More

    ಪ್ರೀತೀಲಿ ಮೋಸ ಹೋದ ಯುವತಿಯಿಂದ ಮಾಜಿ ಲವರ್​ಗೆ 1 ಟನ್​ ಈರುಳ್ಳಿ ಗಿಫ್ಟ್​: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ?

    ಬೀಜಿಂಗ್​: ಪ್ರೀತಿಯಲ್ಲಿ ಮೋಸ ಹೋದ ಯುವತಿಯೊಬ್ಬಳು ತನ್ನ ಮಾಜಿ ಬಾಯ್​ಫ್ರೆಂಡ್​ಗೆ ಬರೋಬ್ಬರಿ ಒಂದು ಟನ್​ ಈರುಳ್ಳಿಯನ್ನು ಕಳುಹಿಸಿ ಕೊಡುವ ಮೂಲಕ ಸೇಡು ತೀರಿಸಿಕೊಂಡಿದ್ದಾಳೆ.

    ಇದನ್ನೂ ಓದಿ: 13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ಅಯ್ಯೋ ಪ್ರೀತಿಯಲ್ಲಿ ಮೋಸ ಹೋಗಿದ್ದಕ್ಕೆ ಈರುಳ್ಳಿ ಏಕೆ ಕಳುಹಿಸಿದಳು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಬಂದಿರಬಹುದು ಅದಕ್ಕೆ ಉತ್ತರ ಇಲ್ಲಿದೆ ಓದಿ… ಪ್ರೇಮ ವಂಚನೆಯಿಂದ ತಾನೆಷ್ಟು ನೊಂದು ಕಣ್ಣೀರು ಹಾಕಿದ್ದೇನೋ, ಅಷ್ಟೇ ಕಣ್ಣೀರು ಆತನ ಕಣ್ಣಿಂದಲೂ ಸುರಿಯಲಿ ಎಂಬ ಕಾರಣದಿಂದ ಆಕೆ ಈರುಳ್ಳಿಯನ್ನು ಬಾಯ್​ಫ್ರೆಂಡ್​ ಮನೆಗೆ ಕಳುಹಿಸಿಕೊಟ್ಟಿದ್ದಾಳೆ.

    ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಯುವತಿಯನ್ನು ಆಕೆಯ ಉಪನಾಮ ಝಾವೋ ಎಂದು ಗುರುತಿಸಲಾಗಿದ್ದು, ವರ್ಷಕ್ಕಿಂತಲೂ ಹೆಚ್ಚು ಕಾಲ ಪ್ರೀತಿ ಮಾಡಿದ ಬಾಯ್​ಫ್ರೆಂಡ್ ಇದೀಗ ಕೈಕೊಟ್ಟಿದ್ದು, ಆಕೆಯ ಹೃದಯ ಭಗ್ನಗೊಂಡಿದೆ. ಹೀಗಾಗಿ ಆತನಿಗೆ ಟನ್​ಗಟ್ಟಲೇ ಈರುಳ್ಳಿಯನ್ನು ಕಳುಹಿಸಿಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಬಸ್​ಗಾಗಿ ಪ್ರಯಾಣಿಕರು ಕಾಯೋದು ಸಾಮಾನ್ಯವಾದ್ರೆ, ಇಲ್ಲಿ ಪ್ರಯಾಣಿಕರಿಗಾಗಿ ಬಸ್​ಗಳೇ ಕಾಯುತ್ತಿವೆ!

    ತನ್ನನ್ನು ವಂಚಿಸಿದ ಪಾಪವೂ ಆತನ ಕಣ್ಣಲ್ಲಿ ಸ್ವಲ್ಪವು ಕಾಡದಿರುವುದನ್ನು ಗೆಳತಿಯರ ಬಳಿ ತಿಳಿದುಕೊಂಡ ಝಾವೋ ಈ ನಿರ್ಧಾರಕ್ಕೆ ಬಂದಳು. ಆದರೆ, ಝಾವೋ ಮೂರು ದಿನ ಆತನ ನೆನಪಲ್ಲಿ ಕಣ್ಣೀರಿಟ್ಟಿದ್ದಳಂತೆ. ಆನ್​ಲೈನ್​ನಲ್ಲಿ ಒಂದು ಟನ್​ ಈರುಳ್ಳಿಗೆ ಆರ್ಡರ್​ ನೀಡಿದ್ದ ಆಕೆ, ಅದನ್ನು ಡೆಲಿವರಿ ಬಾಯ್​ ಸಹಾಯದಿಂದ ಬಾಯ್​ಫ್ರೆಂಡ್​ ಮನೆಯ ಬಾಗಿಲಿನ ಮುಂದಿಟ್ಟು, ನಾನು ಮೂರು ದಿನಗಳವರೆಗೆ ಕಣ್ಣೀರಿಟ್ಟಿದ್ದೇನೆ. ಇದೀಗ ನಿನ್ನ ಸರದಿ ಎಂದು ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾಳೆ ಎಂದು ತಿಳಿದುಬಂದಿದೆ.

    ಮಾಜಿ ಬಾಯ್​ಫ್ರೆಂಡ್​ ಮನೆಯಲ್ಲಿ ಇಲ್ಲದಿದ್ದ ಕಾರಣ ಡೆಲಿವರಿ ಬಾಯ್​ ಸುಮಾರು 4 ಗಂಟೆಗಳ ಈರುಳ್ಳಿಯನ್ನು ಅನ್​ಲೋಡ್​ ಮಾಡಿದ್ದಾನೆ.

    ಇದನ್ನೂ ಓದಿ: ಯಾರೂ ಊಹಿಸಿರದ ಗುಟ್ಟೊಂದನ್ನು ರಟ್ಟು ಮಾಡಿದ್ರೂ ಡೊನಾಲ್ಡ್​ ಟ್ರಂಪ್​…!

    ಪ್ರೀತಿ ಮುರಿದು ಬೀಳಲು ಕಾರಣ ಏನೆಂಬುದನ್ನು ಝಾವೋ ಮಾಜಿ ಪ್ರೇಯಸಿ ಆನಂತರ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದು, ಮಾಜಿ ಪ್ರೇಯಸಿ ತುಂಬಾ ನಾಟಕೀಯ ಸ್ವಭಾವದವಳು. ಲವ್​ ಬ್ರೇಕಪ್​ ಆದಾಗಿನಿಂದಲೂ ನಾನು ಅಳಲಿಲ್ಲ ಎಂದು ಅವಳು ಹೇಳುತ್ತಿದ್ದಾಳೆ. ಅಳದಿದ್ದಕ್ಕಾಗಿ ನಾನು ಕೆಟ್ಟ ವ್ಯಕ್ತಿ ಎಂದು ನಿರ್ಧರಿಸುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಲಸಿಕೆ ಮಾನವರ ಮೇಲೂ ಯಶಸ್ವಿ..! ವರ್ಷಾಂತ್ಯಕ್ಕೆ ಬಳಕೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts