More

    ದುಡಿಮೆಯಷ್ಟೆ ಆರೋಗ್ಯಕ್ಕೂ ಕಾಳಜಿ ಇರಲಿ

    ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
    ಗ್ರಾಮೀಣ ಜನರು ದುಡಿಮೆಯಿಂದಾಗಿ ಆರೋಗ್ಯ ಕಾಳಜಿಯತ್ತ ಗಮನಹರಿಸುತ್ತಿಲ್ಲ. ದುಡಿಮೆ ಜತೆಗೆ ಆರೋಗ್ಯವೂ ಮುಖ್ಯ ಎಂದು ಅಗಳಕುಪ್ಪೆ ಗ್ರಾಪಂ ಅಧ್ಯಕ್ಷೆ ಗಂಗಮ್ಮ ಹೇಳಿದರು.
    ಸೋಂಪುರ ಹೋಬಳಿ ಅಗಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೆಲಮಂಗಲ ತಾಲೂಕು ಕಾರ್ಯನಿರ್ವಣಾಧಿಕಾರಿಗಳ ಕಾರ್ಯಲಯಹಾಗೂ ಅಗಳಕುಪ್ಪೆ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಗ್ರಾಮ ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಗ್ರಾಪಂ ಉಪಾಧ್ಯಕ್ಷೆ ಪ್ರಭಾವತಿ ಮಾತನಾಡಿ, ಜನರ ಆರೋಗ್ಯ ಸುಧಾರಿಸಲು ಇಂದು ಸರ್ಕಾರದಿಂದ ಉತ್ತಮ ತಜ್ಞ ವೈದ್ಯರಿಂದ ಗ್ರಾಮಗಳಲ್ಲೆ ಉಚಿತ ತಪಾಸಣೆ ಮಾಡುತ್ತಿದ್ದಾರೆ. ಅದರಲ್ಲೂ ನರೇಗಾ ಕಾರ್ಮಿಕರಿಗೆೆ ಉಚಿತ ತಪಾಸಣೆ ಮಾಡಿ ಉಚಿತ ಔಷಧ ನೀಡಲಾಗುತ್ತದೆ ಎಂದರು.
    ಎನ್‌ಆರ್‌ವೈಜಿ ಅಧಿಕಾರಿ ಹರೀಶ, ಶಿವಗಂಗೆ ಆರೋಗ್ಯಾಧಿಕಾರಿ ಡಾ.ರಂಗನಾಥ, ಅಗಳಕುಪ್ಪೆ ಗ್ರಾಪಂ ಪಿಡಿಒ ಎನ್.ನರಸಿಂಹಮೂರ್ತಿ, ಕಾರ್ಯದರ್ಶಿ ಕೆಂಪರಂಗಯ್ಯ, ದ್ವಿತಿಯ ದರ್ಜೆ ಸಹಾಯಕ ವಿಶ್ವನಾಥ, ತಾಲೂಕು ಸಂಯೋಜಕಿ ಕಲಾವತಿ , ಎಂ.ಬಿ.ಕೆ ಅನುಸೂಯಮ್ಮ, ಆಶಾಕಾರ್ಯಕರ್ತೆ ಪುಷ್ಪಾವತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts