More

    ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿ, ಜ್ವರ, ಕೆಮ್ಮು ನಿರ್ಲಕ್ಷ್ಯ ಬೇಡ! ವೈದ್ಯರ ಸಲಹೆ ಪಡೆಯಿರಿ: ಹಿರಿಯ ವೈದ್ಯರ ಸಲಹೆ

    ಬೆಂಗಳೂರು: ನೆಗಡಿ, ಕೆಮ್ಮು, ಜ್ವರ, ಗಂಟಲು ಬೇನೆ ಲಕ್ಷಣ ಕಂಡುಬಂದರೆ ಸಾಮಾನ್ಯ ಕಾಯಿಲೆ ಎಂದು ನಿರ್ಲಕ್ಷಿಸಿ ಸುಮ್ಮನಿರುವುದು ಬೇಡ. ಅದು ಕರೊನಾ ಸೋಂಕು ತಗುಲಿರುವ ಮುನ್ಸೂಚನೆಯೂ ಆಗಿರಬಹುದು. ಹೀಗಾಗಿ ಮೆಡಿಕಲ್ ಶಾಪ್​ಗಳಲ್ಲಿ ಮಾತ್ರೆ, ಸಿರಪ್ ಪಡೆಯುವ ಬದಲು ಸ್ಥಳೀಯ ‘ಜ್ವರ ತಪಾಸಣಾ ಕೇಂದ್ರ’ಕ್ಕೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ.

    ಕರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿದೆ. ಎಚ್ಚೆತ್ತುಕೊಳ್ಳುವ ವೇಳೆಗಾಗಲೇ ರೋಗಿ ತನ್ನ ಕುಟುಂಬ, ಅಕ್ಕಪಕ್ಕದ ಸಮೂಹಕ್ಕೂ ಹರಡಿ ಇಡೀ ಸಮಾಜಕ್ಕೆ ಮಾರಕವಾಗುತ್ತಾನೆ. ಆದ್ದರಿಂದ ಈ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸ್ಥಳೀಯ ‘ಫೀವರ್ ಕ್ಲಿನಿಕ್​ನಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಬೇಕು. ಇದರಿಂದ ರೋಗವನ್ನು ಆರಂಭಿಕ ಹಂತದಲ್ಲೇ ಗುಣಪಡಿಸಿಕೊಳ್ಳಬಹುದಲ್ಲದೆ, ಅಪಾಯವನ್ನು ತಪ್ಪಿಸಿದಂತಾಗುತ್ತದೆ ಎಂದು ಹಿರಿಯ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

    ಸೋಂಕು ದೃಢಪಡುವುದಿಲ್ಲ: ವೈದ್ಯರ ಸಲಹೆ ಪಡೆಯದೆ ಸ್ವಯಂಪ್ರೇರಿತವಾಗಿ ಔಷಧ ಸೇವನೆ ಮಾಡಿದವರಲ್ಲಿ ತಪಾಸಣೆ ವೇಳೆ ಸೋಂಕು ದೃಢಪಡುವುದಿಲ್ಲ. ಇದರಿಂದ ಸೋಂಕು ಗಂಭೀರ ಹಂತ ತಲುಪುವ ವೇಳೆಗೆ ಮತ್ತಷ್ಟು ಜನರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಬೇಕಾಬಿಟ್ಟಿ ಔಷಧಗಳನ್ನು ಸೇವಿಸುವುದು ಬೇಡ. ಹೀಗಾಗಿ ಯಾವುದೇ ರೋಗ ಲಕ್ಷಣಗಳಿರಲಿ, ಶೀತ ಜ್ವರ ಇರಲಿ ಹತ್ತಿರದ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಅವರ ಸಲಹೆಗಳನ್ನು ತಪ್ಪದೆ ಪಾಲಿಸಿ ಎಂದು ಸಲಹೆ ಮಾಡಿದ್ದಾರೆ.

    ಜ್ವರ, ಕೆಮ್ಮು, ನಗಡಿ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇರಲಿ ವೈದ್ಯರ ಸಲಹೆ ಪಡೆದುಕೊಳ್ಳಿ. ಮೆಡಿಕಲ್ ಶಾಪ್​ಗಳ ಸಿಬ್ಬಂದಿ ವೈದ್ಯರ ಚೀಟಿ ಇಲ್ಲದೆ ಔಷಧ ನೀಡಬಾರದು. ಇಲ್ಲವಾದರೆ ರೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದನ್ನು ತಡೆಯಲು ನಗರದಲ್ಲಿ ಫೀವರ್ ಕ್ಲಿನಿಕ್ ತೆರೆಯಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ.
    | ಡಾ. ದೀಪಕ್  ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ

    ಡಾಕ್ಟರ್ vs ಡಾಕ್ಟರ್: ವೈದ್ಯ ಸಚಿವದ್ವಯರ ನಡುವೆ ಶೀತಲ ಸಮರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts