More

    ಬಿಐಎಸ್​ ಮಾನ್ಯತೆ ಹೆಲ್ಮೆಟ್​ ಕಡ್ಡಾಯ; ತಪ್ಪಿದರೆ ಸವಾರರಿಗೆ ದಂಡ, ಕಂಪನಿಯವರಿಗೆ ಜೈಲು; ಕೇಂದ್ರದಿಂದಲೇ ನೀತಿ

    ನವದೆಹಲಿ: ದ್ವಿಚಕ್ರ ವಾಹನ ಸವಾರರು ಇನ್ನು ಮುಂದೆ ಬಿಐಎಸ್​ ಮಾನ್ಯತೆ ಹೊಂದಿದ ಹೆಲ್ಮೆಟ್​ ಧರಿಸುವುದು ಕಡ್ಡಾಯವಾಗಲಿದೆ. ಜತೆಗೆ, ಇಂಥ ಮಾನ್ಯತೆ ಹೊಂದಿದ ಹೆಲ್ಮೆಟ್​ಗಳ ಉತ್ಪಾದನೆ ಹಾಗೂ ಮಾರಾಟಕ್ಕಷ್ಟೇ ಆವಕಾಶ ಇರಲಿದೆ.

    ಕೇಂದ್ರ ಸಾರಿಗೆ ಇಲಾಖೆ ಇತ್ತೀಚೆಗೆ ಕರಡು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ದ್ವಿಚಕ್ರ ವಾಹನ ಸವಾರರು ಬಳಸುವ ಹೆಲ್ಮೆಟ್​ಗಳು ಕಡ್ಡಾಯವಾಗಿ ಬಿಐಎಸ್​ ಹಾಲ್​ಮಾಕ್​ರ್ ಹೊಂದಿರುವುದು ಕಡ್ಡಾಯವಾಗಿರಲಿದೆ. ಇದಕ್ಕಾಗಿ ಬಿಐಎಸ್​ 2016ರ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದೆ.

    ಇದನ್ನೂ ಓದಿ; 15ನೇ ವರ್ಷಕ್ಕೆ ಮದುವೆ, ಎರಡೂವರೆ ವರ್ಷದ ಮಗುವಿನ ತಾಯಿಯೀಗ ಪಿಯು ಪರೀಕ್ಷೆಯಲ್ಲಿ ಅಗ್ರ ಸಾಧಕಿ

    ಈ ನಿಯಮ ಜಾರಿಗೆ ಬಂದಲ್ಲಿ, ಬಿಐಎಸ್​ ಮಾನ್ಯತೆ ಹೊಂದಿಲ್ಲದ ಹೆಲ್ಮೆಟ್​ ಧರಿಸಿದ ಸವಾರರು ದಂಡ ಪಾವತಿಸಬೇಕಾಗುತ್ತದೆ. ಇಂಥ ಹೆಲ್ಮೆಟ್​ಗಳನ್ನು ತಯಾರಿಸುವ ಕಂಪನಿಯವರು ಕೂಡ ದಂಡ ಪಾವತಿಸಬೇಕಲ್ಲದ, ಜೈಲು ಸೇರಬೇಕಾಗುತ್ತದೆ.

    ಈ ನಿಯಮದಿಂದಾಗಿ ಕಳಪೆ ಹೆಲ್ಮೆಟ್​ಗಳ ತಯಾರಿಕೆ ಹಾಗೂ ಬಳಕೆಗೆ ಕಡಿವಾಣ ಬೀಳಲಿದೆ. ಜತೆಗೆ, ಈ ಬಗ್ಗೆ ಸಲಹೆ- ಸೂಚನೆಗಳನ್ನು ನೀಡುವಂತೆ ಸಾರಿಗೆ ಇಲಾಖೆ ಕೋರಿದೆ.

    ಸೆಪ್ಟಂಬರ್​​ಗೆ ಶಾಲಾ- ಕಾಲೇಜು ಆರಂಭ; ಮತ್ತೊಂದು ರಾಜ್ಯ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts