More

    ಅಸೂಯೆ, ದ್ವೇಷ ಬಿಟ್ಟು ಎಲ್ಲರನ್ನೂ ಬೆಳೆಸೋಣ: ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಸೋಮೇಶ್ವರ

    ಬೆಳ್ವೆ: ಮಾನವ ಜೀವನ ಬಹಳ ಸುಂದರವಾದುದು. ದ್ವೇಷ, ಅಸೂಯೆ, ಅಹಂಕಾರಗಳನ್ನು ಬಿಟ್ಟು ಸಾಹಿತ್ಯ, ಕಲೆಯೊಂದಿಗೆ ಇನ್ನೊಬ್ಬರನ್ನು ಪ್ರೋತ್ಸಾಹಿಸಿ, ಬೆಳೆಸುವ ಕಾರ್ಯವಾಗಬೇಕು ಎಂದು ಹೆಬ್ರಿ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಹಾಸ್ಯ ಸಾಹಿತಿ, ಭಾಷಣಗಾರ್ತಿ ಸಂಧ್ಯಾ ಶೆಣೈ ಸೋಮೇಶ್ವರ ಹೇಳಿದರು.
    ಬೆಳ್ವೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಠಾರದ ಆರ್ಡಿ ಕೃಷ್ಣಮೂರ್ತಿ ಭಟ್ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕದ ದ್ವಿತೀಯ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

    ಕನ್ನಡ ಭಾಷೆ, ಸಾಹಿತ್ಯವು ಉನ್ನತ ಸ್ಥಾನಮಾನ, ಗೌರವವನ್ನು ಹೊಂದಿದೆ. ಪ್ರಕೃತಿ ಜೀವನಕ್ಕೆ ಉತ್ತಮ ನೀತಿಪಾಠ ಕಲಿಸುತ್ತದೆ. ಸಾಹಿತ್ಯವು ಉತ್ತಮ ಸಂದೇಶದೊಂದಿಗೆ ಎಲ್ಲರ ಮನ ಮುಟ್ಟುವಂತಿರಬೇಕು. ಹಾಸ್ಯವು ನಗುವಿಗೆ ಸೀಮಿತವಾಗಿರಬೇಕು. ಅಪಹಾಸ್ಯದೊಂದಿಗೆ ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು.
    ಅವಿಭಜಿತ ದ.ಕ. ಜಿಲ್ಲಾ ಜವಳಿ ವರ್ತಕರ ಸಂಘ ಮಂಗಳೂರು ಅಧ್ಯಕ್ಷ ಯೋಗೀಶ್ ಭಟ್ ಹೆಬ್ರಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು.

    ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಪೂರ್ವಾಧ್ಯಕ್ಷ, ಹರಿದಾಸ ಬಿ.ಸಿ. ಶಿವಪುರ ಹಿಂದಿನ ಸಾಹಿತ್ಯ ಸಮ್ಮೇಳನದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಜಿಪಂ ಸದಸ್ಯರಾದ ಸುಪ್ರೀತಾ ಉದಯ ಕುಲಾಲ ಹಾಲಾಡಿ, ಜ್ಯೋತಿ ಹರೀಶ್ ಹೆಬ್ರಿ, ತಾಪಂ ಸದಸ್ಯ ರಮೇಶ ಪೂಜಾರಿ, ಹೆಬ್ರಿ ತಹಸೀಲ್ದಾರ್ ಕೆ. ಪುರಂದರ, ಕುಂದಾಪುರ ತಹಸೀಲ್ದಾರ್ ಆನಂದಪ್ಪ ನಾಯ್ಕ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್., ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸಾದ ರಾವ್, ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ಪ್ರಾಂಶುಪಾಲ ಅಶೋಕ ಕಾಮತ್, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಎ.ಜೆ., ಹೆಬ್ರಿ ಠಾಣಾಧಿಕಾರಿ ಸುಮಾ ಬಿ., ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ವೆಲೇರಿಯನ್ ಮಿನೇಜಸ್, ಬೆಳ್ವೆ ಜುಮ್ಮಾ ಮಸೀದಿ ಧರ್ಮಗುರು ಮಹಮ್ಮದ್ ರಫೀಕ್, ಹೆಬ್ರಿ ತಾಲೂಕು ಕಸಾಪ ಅಧ್ಯಕ್ಷ ಪಿ.ವಿ. ಆನಂದ ಸಾಲಿಗ್ರಾಮ, ಕಾರ್ಕಳ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕುಂದಾಪುರ ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ, ಉಡುಪಿ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಕಾರ್ಕಳ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಣೈ, ಕುಂದಾಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ ಶೆಟ್ಟಿ, ಬೆಳ್ವೆ ಶಾಲೆ ಮುಖ್ಯಶಿಕ್ಷಕ ಕಿಶನ್‌ರಾಜ್ ಶೆಟ್ಟಿ, ಗೌರವಾಧ್ಯಕ್ಷ ಅಂಬಾತನಯ ಮುದ್ರಾಡಿ, ಹೆಬ್ರಿ ತಾಲೂಕು ಘಟಕದ ದ್ವಿತೀಯ ಸಾಹಿತ್ಯ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಉದ್ಯಮಿ ಬಿ. ಗಣೇಶ್ ಕಿಣಿ ಬೆಳ್ವೆ, ಗೌರವ ಸಲಹೆಗಾರ ಉದ್ಯಮಿ ಬಿ. ಸತೀಶ್ ಕಿಣಿ ಬೆಳ್ವೆ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಜೋಯಿಸ್ ಹೆಬ್ರಿ, ಉಪಾಧ್ಯಕ್ಷ ಬಿ.ರಾಜೇಂದ್ರ ಕಿಣಿ ಬೆಳ್ವೆ ಮೊದಲಾದವರಿದ್ದರು.

    ನವೋದಯ ಶಾಲಾ ಸವಲತ್ತು ಇತರ ಸರ್ಕಾರಿ ಶಾಲೆಗೂ ಸಿಗಲಿ
    ಬಾಲ್ಯದಲ್ಲಿ ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಒಲವು ಮೂಡಿಸುವ ಕಾರ್ಯವಾಗಬೇಕು. ಇಂಗ್ಲಿಷ್ ಭಾಷೆಯ ವ್ಯಾಮೋಹ ಸಲ್ಲ. ಕನ್ನಡ ಭಾಷೆ ಪರಿಪೂರ್ಣತೆಯನ್ನು ಹೊಂದಿ, ಸಂಸ್ಕಾರಯುತ ಬದುಕಿಗೆ ಉತ್ತೇಜನ ನೀಡುತ್ತಿದೆ. ಖಾಸಗಿ ಇಂಗ್ಲಿಷ್ ಮಾಧ್ಯಮ ಹಾಗೂ ನವೋದಯ ಶಾಲೆಗಳಲ್ಲಿರುವ ಉತ್ತಮ ಸೌಲಭ್ಯಗಳನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ನೀಡಿದಾಗ ಉತ್ತಮ ಫಲಿತಾಂಶ ಕಾಣಲು ಸಾಧ್ಯವಿದೆ. ಪ್ರಸ್ತುತ ಗ್ರಂಥಾಲಯಗಳ ಬದಲು ಮೊಬೈಲ್ ಫೇಸ್‌ಬುಕ್‌ಗಳ ಬಳಕೆ ಹೆಚ್ಚುತ್ತಿದೆ. ಕಾರ್ಯಕ್ರಮಗಳಲ್ಲಿ ಸಾಹಿತ್ಯದ ಪುಸ್ತಕಗಳನ್ನು ನೀಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ರವಾನಿಸಬೇಕು. ಕನ್ನಡ ಭಾಷಾಭಿಮಾನ ಜನರ ಹೃದಯ ವೈಶಾಲತೆಯನ್ನು ಹೆಚ್ಚಿಸುತ್ತದೆ. ಹಳ್ಳಿ ಹಳ್ಳಿಗಳಲ್ಲಿ ಸಾಹಿತ್ಯದ ಕಂಪು ಪಸರಿಸಲಿ ಎಂದರು ಸಂಧ್ಯಾ ಶೆಣೈ

    ಕನ್ನಡ ಭಾಷೆಯ ಔದರ್ಯ ಗುಣಗಳು ಜನರ ಜೀವನಕ್ಕೆ ಸ್ಫೂರ್ತಿ ನೀಡುತ್ತವೆ. ಹೆಬ್ರಿ ತಾಲೂಕು ಸಾಹಿತ್ಯ ಸೇರಿದಂತೆ ಇನ್ನಿತರ ಕಲೆಗಳ ನೆಲೆವೀಡು. ಗೇರು ಬೀಜ ಉದ್ಯಮ, ಅಕ್ಕಿ ಮಿಲ್ಲುಗಳು, ವಿವಿಧ ಉದ್ಯಮಗಳು ಉತ್ತಮ ವ್ಯವಹಾರದೊಂದಿಗೆ ಆರ್ಥಿಕತೆಗೆ ಸಹಕಾರಿಯಾಗಿವೆ. ಆಧುನಿಕ ಜೀವನ ತ್ವರಿತಗತಿಯಲ್ಲಿ ಸಾಗುತ್ತಿದ್ದಂತೆ ನಾವು ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ. ಸಾಹಿತ್ಯವು ಮುಂದಿನ ಜೀವನಕ್ಕೆ ಸ್ಫೂರ್ತಿ ನೀಡುತ್ತದೆ.
    ಯೋಗೀಶ್ ಭಟ್, ಅಧ್ಯಕ್ಷ, ಅವಿಭಜಿತ ದ.ಕ. ಜಿಲ್ಲಾ ಜವಳಿ ವರ್ತಕರ ಸಂಘ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts