More

    ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..

    ಬೆಂಗಳೂರು: ಕರೊನಾ ಸೋಂಕಿಗೆ ಒಳಗಾದವರಲ್ಲಿ, ಅದರಲ್ಲೂ ಸೋಂಕು ತೀವ್ರಗೊಂಡವರಲ್ಲಿ ಉಂಟಾಗುವ ಪ್ರಮುಖ ಸಮಸ್ಯೆ ಎಂದರೆ ಉಸಿರಾಟದ್ದು. ಉಸಿರಾಡಲು ತೀವ್ರ ಕಷ್ಟವಾದಾಗ ಕೃತಕ ಉಸಿರಾಟದ ಮೊರೆ ಹೋಗಬೇಕಾದ್ದು ಅನಿವಾರ್ಯವಾಗುತ್ತಿದೆ. ಆದರೆ ಸದ್ಯ ಪ್ರಕರಣಗಳ ತೀವ್ರ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಸಮಯಕ್ಕೆ ಸರಿಯಾಗಿ ಹಾಸಿಗೆ-ಐಸಿಯು-ಆಕ್ಸಿಜನ್ ಸಿಗುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈ ಮಧ್ಯೆ ಉಸಿರಾಟದ ಸಮಸ್ಯೆ ಸಣ್ಣಪ್ರಮಾಣದಲ್ಲಿದ್ದರೆ, ಅದು ಆರಂಭಿಕ ಹಂತದಲ್ಲಿದ್ದರೆ ಮನೆಮದ್ದಿನಲ್ಲೇ ಒಂದಷ್ಟು ನಿರಾಳತೆ ಹೊಂದಲೂ ಸಾಧ್ಯವಿದೆ.

    ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕರೊನಾ ಸೋಂಕಿತರು ಇವಿಷ್ಟು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರೆ ಇವುಗಳಿಂದಲೇ ತಾತ್ಕಾಲಿಕ ಪರಿಹಾರ ಕಾಣಲು ಸಾಧ್ಯವಿದೆ. ಸಮಸ್ಯೆ ಸಣ್ಣ ಪ್ರಮಾಣದಲ್ಲಿದ್ದರೆ ಇದನ್ನು ಬಳಸುವುದರಿಂದ ಉಸಿರಾಟ ಪ್ರಕ್ರಿಯೆ ಸರಾಗವಾಗಿ ನಿರಾಳತೆ ಮೂಡುತ್ತದೆ ಎಂದು ಹೇಳಲಾಗುತ್ತಿದೆ.

    ಮನೆಮದ್ದು: ಈ ಮನೆಮದ್ದಿಗೆ ಬೇಕಾಗುವ ಸಾಮಗ್ರಿಗಳು ಒಂದೆರಡು ಕರ್ಪೂರ, 2-3 ಲವಂಗ, ಒಂದು ಚಮಚ ಓಂ ಕಾಳು (ಓಮ) ಹಾಗೂ ಮೂರ್ನಾಲ್ಕು ತೊಟ್ಟು ನೀಲಗಿರಿ ತೈಲ. ಇವಿಷ್ಟನ್ನು ಮಿಶ್ರಣ ಮಾಡಿ ಸ್ವಚ್ಛವಾದ ಬಿಳಿ ಬಟ್ಟೆಯಲ್ಲಿ ಕಟ್ಟಿ ಇಟ್ಟುಕೊಳ್ಳಬೇಕು. ಉಸಿರಾಟದ ಸಮಸ್ಯೆ ಕಾಡಿದಾಗೆಲ್ಲ ಈ ಬಟ್ಟೆಯ ಕಟ್ಟನ್ನು ಮೂಗಿನ ಹತ್ತಿರ ಹಿಡಿದುಕೊಂಡು ದೀರ್ಘವಾಗಿ ಉಸಿರು ಎಳೆದುಕೊಂಡರೆ ಕೆಲವೇ ಕ್ಷಣಗಳಲ್ಲಿ ಉಸಿರಾಟ ಸರಾಗವಾಗಿ ಒಂದಷ್ಟು ನಿರಾಳತೆ ಮೂಡುತ್ತದೆ ಎನ್ನುತ್ತಾರೆ ವೈದ್ಯಕೀಯ ಪರಿಣತರು. ಲಡಾಕ್​ನಂಥ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗಲೂ ಇದನ್ನು ಕೊಡುತ್ತಾರೆ. ಮಾತ್ರವಲ್ಲ ಕೆಲವು ಆ್ಯಂಬುಲೆನ್ಸ್​ಗಳಲ್ಲೂ ಈ ಮನೆಮದ್ದನ್ನು ಇಟ್ಟುಕೊಂಡಿರುತ್ತಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ 

    ಹೇಗೆ ಪರಿಣಾಮ?: ಈ ಮನೆಮದ್ದಿನಲ್ಲಿ ಬಳಸಿದ ಸಾಮಗ್ರಿಗಳಲ್ಲಿನ ವಿಶಿಷ್ಟವಾದ ಪರಿಮಳ ಉಸಿರಾಟಕ್ಕೆ ಅನುಕೂಲ ಮಾಡಿಕೊಡುತ್ತದೆ. ಕರ್ಪೂರ, ಓಮ, ಲವಂಗ, ನೀಲಗಿರಿ ಎಲ್ಲವೂ ವಿಶಿಷ್ಟವಾದ ಪರಿಮಳ ಹೊಂದಿವೆ. ಇಂಥ ಕೆಲವು ಪರಿಮಳದ ವಸ್ತುಗಳನ್ನು ಆಘ್ರಾಣಿಸಿದಾಗ ಅದರಲ್ಲಿನ ವಿಶಿಷ್ಟ ಅಂಶಗಳನು ಶ್ವಾಸನಾಳಗಳನ್ನು ಹಿಗ್ಗಿಸುತ್ತವೆ. ಆಗ ಉಸಿರಾಟಕ್ಕೆ ಇರುವ ಅಡಚಣೆ ನಿವಾರಣೆಯಾಗಿ, ಸರಾಗವಾಗಿ ಉಸಿರಾಡಲು ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ ಆಯುರ್ವೇದ ವೈದ್ಯರಾದ ಡಾ.ಸೀತಾರಾಮ್​ ಪ್ರಸಾದ್​.

    ಇದನ್ನೂ ಓದಿ: ಇಲ್ಲಿ ಸೋಂಕಿತರಿಗೆ ನೀಡುತ್ತಿದ್ದಾರೆ ಅವಧಿ ಮುಗಿದ ಔಷಧ!; ಶಾಸಕರಿಂದ ತೀವ್ರ ಆಕ್ಷೇಪ 

    ಎಚ್ಚರಿಕೆ ಅಗತ್ಯ: ಈ ಮನೆಮದ್ದು ಉಸಿರಾಟಕ್ಕೆ ಅನುಕೂಲ ಮಾಡಿಕೊಡುತ್ತದೆ ವಿನಃ ಆಮ್ಲಜನಕವನ್ನು ಹೆಚ್ಚಿಸುವುದಿಲ್ಲ. ಶ್ವಾಸನಾಳಗಳು ಹಿಗ್ಗುವುದರಿಂದ ಉಸಿರಾಟಕ್ಕೆ ಹೆಚ್ಚಿನ ಅವಕಾಶ ಸಿಕ್ಕಿ, ವಾತಾವರಣದಲ್ಲಿರುವ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೆಳೆದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಕೆಲವೊಂದು ವಸ್ತುಗಳ ಪರಿಮಳ ಕೆಲವರಿಗೆ ಅಲರ್ಜಿ ಆಗುವುದರಿಂದ ಅಂಥ ಅಲರ್ಜಿ ಇರುವವರು ಇದನ್ನು ಬಳಸುವ ಮೊದಲು ಆ ಬಗ್ಗೆ ಯೋಚಿಸಿ ಉಪಯೋಗಿಸಬೇಕು. ಕೆಲವರಿಗೆ ಕರ್ಪೂರ ಮುಂತಾದವುಗಳ ಪರಿಮಳ ಅಲರ್ಜಿ ತರುತ್ತದೆ. ಅಂಥವರು ಇದನ್ನು ಬಳಸುವ ರಿಸ್ಕ್ ತೆಗೆದುಕೊಳ್ಳಬಾರದು ಎಂಬ ಕಿವಿಮಾತನ್ನೂ ಡಾ.ಸೀತಾರಾಮ್​ ಪ್ರಸಾದ್ ಹೇಳುತ್ತಾರೆ.

    ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..

    ಈ ಮನೆಮದ್ದಿನಲ್ಲಿರುವ ಅಂಶಗಳು ಶ್ವಾಸನಾಳಗಳನ್ನು ಹಿಗ್ಗಿಸುವುದರಿಂದ ಉಸಿರಾಟಕ್ಕೆ ಇರುವ ಅಡೆತಡೆಗಳು ನಿವಾರಣೆಯಾಗಿ, ವಾತಾವಾರಣದಲ್ಲಿನ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೆಳೆದುಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಉಸಿರಾಟದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗುತ್ತದೆ.
    | ಡಾ.ಸೀತಾರಾಮ್​ ಪ್ರಸಾದ್​ ಆಯುರ್ವೇದ ಕುಟೀರ, ಎಚ್​ಆರ್​ಬಿಆರ್ ಲೇಔಟ್​, ಬೆಂಗಳೂರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts