More

    ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಆತಂಕ ದೂರ

    -ಡಾ.ಬಿ.ಎಂ.ಹೆಗ್ಡೆ, ಖ್ಯಾತ ವೈದ್ಯರು

    ಕರೊನಾ ವೈರಸ್ ಕುರಿತು ಭಯ ಹುಟ್ಟಿಸುವ ಕೆಲಸ ವ್ಯಾಪಕವಾಗಿ ನಡೆಯುತ್ತಿದ್ದು, ಇದೇ ಜನರನ್ನು ಅರ್ಧ ಸಾಯಿಸುತ್ತಿದೆ. ಈಗಾಗಲೇ ಸಾವಿರಾರು ವೈರಸ್‌ಗಳು ಬಂದು ಹೋಗಿದ್ದು, ಇದೂ ಕೂಡ ಅದೇ ರೀತಿ. ನಾವು ಜಾಗರೂಕರಾಗಿದ್ದರೆ ಕರೊನಾದಂತಹ ಯಾವುದೇ ವೈರಸ್‌ಗಳು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ.

    ಕರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮಾಡಬೇಕಾದ ಮೊದಲ ಕಾರ್ಯವೆಂದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು. ಇದು ಹೆಚ್ಚಾದರೆ ಕರೊನಾ ಮಾತ್ರವಲ್ಲ, ಯಾವುದೇ ರೋಗಗಳು ನಮ್ಮನ್ನು ಬಾಧಿಸುವುದಿಲ್ಲ. ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುವುದರಿಂದ ವೈದ್ಯನಾಗಿ ಜಿಲ್ಲೆಯ ಜನರಲ್ಲಿ ವಿನಂತಿಯೆಂದರೆ ಸ್ವಲ್ಪ ದಿನದ ಮಟ್ಟಿಗೆ ಗುಂಪಾಗಿ ಒಟ್ಟು ಸೇರುವುದನ್ನು ಬಿಡಬೇಕು.

    ಸರ್ಕಾರದ ಸೂಚನೆಯಂತೆ ಸಾಧ್ಯವಾದಷ್ಟು ಮನೆಯಲ್ಲೇ ಇರುವುದು ಉತ್ತಮ. ಜಿಲ್ಲೆಯ ಬಿಸಿಲಿಗೆ ರೋಗ ಬರುವುದಿಲ್ಲ ಎನ್ನುವುದು ಸುಳ್ಳು, ಯಾವುದೇ ವಾತಾರಣಕ್ಕಾದರೂ ವೈರಸ್‌ಗಳು ಹೊಂದಿಕೊಳ್ಳುತ್ತವೆ. ಕರೊನಾ ಕುರಿತು ಅದು ಹಾಗೆ-ಹೀಗೆ ಎಂದು ಹೇಳುವುದಕ್ಕಿಂತ ಅದು ಬಂದು ನಮ್ಮನ್ನು ಅಪ್ಪಿಕೊಳ್ಳದಂತೆ ಮಾಡುವುದೇ ಉತ್ತಮ.
    ಒಳ್ಳೆಯ ಹಣ್ಣು-ತರಕಾರಿಗಳನ್ನು ಸೇವಿಸುವುದು, ವ್ಯಾಯಾಮ ಮಾಡಿ ಉತ್ತಮ ದೇಹಾರೋಗ್ಯ ಕಾಪಾಡುವುದರಿಂದ ವೈರಸ್‌ನ ಆತಂಕ ದೂರ ಮಾಡಬಹುದು. ಸಾಮಾಜಿಕ ಅಂತರವೇ ಕರೊನಾಕ್ಕೆ ಉತ್ತಮ ಮದ್ದು.

    ವೈದ್ಯರು ಜನರಿಗೆ ಧೈರ್ಯ ಹೇಳುವ ಕೆಲಸ ಮಾಡಬೇಕೇ ಹೊರತು ತಮ್ಮಲ್ಲಿಗೆ ಬರುವವರನ್ನು ಮತ್ತಷ್ಟು ಹೆದರುವಂತೆ ಮಾಡಬಾರದು. ವೈದ್ಯರ ಸಾಂತ್ವನದ ಮಾತುಗಳೇ ಕೆಲವೊಂದು ಸಲ ಔಷಧಕ್ಕಿಂತ ಹೆಚ್ಚು ರೋಗಗಳನ್ನು ಉಪಶಮನ ಮಾಡುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ ಕಡಿಮೆ. ಇದಕ್ಕೆ ನಾವು ಅನುಸರಿಸಿಕೊಂಡು ಬಂದಿರುವ ಆಹಾರ ಪದ್ಧತಿಯೂ ಕಾರಣವಿರಬಹುದು. ನಮ್ಮ ಹಿರಿಯರ ಆಹಾರ, ಅಡುಗೆ ಪದ್ಧತಿಯೇ ಒಂದು ರೀತಿಯಲ್ಲಿ ಔಷಧವಾಗಿದ್ದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನಾದರೂ ನಾವು ಅದನ್ನು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts