More

    ಆರೋಗ್ಯವೇ ನಿಜವಾದ ಸಂಪತ್ತು

    ನಂದೇಶ್ವರ: ಆರೋಗ್ಯದ ಕುರಿತು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.

    ಸಮೀಪದ ಸತ್ತಿ ಗ್ರಾಮದ ಬಸವಶ್ರೀ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಪಾಟೀಲ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಡಾ.ಶ್ರೀಶೈಲ ಚೌಗಲಾ ಅವರು ಎಂ.ಡಿ. ಪದವಿ ಪಡೆದು ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು.

    ಪಿಕೆಪಿಎಸ್ ಅಧ್ಯಕ್ಷ ಬಿ.ಆರ್. ಪಾಟೀಲ, ಆರೋಗ್ಯ ರಕ್ಷಣೆಗೆ ಯೋಗ, ನಡಿಗೆ ಉತ್ತಮ ಮಾರ್ಗಗಳಾಗಿವೆ ಎಂದರು. ಬಿ.ಎಂ.ಪಾಟೀಲ, ಡಾ.ಶ್ರೀಶೈಲ ಚೌಗಲಾ, ಮೋಹನ ದೊಡ್ಡಮನಿ, ಮಲ್ಲಪ್ಪ ಹಂಚಿನಾಳ, ಬಸವರಾಜ ಶೀಲವಂತರ, ಬಸವರಾಜ ಹಂಚಿನಾಳ, ಧರೆಪ್ಪ ಠಕ್ಕಣ್ಣವರ, ಅಶೋಕ ಯಲಡಗಿ, ಶಿವಾನಂದ ಪಾಟೀಲ, ಡಾ.ಸುಮಂಗಲಾ ಚೌಗಲಾ, ಅಣ್ಣಪ್ಪ ಹುದ್ದಾರ, ಜಾವೀದ ಮುಲ್ಲಾ, ಶಂಕರ ಮಟ್ಟೆಪ್ಪನವರ, ರಾವಸಾಬ ಕಾಂಬಳೆ, ಶೇಖರ ಬಾಡಗಿ, ಬಸವಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಿದಾನಂದ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts