ್‌ಗಳನ್ನು ನೋಡುವುದು ಮತ್ತು ಕೆಲಸದ ಇಮೇಲ್‌ಗಳಿಗೆ ಪ್ರತ್ಯುತ್ತರಿಸುವುದು ಮುಂತಾದ ಅನೇಕ ಕೆಲಸಗಳಲ್ಲಿ ತೊಡಗುತ್ತಾರೆ. ಆದರೆ, ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

    ಇದನ್ನೂ ಓದಿ: ಕಣ್ಣಿಗೊಂದು ಸವಾಲ್​: ಫೋಟೋದಲ್ಲಿರುವ ಶ್ವಾನವನ್ನು ಪತ್ತೆಹಚ್ಚುವಿರಾ? ಜೀನಿಯಸ್​ಗಳಿಂದ ಮಾತ್ರ ಇದು ಸಾಧ್ಯ

    ಬ್ಯಾಕ್ಟೀರಿಯ ಇರುತ್ತದೆ
    ಸ್ಟ್ಯಾಫಿಲೋಕೊಕಸ್ ಔರೆಸ್ ಬ್ಯಾಕ್ಟೀರಿಯಾವು ಟಾಯ್ಲೆಟ್ ಸೀಟಿನಲ್ಲಿ ವಾಸಿಸುತ್ತವೆ. ಆದರೆ, ಟಾಯ್ಲೆಟ್ ಸೀಟ್‌ಗಳಲ್ಲಿ ಕಂಡುಬರುವ ಇತರ ಜಾತಿಯ ಸ್ಟ್ಯಾಫಿಲೋಕೊಕಸ್ ಮನುಷ್ಯರಿಗೆ ತುಂಬಾ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಇವು ಮೂತ್ರನಾಳದ ಸೋಂಕನ್ನು ಉಂಟುಮಾಡಬಹುದು ಎಂದು ಎಚ್ಚರಿಸುತ್ತಾರೆ.

    ಹಲವಾರ ಆರೋಗ್ಯ ಸಮಸ್ಯೆಗಳು
    ಟಾಯ್ಲೆಟ್​ನಲ್ಲಿರುವ ರೋಗಾಣುಗಳು ನಿಮ್ಮ ಫೋನ್​​ಗೆ ಅಂಟಿಕೊಂಡ ಬಳಿಕ ನಿಮಗೆ ತಗುಲಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಹೊಟ್ಟೆ ನೋವು, ಅತಿಸಾರ, ಸೋಂಕು ಮತ್ತು ಫುಡ್​ ಪಾಯಿಸನ್​ನಂತಹ ವೈದ್ಯಕೀಯ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಹುಣ್ಣುಗಳು, ಸೈನುಟಿಸ್‌ನಂತಹ ಉಸಿರಾಟದ ಸೋಂಕುಗಳು ಮತ್ತು ಚರ್ಮದ ಸೋಂಕುಗಳು ಸಹ ಸಂಭವಿಸಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

    ಇದನ್ನೂ ಓದಿ: ಮನೆಯ ಮಹಡಿಯಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್​ ತಂತಿ ತಗುಲಿ ಬಾಲಕರಿಬ್ಬರ ಸಾವು: ತುಮಕೂರಲ್ಲಿ ದುರ್ಘಟನೆ

    ಕೂಡಲೇ ತಪ್ಪಿಸಿ
    ಟಾಯ್ಲೆಟ್​ಗೆ ಹೋಗುವಾಗ ಮೊಬೈಲ್​ ಬಳಸುವ ದುರಾಭ್ಯಸವನ್ನು ತಪ್ಪಿಸಿ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಏಕೆಂದರೆ ಟಾಯ್ಲೆಟ್ ಸೀಟ್‌ಗಳ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದು ಹೆಮೊರೊಯಿಡ್ಸ್ ಅಪಾಯವನ್ನು ಹೆಚ್ಚಿಸುತ್ತದೆ. ಇದು ಗುದನಾಳದ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. (ಏಜೆನ್ಸೀಸ್​)

    ಹಿಂದೂ ದೇಗುಲದ ಮರವನ್ನು ತಬ್ಬಿ ನಗ್ನ ಫೋಟೊಶೂಟ್; ಮಹಿಳೆ ಗಡಿಪಾರು!

    ಚೆಕ್​ಪೋಸ್ಟ್​ನಲ್ಲಿ ಕಾರು ತಡೆದಿದ್ದಕ್ಕೆ ಉದ್ಯಮಿ ಬಿ.ಟಿ. ನಾಗರಾಜ್​ ರೆಡ್ಡಿಯಿಂದ ಪೊಲೀಸರ ಮೇಲೆ ಹಲ್ಲೆ

    ಕಣ್ಣಿಗೊಂದು ಸವಾಲ್​: ಫೋಟೋದಲ್ಲಿರುವ ಶ್ವಾನವನ್ನು ಪತ್ತೆಹಚ್ಚುವಿರಾ? ಜೀನಿಯಸ್​ಗಳಿಂದ ಮಾತ್ರ ಇದು ಸಾಧ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts