ನ್ಯೂಯಾರ್ಕ್: ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಕುತೂಹಲದ ಆಗರವಾದ ಮಂಗಳ ಗ್ರಹದ ಬಗ್ಗೆ ನಾಸಾ ಎಡೆಬಿಡದೇ ಅಧ್ಯಯನ ನಡೆಸುತ್ತಿದೆ. ಇತ್ತೀಚಿಗೆ ನಾಸಾ, ತನ್ನ Perseverance ನೌಕೆಯನ್ನು (Mars 2020) ಮಂಗಳನ ಮೇಲೆ ಯಶಸ್ವಿಯಾಗಿ ಇಳಿಸಿ ಅದ್ಭುತವಾದ ಸಾಧನೆಗೈದಿದೆ.
ಈ Perseverance ನೌಕೆ ಫೆಬ್ರವರಿ 18 ರಿಂದ ಕಾರ್ಚಾಚರಣೆಯನ್ನು ಆರಂಭ ಮಾಡಿ, ಮಂಗಳ ಗ್ರಹದ ಬಗ್ಗೆ ಅನೇಕ ಕುತೂಹಲಕಾರಿ ಮಾಹಿತಿಗಳನ್ನು ನೀಡುತ್ತಿದೆ. ಇಷ್ಟೇ ಅಲ್ಲದೇ ನಾಸಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಂಗಳ ಗ್ರಹದಲ್ಲಿ ಹೆಲಿಕಾಪ್ಟರ್ ಕೂಡ ಹಾರಾಡಿಸಿದೆ. ಇದು ಐತಿಹಾಸಿಕ ಸಾಧನೆಯಾಗಿದ್ದು, ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಅಥವಾ ವಿಮಾನದಂತಹ ವಾಹನ (ಮಿನಿ ಹೆಲಿಕಾಪ್ಟರ್) ಅನ್ಯಗ್ರಹದಲ್ಲಿ ಹಾರಾಡಿದಂತಾಗಿದೆ.
ಇದನ್ನೂ ಓದಿ: “ಹಿಂದೆ ಮಹಿಳೆಯರ ಸೊಂಟ ನಂಬರ್ 8 ರಂತೆ ಇರುತ್ತಿತ್ತು, ಈಗ ಡ್ರಮ್ಮಿನಂತಾಗಿದ್ದಾರೆ” ಎಂದ ಡಿಎಂಕೆ ಅಭ್ಯರ್ಥಿ
ಈ ಮಿನಿ ಹೆಲಿಕಾಪ್ಟರ್ಗೆ ingenuity ಎಂದು ಹೆಸರಿಸಲಾಗಿದ್ದು, Perseverance ನೌಕೆಯಲ್ಲಿ ಅಡಕವಾಗಿತ್ತು. ನಾಸಾ ನಿರ್ದೇಶನದ ಮೆರೆಗೆ ಮಂಗಳನ ಅಂಗಳದಲ್ಲಿ ಸುಮಾರು 10 ನಿಮೀಷ ಹಾರಾಟ ನಡೆಸಿದೆ.
.@NASA previewed the flight path of its’ Ingenuity’ #MarsHelicopter, as it prepares to fly an aircraft on another planet for the first time pic.twitter.com/e50yZrSRpg
— Reuters (@Reuters) March 24, 2021
ಇದು ನಾಸಾ ಸಂಸ್ಥೆಗೆ ಸಿಕ್ಕಿದ ಮಹತ್ವದ ಮೈಲಿಗಲ್ಲಾಗಿದ್ದು, ಮುಂದೆ ಮಂಗಳನ ಅಂಗಳದಲ್ಲಿ ಹೆಲಿಪ್ಯಾಡ್ಗಳ ನಿರ್ಮಾಣಕ್ಕೂ ಇದು ಮುನ್ನುಡಿ ಬರೆದಿದೆ ಎನ್ನಲಾಗುತ್ತಿದೆ.
‘ಕೂ’ ಆ್ಯಪ್‌ನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಬಂಡವಾಳ ಹೂಡಿಕೆ
“ಹಿಂದೆ ಮಹಿಳೆಯರ ಸೊಂಟ ನಂಬರ್ 8 ರಂತೆ ಇರುತ್ತಿತ್ತು, ಈಗ ಡ್ರಮ್ಮಿನಂತಾಗಿದ್ದಾರೆ” ಎಂದ ಡಿಎಂಕೆ ಅಭ್ಯರ್ಥಿ