More

    ಮುರುಘಾ ಪರಂಪರೆಗೆ ರಾಜ ವಶಂಸ್ಥರಿಂದ ಗೌರವ ಸಮರ್ಪಣೆ

    ಮುರುಘಾ ಪರಂಪರೆಗೆ ರಾಜ ವಶಂಸ್ಥರಿಂದ ಗೌರವ ಸಮರ್ಪಣೆಮುರುಘಾ ಪರಂಪರೆಗೆ ರಾಜ ವಶಂಸ್ಥರಿಂದ ಗೌರವ ಸಮರ್ಪಣೆ
    ಚಿತ್ರದುರ್ಗ: ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಈ ಬಾರಿ ಜನಪದ ಉತ್ಸವದ ಬದಲು,ಬುಧವಾರ ಕಾರು ಮತ್ತು ಬೈಕ್ ರ‌್ಯಾಲಿ ಹೆಬ್ಬಾಳ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮೂಲಕ ಬೆಟ್ಟಕ್ಕೆ ತೆರಳಿತು. ಈ ವೇಳೆ ಶ್ರೀಗಳಿಗೆ ರಾಜ ವಶಂಸ್ಥರು ಗೌರವ ಸಮರ್ಪಿಸಿದರು.
    ಶ್ರೀ ಮಠದ ಆವರಣದಲ್ಲಿ ಮಧ್ಯಾಹ್ನ ತೆರೆದ ವಾಹನದಲ್ಲಿ ಪರಂಪರೆಯ ಹಿರಿಯ ಗುರು ಮುರುಗಿ ಶಾಂತವೀರ ಸ್ವಾಮೀಜಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ಬಸವಣ್ಣ ಅವರ ಭಾವಚಿತ್ರ ಪ್ರತಿಷ್ಠಾಪಿಸಿದ ಬಳಿಕ ರ‌್ಯಾಲಿಗೆ ಚಾಲನೆ ನೀಡಲಾಯಿತು. ದಾವಣಗೆರೆ ರಸ್ತೆ,ಗಾಂಧಿ ವೃತ್ತ,ಬಿಡಿ ರಸ್ತೆ,ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಂಚರಿಸಿತು. ರ‌್ಯಾಲಿ ಸಾಗಿದ ಮಾರ್ಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮದಕರಿ ನಾಯಕರ ಪ್ರತಿಮೆಗಳಿಗೆ ಉತ್ಸವ ಸಮಿತಿ ಹಲವು ಪ್ರಮುಖರು ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ, ಕೋಟೆಗೆ ತೆರಳಿದರು.
    ಅಲ್ಲಿಂದ ಮೇಲುದುರ್ಗದಲ್ಲಿ ಇರುವ ಮುರುಘಾಮಠದವರೆಗೂ ನಾನಾ ಮಠಾಧೀಶರು,ಭಕ್ತರು ಕಾಲುನಡಿಗೆಯಲ್ಲಿ ಸಾಗಿದರು. ಅಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಾಜ ಬಿಚ್ಚುಗತ್ತಿ ಭರಮಣ್ಣನಾಯಕ ವೇದಿಕೆಯಲ್ಲಿ ಮುರುಘಾ ಪರಂಪರೆಗೆ ರಾಜವಶಂಸ್ಥರಾದ ಪರಶು ರಾಮ ನಾಯಕ,ಪಿ.ಕಿರಣ್‌ಕುಮಾರ್,ಪ್ರಸನ್ನಕುಮಾರ್,ವಸಂತಕುಮಾರ್ ಭಕ್ತಿ ಪೂರ್ವಕವಾಗಿ ಗೌರವ ಸರ್ಮರ್ಪಿಸಿದರು.
    ಗೌರವ ಸ್ವೀಕರಿಸಿ ಆಶೀವರ್ಚನ ನೀಡಿದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಅವರು,ರಾಜ ವಂಶಸ್ಥರು ನೀಡುತ್ತಿರುವ ಗುರು ಕಾಣಿಕೆ ಗುರು ಪರಂಪರೆ ಭಕ್ತಿಗೆ ಸಾಕ್ಷಿಯಾಗಿದೆ. ಗೌರವ ಪೂರ್ವಕವಾಗಿ ಗುರುಗಳಿಗಾಗಿ ಮಠ ಕಟ್ಟಿಸಿಕೊಟ್ಟಿರುವ ಪಾಳೇಗಾರರ ವಂಶವಿದು. ಈ ರೀತಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ,ಮುರುಘಾಮಠಕ್ಕೆ ಗತ ವೈಭವವಿದೆ. ರಾಜ್ಯದ ಮೂಲೆ ಮೂಲೆ ಗಳಲ್ಲೂ ಅಸಂಖ್ಯಾತ ಭಕ್ತರಿದ್ದಾರೆ. ಇಲ್ಲಿ ಪ್ರತಿ ವರ್ಷ ನಡೆಯುವ ಉತ್ಸವ ಗುರು-ಶಿಷ್ಯರ ನಡುವಿನ ಉತ್ತಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಈ ಗುರುಶಿಷ್ಯ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು. ನೂರಾರು ವರ್ಷಗಳಿಂದಲೂ ಕೋಟೆಯಲ್ಲಿ ರಾಜವಂಶಸ್ಥರು ಗೌರವ ಸಮರ್ಪಿಸುತ್ತಿದ್ದಾರೆ ಎಂದರು.

    ಸಮಿತಿ ಗೌರವಾಧ್ಯಕ್ಷ ವಿಜಯಪುರ ಗಾಣಿಗ ಗುರುಪೀಠದ ಡಾ.ಬಸವಕುಮಾರ ಸ್ವಾಮೀಜಿ,ಬಸವಪ್ರಭು ಸ್ವಾಮೀಜಿ, ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ,ಡಾ.ಬಸವ ರಮಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಮೈಸೂರಿನ ಬಸವಲಿಂಗಮೂರ್ತಿ ಸ್ವಾಮೀಜಿ, ತಿಳುವಳ್ಳಿ ಬಸವಾ ನಿರಂಜನ ಸ್ವಾಮೀಜಿ, ಬ್ಯಾಡಿಗಿಯ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಶಿಕಾರಿಪುರದ ಚೆನ್ನಬಸವ ಸ್ವಾಮೀಜಿ,ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ವಸ್ತ್ರಮಠ್,ಜಿ.ಎಸ್.ಅನಿತ್‌ಕುಮಾರ್, ಜ್ಞಾನಮೂರ್ತಿ,ಕೆಇಬಿ ಷಣ್ಮುಖಪ್ಪ,ಆನಂದಪ್ಪ,ಹನುಮಂತಪ್ಪ ದುರ್ಗ,ರಾಜಣ್ಣ,ಮರುಳರಾಧ್ಯ,ಸೈಟ್‌ಬಾಬಣ್ಣ ಮೊದಲಾದ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts