More

    ಮಜೂರು ಕರಂದಾಡಿ ಏಳು ಮನೆ ಸ್ಥಳಾಂತರ, ಕಾಪು ತಾಲೂಕಿನ ತಗ್ಗು ಪ್ರದೇಶಗಳಲ್ಲಿ ನೆರೆಭೀತಿ

    ಪಡುಬಿದ್ರಿ: ಪುನರ್ವಸು ಮಳೆ ಅಬ್ಬರದಿಂದ ಕಾಪು ತಾಲೂಕಿನ ತಗ್ಗು ಪ್ರದೇಶಗಳಲ್ಲಿ ನೆರೆಭೀತಿ ಎದುರಾಗಿದ್ದು, ಹಲವೆಡೆ ಸಂಪರ್ಕ ರಸ್ತೆಗಳು ಹಾಗೂ ಮನೆಗಳಿಗೆ ನೀರು ನುಗ್ಗಿದೆ. ಮಜೂರು ಕರಂದಾಡಿ ಪ್ರದೇಶದಲ್ಲಿ 7 ಮನೆಗಳ 20 ಜನ ಸ್ಥಳಾಂತರಗೊಂಡಿದ್ದು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
    ಪಾದೆಬೆಟ್ಟು ಗ್ರಾಮದ ಹೊಯಿಗೆತೋಟದಲ್ಲಿ ಎರಡು ಮನೆಗಳಿಗೆ ನೀರು ನುಗ್ಗಿದ್ದು, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪ್ರಾಂಗಣ ಸಹಿತ ಸುತ್ತುಪೌಳಿ ಆವರಣ ಜಲಾವೃತವಾಗಿದೆ. ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಕೊಂಬೆಟ್ಟು ಪರಿಸರದಲ್ಲಿ ನೆರೆ ಉಂಟಾಗಿ ಕೆಲಮನೆಗಳಿಗೆ ತೊಂದರೆಯಾಗಿದೆ. ಪಲಿಮಾರಿನ ಮಠದ ಬೈಲು, ಪುಂಜಮಾರ್, ಅಣೆಕಟ್ಟು, ಅಡ್ವೆ ಬೈಲು, ಸಾಂತೂರು ವ್ಯಾಪ್ತಿಯ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಎರ್ಮಾಳು-ಅದಮಾರು ರಸ್ತೆಯಲ್ಲಿ ನೆರೆ ಉಕ್ಕಿ ಹರಿದು ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಚರಂಡಿಯಿಲ್ಲದೆ ಕೆಲವೆಡೆ ಕೃತಕ ನೆರೆ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts