More

    ಬೊಮ್ಮನಹಳ್ಳಿ, ಕೊಡಸಳ್ಳಿ ಅಣೆಕಟ್ಟೆಗಳಿಂದಲೂ ನೀರು ಹೊರಕ್ಕೆ

    ಕಾರವಾರ: ಜಿಲ್ಲೆಯಲ್ಲಿ ಭಾರಿ ಗಾಳಿ, ಮಳೆಯಾಗುತ್ತಿದ್ದು, ನದಿಗಳು ಕೆನ್ನೀರಿನಿಂದ ಉಕ್ಕಿ, ರಸ್ತೆ, ಸೇತುವೆಗಳ ಮೇಲೆ ಹರಿಯುತ್ತಿವೆ.
    ಹಳಿಯಾಳ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಬೊಮ್ಮನಹಳ್ಳಿ ಅಣೆಕಟ್ಟೆಯ ಗೇಟ್ ತೆರೆದು 5 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

    ಕೊಡಸಳ್ಳಿ ಅಣೆಕಟ್ಟೆಗೆ ಭಾನುವಾರ ಸಾಯಂಕಾಲದ ಹೊತ್ತಿಗೆ 21,913 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 69.50 ಮೀಟರ್ ನೀರು ತುಂಬಿದೆ.

    ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 75 ಮೀಟರ್ ಇದ್ದರೂ ಸುರಕ್ಷತೆಯ ದೃಷ್ಟಿಯಿಂದ 5 ಗೇಟ್‌ಗಳನ್ನು ತೆರೆದು 15,128 ಕ್ಯೂಸೆಕ್, ವಿದ್ಯುತ್ ಉತ್ಪಾದನೆ ಮಾಡಿ 13,750 ಕ್ಯೂಸೆಕ್ ಸೇರಿ ಒಟ್ಟಾರೆ 28,878 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

    ಕದ್ರಾ ಜಲಾಶಯಕ್ಕೆ 55,315 ಕ್ಯೂಸೆಕ್ ನೀರು ಬರುತ್ತಿದ್ದು, 6 ಗೇಟ್‌ಗಳಿಂದ 51,315 ಕ್ಯೂಸೆಕ್ ಹಾಗೂ ವಿದ್ಯುತ್ ಉತ್ಪಾದನೆ ಮಾಡಿ 19,989 ಕ್ಯೂಸೆಕ್ ಸೇರಿ 71,304 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

    ಸೂಪಾ ಜಲಾಶಯಕ್ಕೆ 51,435 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರತಿ ದಿನ ಸುಮಾರು ಒಂದುವರೆ ಮೀಟರ್‌ನಷ್ಟು ನೀರು ಅಣೆಕಟ್ಟೆಯಲ್ಲಿ ಹೆಚ್ಚುತ್ತಿದೆ.
    ಸದ್ಯ ಕಾಳಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಯಾವುದೇ ಮನೆಗಳಿಗೆ ನೀರು ನುಗ್ಗಿಲ್ಲ. ರಸ್ತೆಗಳು ಬಂದಾಗಿಲ್ಲ. ನೀರು ಹೊರ ಬಿಡುವ ಪ್ರಮಮಾಣವನ್ನು 80 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಿದರೆ ಕೆಲವು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಕಾರವಾರ ತಹಸೀಲ್ದಾರ್ ನಿಶ್ವಲ ನರೋನಾ ತಿಳಿಸಿದ್ದಾರೆ.
    ಗಂಗಾವಳಿ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿಯ ಅಚ್ಚುಕಟ್ಟು ಪ್ರದೇಶಗಳಾದ ಧಾರವಾಡ ಜಿಲ್ಲೆಯ ಕೆಲ ಭಾಗಗಳು, ಯಲ್ಲಾಪುರ, ಶಿರಸಿ ಜಿಲ್ಲೆಗಳಲ್ಲಿ ಮಳೆ ವ್ಯಾಪಕವಾಗಿರುವುದರಿಂದ ನದಿಗೆ ಹರಿದು ಬರುತ್ತಿರುವ ನೀರು ತಾಸಿಂದ ತಾಸಿಗೆ ಏರುತ್ತಿದೆ.

    ಭಾನುವಾರ ಸಾಯಂಕಾಲದ ಹೊತ್ತಿಗೆ ಗುಳ್ಳಾಪುರ ಬಿದ್ದು ಹೋದ ಸೇತುವೆಯ ಮೇಲ್ಭಾಗದವರೆಗೂ ನೀರು ಬಂದಿತ್ತು. ಗಂಗಾವಳಿ ದಡದ ಗ್ರಾಮಗಳ ಮನೆ ಬಾಗಿಲಿಗೆ ನೀರು ಬಂದಿದ್ದು, ರಾತ್ರಿ ಮನೆಗಳಿಗೆ ನೀರು ನುಗ್ಗದೇ ಇರಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ.

    ಇದನ್ನೂ ಓದಿ:ಕ್ಯಾಸಲರಾಕ್-ಗೋವಾ ರಸ್ತೆ ಬಂದ್


    ಮಳೆಯ ಪ್ರಮಾಣ-ಭಾನುವಾರ ಬೆಳಗಿನ ವರದಿಯಂತೆ ಅಂಕೋಲಾ-61, ಭಟ್ಕಳ-133.4, ದಾಂಡೇಲಿ-112.4, ಹಳಿಯಾಳ-104.2, ಹೊನ್ನಾವರ-74.1, ಜೊಯಿಡಾ-90.4, ಕಾರವಾರ-77.9, ಕುಮಟಾ-117.6, ಮುಂಡಗೋಡ-32.4, ಸಿದ್ದಾಪುರ-126.4, ಶಿರಸಿ-85, ಯಲ್ಲಾಪುರ-105.4 ಮಿಮೀ ಮಳೆಯಾಗಿದೆ.

    ಮನೆಗಳಿಗೆ ಹಾನಿ:
    ಶಿರಸಿಯಲ್ಲಿ ಒಂದು ಮನೆಗೆ ಸಂಪೂರ್ಣ ಹಾನಿಯಾಗಿದೆ. ಹಳಿಯಾಳ ಮತ್ತು ಜೊಯಿಡಾದ ತಲಾ 1 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಭಟ್ಕಳದ-4, ಹೊನ್ನಾವರ, ಜೊಯಿಡಾದಲ್ಲಿ ತಲಾ-2, ಕುಮಟಾ, ಶಿರಸಿ, ಯಲ್ಲಾಪುರದಲ್ಲಿ ತಲಾ 3 ಸೇರಿ 17 ಮನೆಗಳಿಗೆ ಅಲ್ಪ ಹಾನಿಯಾಗಿದೆ.
    ……..
    ಜಲಾಶಯಗಳ ನೀರಿನ ಮಟ್ಟ
    ಅಣೆಕಟ್ಟೆ ಗರಿಷ್ಠ ಮಟ್ಟ ಇಂದಿನ ಮಟ್ಟ
    ಕದ್ರಾ 34.50 30.49
    ಕೊಡಸಳ್ಳಿ 75.50 69.50
    ಸೂಪಾ 564.00 536.15
    ಗೇರುಸೊಪ್ಪ 55.00 52.71

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts