More

    ಯಡೇಗೋಡನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಶಿಬಿರ

    ಹೊಳೆನರಸೀಪುರ: ಉತ್ತಮ ಜೀವನಶೈಲಿ ರೂಢಿಸಿಕೊಂಡರೆ ಜೀವನ ಪರ್ಯಂತ ಕಾಡಿಸುವ ಬಿಪಿ ಹಾಗೂ ಶುಗರ್‌ನಂತಹ ಕಾಯಿಲೆಗಳಿಂದ ದೂರ ಇರಬಹುದು ಎಂದು ದೊಡ್ಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಾವಿತ್ರಮ್ಮ ಸಲಹೆ ನೀಡಿದರು.

    ತಾಲೂಕಿನ ಯಡೇಗೋಡನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಮಾತನಾಡಿ, ಮುಂಜಾನೆಯೇ ನಡಿಗೆ ಅಥವಾ ವ್ಯಾಯಾಮ, ಸ್ನೇಹಿತರೊಂದಿಗೆ ಒಡನಾಟ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡರೆ ಆರೋಗ್ಯವಂತರಾಗಿರಬಹುದು ಎಂದರು.

    ರಕ್ತಹೀನತೆ ಉಂಟಾದಲ್ಲಿ ಹೆಚ್ಚು ದಣಿವಾಗುವ ಜತೆಗೆ ವ್ಯಕ್ತಿಯೂ ದುರ್ಬಲನಾಗುತ್ತಾನೆ. ರಕ್ತಹೀನತೆ ಗಂಭೀರ ಹಂತ ತಲುಪಿದಾಗ ಗೊಂದಲ, ತಲೆ ಸುತ್ತುವಿಕೆ, ಪ್ರಜ್ಞೆ ತಪ್ಪುವುದು, ವಿಪರೀತ ಬಾಯಾರಿಕೆ, ಎದೆನೋವು, ಹೃದಯ ಬಡಿತದಲ್ಲಿ ವ್ಯತ್ಯಾಸ ಇನ್ನಿತರ ಲಕ್ಷಣಗಳು ಕಾಣಿಸುತ್ತವೆ. ಆದ್ದರಿಂದ ಹೆಚ್ಚು ಕಬ್ಬಿಣಾಂಶವಿರುವ ಬಿಟ್‌ರೂಟ್, ಸೇಬು, ಕಿತ್ತಳೆಹಣ್ಣು, ನಿಂಬೆಹಣ್ಣು, ಪಪ್ಪಾಯಿ, ಟೊಮ್ಯಾಟೊ, ಪಾಲಕ್ ಸೊಪ್ಪು ಹೆಚ್ಚು ಬಳಸಬೇಕು ಎಂದು ಹೇಳಿದರು.
    ಬಾಲ್ಯ ವಿವಾಹ, ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು. ಆರೋಗ್ಯ ಶಿಬಿರದಲ್ಲಿ ಬಿಪಿ, ಶುಗರ್ ಪರೀಕ್ಷೆ ನಡೆಸಿ ಆರೋಗ್ಯ ಸಮಸ್ಯೆ ಇದ್ದ ಜನರಿಂದ ರಕ್ತದ ಮಾದರಿ ಸಂಗ್ರಹಿಸಲಾಯಿತು.

    ದೊಡ್ಡಹಳ್ಳಿ ಗ್ರಾಪಂ ಕಾರ್ಯದರ್ಶಿ ನಾಗೇಶ್, ವಿಆರ್‌ಎಂ ಕೃಷ್ಣೇಗೌಡ, ಕಾಯಕ ಮಿತ್ರ ಸೌಮ್ಯಾ, ಯೋಗೇಶ್, ಗ್ರಾಪಂ ಆರೋಗ್ಯ ತಾಲೂಕು ಸಂಯೋಜಕ ಐ.ಕೆ.ರಮೇಶ್, ಅಂಗನವಾಡಿ ಕಾರ್ಯಕರ್ತೆ ಸಾಕಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts