More

    ಉಡುಪಿಯಲ್ಲೂ ಧಾರಾಕಾರ ಮಳೆ

    ಉಡುಪಿ: ಜಿಲ್ಲೆಯಲ್ಲಿ ಕುಂದಾಪುರ ಮತ್ತು ಕಾರ್ಕಳ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಸ್ವರ್ಣಾ, ಸೌಪರ್ಣಿಕಾ, ಚಕ್ರ, ಕುಬ್ಜಾ, ವಾರಾಹಿ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿವೆ. ಶನಿವಾರ ಹಗಲು ಜಿಲ್ಲೆಯಲ್ಲಿ 123 ಮಿ.ಮೀ. ಮಳೆ ದಾಖಲಾಗಿದೆ.

    ಎಣ್ಣೆಹೊಳೆ, ಸ್ವರ್ಣಾ ನದಿಯ ಜಲಾನಯನ ಪ್ರದೇಶದ ಪಶ್ಚಿಮಘಟ್ಟ ಮತ್ತು ತಪ್ಪಲು ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಬಜೆ ಡ್ಯಾಂ ಬಳಿ 10.5 ಮೀಟರ್ ಮಟ್ಟದಲ್ಲಿ ನೀರು ಹರಿಯುತ್ತಿದೆ. ಡ್ಯಾಂ ಮಟ್ಟಕ್ಕಿಂತ 5 ಮೀ. ಎತ್ತರದಲ್ಲಿ ನೀರಿನ ಹರಿವು ಹೆಚ್ಚಿದೆ. ನದಿ ಪಾತ್ರದ ಜನತೆಗೆ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

    ಹೆಜಮಾಡಿಯಿಂದ ಶಿರೂರುವರೆಗೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್66) ಅಸಮರ್ಪಕ, ಅಪೂರ್ಣ ಕಾಮಗಾರಿ ಪರಿಣಾಮ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಸಮಸ್ಯೆಯಾಗಿದ್ದು, ಅಲ್ಲಲ್ಲಿ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿತ್ತು.
    ಸಮುದ್ರದ ಅಬ್ಬರ ಹೆಚ್ಚಿದ್ದು, ಪಡುಬಿದ್ರಿ, ಕೋಡಿ, ಮರವಂತೆ, ಮಲ್ಪೆ ಭಾಗದಲ್ಲಿ ಕಡಲ್ಕೊರೆತ ಮುಂದುವರಿದಿದೆ.
    ಶನಿವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳಲ್ಲಿ ಉಡುಪಿ 94.6 ಕುಂದಾಪುರ 128.0, ಕಾರ್ಕಳ 136 ಮಿ.ಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts