More

    ಆರೋಗ್ಯ ಸಮಸ್ಯೆಯಿಂದ ಎಲ್ಲೂ ಕಾಣಿಸಿಕೊಂಡಿರಲಿಲ್ಲ

    ಕೋಲಾರ: ಜಿಲ್ಲೆಯ ಕಾಂಗ್ರೆಸ್​ನಲ್ಲಿ ಯಾವುದೇ ರೀತಿ ಗೊಂದಲಗಳಿಲ್ಲ, ಬಣಗಳು ಇಲ್ಲ, ಆರೋಗ್ಯ ಸರಿಯಿಲ್ಲದಿದ್ದರಿಂದ ಇಷ್ಟು ದಿನ ಕಾಣಿಸಿಕೊಂಡಿರಲಿಲ್ಲ, ಇನ್ನು ಮುಂದೆ ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತೆನೆ, ನಾನು ಕೋಲಾರಕ್ಕೆ ಸೀಮಿತವಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಆರ್​.ರಮೇಶ್​ ಕುಮಾರ್​ ಹೇಳಿದರು.

    ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ತೀಮಾರ್ನ ಮಾಡಿದ ಮೇಲೆ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ಸಿಗರಾಗಲ್ಲ ಎಂದು ಅಪಾಧನೆ ಹೊರೆಸುತ್ತಾರೆ. ಸಂವಿಧಾನ ಉಳಿಸಲು ನಾವೆಲ್ಲರೂ ಒಂದುಗೂಡಬೇಕಿದೆ ಎಂದರು.
    ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತಮ್ಮ ಹೆಸರು ಕೇಳಿ ಬಂದಿತ್ತಲ್ಲ ಎಂಬ ಪ್ರಶ್ನೆಗೆ, ದಕ್ಷಿಣ ದಿಕ್ಕು ನನಗೆ ಬೇಡ. ನನ್ನ ಆರೋಗ್ಯ ಸರಿ ಇಲ್ಲ. ಬೆನ್ನಿನ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದೆ. ಹೀಗಾಗಿ, ಹೊರ ಬಂದಿರಲಿಲ್ಲ, ಇನ್ನ ನಾನೂ ಪ್ರಚಾರಕ್ಕೆ ಬರುತ್ತೇನೆ ಎಂದರು.
    ಕೆ.ಎಚ್​.ಮುನಿಯಪ್ಪ ಜತೆ ಮಾತಕತೆ ನಡೆಸಿದ್ದೀರಾ ಎಂಬುದಕ್ಕೆ ಪ್ರತಿಕ್ರಿಯಿಸಿ, ನಾವೆಲ್ಲಾ ಒಟ್ಟಿಗಿದ್ದೇವೆ. ಒಟ್ಟಿಗೆ ಇರಲೇಬೇಕು. ಮಾತುಕತೆ ನಡೆಸುವುದೇನಿದೆ?, ನಾವೆಲ್ಲಾ ಕಾಂಗ್ರೆಸ್ಸಿಗರು, ಪಕ್ಷದ ಬಾವುಟ ಹಿಡಿದು ಪ್ರಚಾರಕ್ಕೆ ಇಳಿಯಬೇಕು. ಬಲ, ಎಡ, ಮೇಲೆ, ಕೆಳಗೆ ಎಂಬುದು ಏನೂ ಇಲ್ಲ. ಇರುವುದು ಕಾಂಗ್ರೆಸ್​ ಮಾತ್ರ ಎಂದು ಉತ್ತರಿಸಿದರು.
    ನಮ್ಮ ಮಾತಿಗೆ ಹೈಕಮಾಂಡ್​ ಮನ್ನಣೆ ನೀಡಿದೆ. ನಮ್ಮೆಲ್ಲರ ಅಭಿಪ್ರಾಯ ಪಡೆದು ಹೈಕಮಾಂಡ್​ ತೀಮಾರ್ನ ಪ್ರಕಟಿಸಿದ್ದಾರೆ. ದೇಶ ಉಳಿಯಬೇಕು, ಮೋದಿ ಬೇಡವೆಂದು ನಾವು ಹೇಳುತ್ತೇವೆ. ಬಿಜೆಪಿಗರು ಮೋದಿಯೇ ಬೇಕು ಎನ್ನುತ್ತಾರೆ. ಅಂತಿಮವಾಗಿ ಜನ ತೀಮಾರ್ನ ಕೈಗೊಳ್ಳುತ್ತಾರೆ ಎಂದರು.
    ಪ್ರಣಾಳಿಕೆಗಳು, ರ್ನಿಣಯಗಳು ಅಪ್ರಸ್ತುತವಾಗುತ್ತಿವೆ. ಅಸ್ತಿತ್ವ ಕಳೆದುಕೊಳ್ಳುತ್ತಿವೆ. ನಾನು ಶ್ರೀನಿವಾಸಪುರದಲ್ಲಿ ಸೋತಿದ್ದೇನೆ. ಇನ್ನು ದೇಶದ ವಿಚಾರ ಮಾತನಾಡುವುದು ಹೇಗೆ?, ಬಹಳ ಶ್ರಮ ಹಾಕಿದ್ದೆ, ಯಾವುದೇ ಕೆಲಸ ಬಾಕಿ ಇರಲಿಲ್ಲ. ಹೀಗಿದ್ದೂ ಸೋತೆ. ನಿಮ್ಮದು ಬರೀ ಮೈಕ್​ ಹಿಡಿಯುವ ಕೆಲಸ, ನಿಮಗೆ ಆ ಕಷ್ಟ ಗೊತ್ತಾಗಲ್ಲ ಎಂದು ಮಾದ್ಯಮದರನ್ನು ಛೇಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts