More

    ರಕ್ತದಾನದಿಂದ ಹೃದ್ರೋಗ ದೂರ

    ಬಂಕಾಪುರ: ರಕ್ತದಾನ ಜೀವದಾನವಾಗಿದ್ದು, ನಾವು ನೀಡುವ ರಕ್ತದಿಂದ ನಮ್ಮಲ್ಲಿರುವ ಕಬ್ಬಿಣದ ಅಂಶ ಕಡಿಮೆಯಾಗಿ ಹೃದ್ರೋಗವನ್ನು ತಡೆಗಟ್ಟುವುದಲ್ಲದೇ ಮತ್ತೊಂದು ಜೀವಕ್ಕೆ ವರದಾನವಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕ ಗಂಗಾಧರ ಮಾಮ್ಲೇಪಟ್ಟಣಶೆಟ್ಟರ ಹೇಳಿದರು.

    ಪಟ್ಟಣದ ಹಿಂದು ಮಹಾ ಗಣಪತಿ ಸೇವಾ ಸಮಿತಿ ಆಶ್ರಯದಲ್ಲಿ 40ನೇ ವರ್ಷದ ಶ್ರೀ ಗಜಾನನ ಪ್ರತಿಷ್ಠಾಪನೆ ಅಂಗವಾಗಿ, ಕಿಮ್್ಸ ಹುಬ್ಬಳ್ಳಿ, ರಕ್ತನಿಧಿ ಕೇಂದ್ರ ರಾಣೆಬೆನ್ನೂರ ಸಹಯೋಗಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ರಾಣೆಬೆನ್ನೂರ ರಕ್ತನಿಧಿ ಕೇಂದ್ರದ ಸಂತೋಷ ನೆಲ್ಲಿಕೊಪ್ಪ ಮಾತನಾಡಿ, ನಾವು ಮಾಡುವ ರಕ್ತದಾನದಿಂದ ರಕ್ತದಾನಿ ಮೈಯಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಉಲ್ಲಾಸಮಯ, ಆರೋಗ್ಯಯುತ ಜೀವನವನ್ನು ನಡೆಸಬಹುದಾಗಿದೆ. ಹಿಂದು ಮಹಾ ಗಣೇಶ ಸೇವಾ ಸಮಿತಿ ಸದಸ್ಯರು ಪ್ರತಿ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಧಾರ್ವಿುಕ ಕಾರ್ಯಕ್ರಮಗಳ ಜತೆಗೆ ಇಂತಹ ರಕ್ತದಾನದಂತಹ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿರುವುದು ಅವರ ಸೇವಾ ಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

    ಹಿಂದು ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಬಳಿಗಾರ, ಸೋಮಶೇಖರ ಗೌರಿಮಠ, ಮೋಹನ ಮಿರಜಕರ, ಶಿವಾನಂದ ದೇವಸೂರ, ನಿಂಗಪ್ಪ ಹೊಸಮನಿ ರಕ್ತನಿಧಿ ಕೇಂದ್ರದ ವಿಶ್ವನಾಥ ದಾಸರ, ದೀಪಾ, ರೇಷ್ಮಾ, ಪ್ರಶಾಂತ, ಅಭಿಷೇಕ, ವಾಸಂತಿ ಸೇರಿದಂತೆ ಶ್ರೀ ಹಿಂದು ಮಹಾಗಣಪತಿ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts