More

    ಬಡವರಿಗೆ ನೆರವಾಗಲು ಉದ್ಯೋಗ ಖಾತ್ರಿ – ಉಮೇಶ ಕತ್ತಿ


    ಹುಕ್ಕೇರಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ತೊಂದರೆ ಅನುಭವಿಸಿದ ಕಾರ್ಮಿಕರಿಗೆ ಉದ್ಯೋಗ ನೀಡಿ ಅವರಲ್ಲಿ ಬದುಕಿನ ಭರವಸೆ ತುಂಬಲು ಉದ್ಯೋಗ ಖಾತ್ರಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

    ಅವರು ಸೋಮವಾರ ತಾಲೂಕಿನ ಬಡಕುಂದ್ರಿಯ ಹೊಳೆಮ್ಮ ದೇವಸ್ಥಾನದ ಬಳಿ ನರೇಗಾ ಯೋಜನೆಯಡಿ ಹಿರಣ್ಯಕೇಶಿ ನದಿ ಹೂಳು ತೆಗೆಯುವ 7 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕರೊನಾ ವೈರಸ್ ನಿಯಂತ್ರಿಸಲು ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದ ಎಲ್ಲ ವ್ಯವಹಾರಗಳು ಸ್ಥಗಿತವಾಗಿ ಬಡ ವರ್ಗ ಕಂಗಾಲಾಗಿದೆ.

    ಅವರಲ್ಲಿ ಬದುಕಿನ ಭರವಸೆ ತುಂಬಲು ಸರ್ಕಾರ ಹಾಗೂ ಜನಪ್ರತಿನಿಧಿಯಾದ ನಾನು ನರೇಗಾ ಯೋಜನೆಯಡಿ 100 ದಿನಗಳ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭಿಸಿದ್ದೇವೆ. ಈ ಯೋಜನೆ ನಿರಂತರವಾಗಿರುತ್ತದೆ ಎಂದರು. ಜಿಪಂ ಸಿ.ಇ.ಒ. ಡಾ. ಕೆ.ವಿ. ರಾಜೇಂದ್ರ ಅವರು ಕಾರ್ಮಿಕರಿಗೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ನದಿ ಹೂಳು ತೆಗೆಯುವುದರಿಂದ ಬಡ ವರ್ಗದವರ ಬದುಕಿಗೆ ಆಸರೆಯಾಗುವುದಲ್ಲದೆ, ನೀರಿನ ಸಂಗ್ರಹದಿಂದ ಅಂತರ್ಜಲ ಹೆಚ್ಚುತ್ತದೆ ಎಂದರು.

    ಮಾಜಿ ಸಚಿವ ಶಶಿಕಾಂತ ನಾಯಿಕ, ತಾಪಂ ಅಧ್ಯಕ್ಷ ದಸ್ತಗೀರ ಬಸ್ಸಾಪುರೆ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ತಾಪಂ ಸದಸ್ಯೆ ಮೀನಾಕ್ಷಿ ಮಾನಗಾಂವಿ, ಕಾಡಪ್ಪ ಮಗದುಮ್ಮ, ಎಚ್.ಎಲ್. ಪೂಜೇರಿ, ಅಧಿಕಾರಿಗಳಾದ ಅಶೋಕ ಗುರಾಣಿ, ರಾಜಶೇಖರ ಪಾಟೀಲ, ಎಂ.ಎಸ್. ಪಟಗುಂದಿ, ಆರ್.ವಿ. ತಾಳೂರ, ಗುರುರಾಜ ಕಲ್ಯಾಣಶೆಟ್ಟಿ ಹಾಗೂ ಪಿಡಿಒಗಳು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ತಾಪಂ ಇಒ ಎಂ.ಎಸ್. ಬಿರಾದಾರಪಾಟೀಲ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts