More

    ಯೋಗದಿಂದ ಆರೋಗ್ಯ ಸಂವೃದ್ಧಿ

    ವಿಜಯಪುರ: ಯೋಗ ಒಂದು ವ್ಯಾಯಾಮ ಮಾತ್ರವಲ್ಲದೇ ನಮಗೆ ವಿಶ್ವ ಮತ್ತು ಪ್ರಕೃತಿಯ ಜತೆಗೆ ಏಕತೆಯ ಅರ್ಥ ತಿಳಿಸಿಕೊಡುತ್ತದೆ ಎಂದು ಪ್ರಾಧ್ಯಾಪಕ ಎಂ.ಎಸ್. ಖೊದ್ನಾಪೂರ ಅಭಿಮತ ವ್ಯಕ್ತಪಡಿಸಿದರು.

    ನಗರದ ಅಥಣಿ ರಸ್ತೆಯ ಎನ್‌ಜಿಒ ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ಬುಧವಾರ ನಡೆದ 7 ದಿನಗಳ ಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಯೋಗಕ್ಕೆ ನಮ್ಮ ದೇಶದಲ್ಲಿ ಸುಮಾರು 6 ರಿಂದ 7 ಸಾವಿರ ವರ್ಷಗಳ ಇತಿಹಾಸವಿದೆ. ವ್ಯಕ್ತಿಯ ಮನಸ್ಸು ಮತ್ತು ದೇಹದಲ್ಲಿ ಸಮತೋಲನ ಕಾಪಾಡಲು ಸಹಕರಿಸುತ್ತದೆ. ಅಲ್ಲದೇ ಕ್ರಿಯೆ, ಸಂಯಮ, ಚಿಂತನೆ, ಏಕಾಗ್ರತೆ ಹೆಚ್ಚಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿಸುತ್ತದೆ. ನಮ್ಮ ಋಷಿ, ಮುನಿಗಳು ನೀಡಿದ ಈ ಯೋಗದ ಕೊಡುಗೆ ಇಂದು ಇಡೀ ಜಗತ್ತಿಗೆ ಆರೋಗ್ಯ ಸ್ವಾಸ್ಥೃ ಕಾಪಾಡುವ ಸಾಧನವಾಗಿದೆ ಎಂದರು.

    ಯೋಗಪಟು ಕೀರ್ತಿ. ಚ. ಮಠಪತಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಏನೆಲ್ಲವನ್ನು ಪಡೆಯಬಹುದಾಗಿದೆ. ಆದರೆ, ಆರೋಗ್ಯವೆಂಬ ಅಮೂಲ್ಯ ಸಂಪತ್ತನ್ನು ಪಡೆಯಲು ಯೋಗ, ಧ್ಯಾನ, ವ್ಯಾಯಾಮ ಮತ್ತು ದೈಹಿಕ ಕಸರತ್ತು ಮಾಡುವುದು ಅವಶ್ಯಕ. ಜನರ ಯೋಗ ಕ್ಷೇಮ, ಆರೋಗ್ಯ ಮತ್ತು ಸ್ವಾಸ್ಥೃ ಸಮಾಜಕ್ಕಾಗಿ ಯೋಗ ಶಿಬಿರ ಆಯೋಜಿಸುತ್ತಿರುವುದು ಆರೋಗ್ಯ ಪರವಾದ ಕಾಳಜಿಗೊಂದು ಉತ್ತಮ ನಿದರ್ಶನ ಎಂದರು.

    ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಶಿಬಿರದಲ್ಲಿ 150 ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಭಾಗಿಯಾಗಿದ್ದರು.

    ಲಕ್ಷ್ಮಣ ಸಿಂಧೆ, ಎಂ.ಆರ್. ಪಾಟೀಲ, ಬಾಬು ಕೋಲಕಾರ, ಭೀಮರಾಯ ಬಿರಾದಾರ, ಶಿವಪ್ಪ ಸಾವಳಗಿ, ನಾನಾಸಾಹೇಬ ಕೂಟನೂರ, ಆರ್.ಬಿ. ಬಿಜ್ಜರಗಿ, ಎಸ್.ಎಸ್. ತೆನಿಹಳ್ಳಿ, ಆರ್.ಎಂ. ಬಳವಲಗಿಡದ, ಎಸ್.ಎನ್. ನಿಂಗನಗೌಡ್ರ, ಶ್ರೀರಾಮ್ ದೇಶಪಾಂಡೆ, ಎಂ.ಆರ್. ಉಕುಮನಾಳಮಠ, ಎಂ.ಆರ್. ಪಾಟೀಲ, ಆರ್.ಎಂ. ಕುಮಟಗಿ, ಎಸ್.ಎಂ. ಹೂಗಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts