More

    ತಲೆನೋವು, ಅಜೀರ್ಣ, ಆಮಶಂಕೆಗಳಿಗೆ ರಾಮಬಾಣ ವೀಳ್ಯದೆಲೆ…

    ವೀಳ್ಯದೆಲೆಯಿಂದ ಆರೋಗ್ಯ…ಇಷ್ಟೆಲ್ಲ ಉಪಯೋಗವಿದೆ ನೋಡಿ..

    1. ಎರಡು ಕಪ್ ಕೊಬ್ಬರಿ ಎಣ್ಣೆಗೆ ಅರ್ಧ ಕಪ್ ವೀಳ್ಯದೆಲೆ ರಸ ಮತ್ತು ಅರ್ಧ ಕಪ್ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ತಲೆಗೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
    2. ವೀಳ್ಯದೆಲೆ ರಸದಲ್ಲಿ ಲವಂಗದ ಪುಡಿ ಬೆರೆಸಿ, ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಿಕೊಂಡರೆ ತೀವ್ರ ಹಲ್ಲುನೋವಿನಿಂದ ಬಿಡುಗಡೆ ಸಿಗುತ್ತದೆ. ಕಾಚು, ಲವಂಗ, ಪಚ್ಚಕರ್ಪರದೊಂದಿಗೆ ವೀಳ್ಯದೆಲೆಯನ್ನು ಜಗಿದರೆ ಹಲ್ಲುನೋವು, ಬಾವು ಪರಿಹಾರವಾಗುತ್ತದೆ.
    3. ಎರಡು ವೀಳ್ಯದೆಲೆಯಲ್ಲಿ ಅಡಕೆ ಚೂರು, ನಾಲ್ಕು ಏಲಕ್ಕಿ ಕಾಳುಗಳನ್ನಿಟ್ಟು ಜಗಿದು ರಸ ಹೀರಿದರೆ ಗರ್ಭಿಣಯರ ವಾಕರಿಕೆ, ಬಿಕ್ಕಳಿಕೆ ಶಮನವಾಗುತ್ತದೆ.
    4. ವೀಳ್ಯದೆಲೆ ರಸದಲ್ಲಿ 4-6 ಹನಿ ನಿಂಬೆರಸ ಬೆರೆಸಿ ಹಚ್ಚಿದರೆ ತುರಿಕೆ ಕಜ್ಜಿಗಳು ಗುಣವಾಗುತ್ತವೆ.
    5. ವೀಳ್ಯದೆಲೆಯಲ್ಲಿ ಲವಂಗ ಮತ್ತು ಕಲ್ಲುಪ್ಪು ಇರಿಸಿ ಬಾಯಲ್ಲಿಟ್ಟು ರಸ ಹೀರಿದರೆ ಗಂಟಲು ಕೆರೆತ, ಗಂಟಲುನೋವು, ಒಣಕೆಮ್ಮು ಶಮನವಾಗುತ್ತದೆ.
    6. ಕಾವಲಿಯ ಮೇಲೆ ಬೆಚ್ಚಗೆ ಮಾಡಿದ ವೀಳ್ಯದೆಲೆಗೆ ಕರ್ಪರ ಬೆರೆಸಿದ ಕೊಬ್ಬರಿ ಎಣ್ಣೆ ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಕಡಿಮೆಯಾಗುತ್ತದೆ.
    7. ವೀಳ್ಯದೆಲೆ ರಸ, ಬಿಳಿ ಈರುಳ್ಳಿಯ ರಸ, ಜೇನುತುಪ್ಪದ ಮಿಶ್ರಣಕ್ಕೆ ಶುದ್ಧ ಇಂಗನ್ನು ಕದಡಿ ದಿನಕ್ಕೆ 3-4 ಬಾರಿ ಸೇವಿಸಿದರೆ ದೀರ್ಘಕಾಲೀನ ಕೆಮ್ಮು, ಕಫದಿಂದ ಪರಿಹಾರ ಸಿಗುತ್ತದೆ.
    8. ಎರಡು ವೀಳ್ಯದೆಲೆಗಳಲ್ಲಿ 4-5 ಲವಂಗ ಇಟ್ಟು ಜಗಿದು ತಿಂದರೆ ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವು ಗುಣವಾಗುತ್ತದೆ.
    9. ಎರಡು ಎಳೆಯ ವೀಳ್ಯದೆಲೆಗಳಿಗೆ ಅಡಿಕೆ, ಕಾಚಿನ ಪುಡಿ ಬೆರೆಸಿ ಜಗಿಯುತ್ತಿದ್ದರೆ ವಸಡಿನ ರಕ್ತಸ್ರಾವ ನಿವಾರಣೆಯಾಗುತ್ತದೆ. 
    10. ಅಡಿಕೆಯ ಚೂರುಗಳನ್ನು ಇರಿಸಿದ ಎಳೆಯ ವೀಳ್ಯದೆಲೆಯನ್ನು ದಿನಕ್ಕೆ 2-3 ಬಾರಿ ಜಗಿದು ನುಂಗಿದರೆ ಆಮಶಂಕೆ ನಿವಾರಣೆಯಾಗುತ್ತದೆ.

    ವೀಳ್ಯದೆಲೆಯ ವಿಶೇಷ ಗುಣಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts