More

    ಬೆಲೆ ಕುಸಿತ: ಜಿಲ್ಲಾಡಳಿತ ಭವನದ ಎದುರು ದ್ರಾಕ್ಷಿ ಸುರಿದು ರೈತರ ಆಕ್ರೋಶ

    ಚಿಕ್ಕಬಳ್ಳಾಪುರ: ಸತತ ಮಳೆಯಿಂದಾಗಿ ದ್ರಾಕ್ಷಿ ಫಸಲು ಹಾಳಾಗಿದ್ದು, ಕೋಟ್ಯಾಂತರ ಬೆಲೆಯ ದ್ರಾಕ್ಷಿ ತೋಟದಲ್ಲೇ ಕೊಳೆತುಹೋಗಿದೆ.ದ್ರಾಕ್ಷಿ ಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ ಆಕ್ರೋಶಗೊಂಡ ರೈತರು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿ ದ್ರಾಕ್ಷಿ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸತತ ಮಳೆಯಿಂದ ದ್ರಾಕ್ಷಿ ಫಸಲು ಕೊಳ್ಳೋರಿಲ್ಲದೇ ತೋಟದಲ್ಲೇ ದ್ರಾಕ್ಷಿ ಕೊಳೆಯುತ್ತಿದೆ. ನೂರಾರು ಎಕರೆಯಲ್ಲಿ ಬೆಳೆಯಲಾದ ದ್ರಾಕ್ಷಿಯನ್ನು ಈಗ ಕೊಳ್ಳೋರಿಲ್ಲ.

    ಚಿಕ್ಕಬಳ್ಳಾಪುರ ಜಿಲ್ಲೆಯ ದ್ರಾಕ್ಷಿ ಬೆಲೆಗೂ ಹೆಸರುವಾಸಿಯಾಗಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಇದೀಗ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ದ್ರಾಕ್ಷಿ ಮಣ್ಣುಪಾಲಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ದ್ರಾಕ್ಷಿ ಸುರಿದು ರೈತರ ದ್ರಾಕ್ಷಿಗೆ ಸೂಕ್ತ ಬೆಲೆ ಒದಗಿಸುವಂತೆ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. (ದಿಗ್ವಿಜಯ ನ್ಯೂಸ್​)

    ಕೆನಡಾ ಸಂಸತ್​​ನಲ್ಲಿ ಕನ್ನಡದ ಕಂಪು: ಕುವೆಂಪು ಅವರ ಗೀತೆ ಹಾಡಿದ ಸಂಸದನ ವಿಡಿಯೋ ವೈರಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts