More

    ರಾಜ್ಯದಲ್ಲಿ ವೈಎಸ್​​ಟಿ ತೆರಿಗೆ ಜಾರಿಗೆ ಬಂದಿದೆ; ಎಚ್​​ಡಿಕೆ ನೇರ ಆರೋಪ!

    ಬೆಂಗಳೂರು: ಜೆಡಿಎಸ್ (JDS) ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumarswamy), ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸದಾಗಿ ವೈಎಸ್​​ಟಿ (YST) ತೆರಿಗೆ ಆರಂಭವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ನೇರ ಆರೋಪ ಎಸಗಿದ್ದಾರೆ.

    ಇದನ್ನೂ ಓದಿ: ಫ್ರಾನ್ಸ್​ ಸಂಘರ್ಷ: ಪ್ಯಾರಿಸ್​ ಮೇಯರ್​ ಮನೆಗೆ ಕಾರು ನುಗ್ಗಿಸಿದ ಗಲಭೆಕೋರರು! 

    ರಾಜ್ಯ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “ವರ್ಗಾವಣೆ ದಂಧೆಯಲ್ಲಿ ಸರಕಾರ ಮುಳುಗೇಳುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಈ ವೈಎಸ್​​ಟಿ (YST) ತೆರಿಗೆ ಆರಂಭಿಸಿದ್ದಾರೆ ಎಂದು ಹೇಳಿದರು. ವೈಎಸ್​​ಟಿ ಎಂದರೆ ಏನು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಎಚ್​​ಡಿಕೆ, ಮಧ್ಯರಾತ್ರಿಯವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ? ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲಾ ಅಖಾಡಕ್ಕೆ ಇಳಿಸಿ, ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನು ಹೋಗಿ ಕೇಳಿ? ಇಲ್ಲ ನೀವೇ ಪತ್ತೆ ಹಚ್ಚಿ” ಎಂದು ಹೇಳಿದರು.

    “ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಲು ಬಯಸುತ್ತೇನೆ. ನಾನು ನಿಮ್ಮ ಪಕ್ಷದ ಜತೆ ಸರಕಾರ ರಚನೆ ಮಾಡಿದ್ದಾಗ ನೀವೆಲ್ಲ ಏನೇನು ಮಾಡಿದ್ದೀರಿ ಎನ್ನುವುದು ತಿಳಿದಿದೆ. ಪೊಗದಸ್ತಾದ ಇಲಾಖೆಗಳನ್ನು ಇಟ್ಟುಕೊಂಡಿದ್ದ ನಿಮ್ಮ ಮಂತ್ರಿಗಳು ಏನು ಮಾಡಿದರು? ಸಿಎಂ ಆಗಿ ನಾನು ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೇ ಇರಲಿಲ್ಲ. ಎಲ್ಲ ದಂಧೆಗಳು ಯಾರ ಮೂಗಿನಡಿ ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ” ಎಂದು ಹೇಳುವ ಮುಖೇನ ತಮ್ಮ ಆಕ್ರೋಶ ಹೊರಹಾಕಿದರು.

    ಇದನ್ನೂ ಓದಿ: ರೇಡಿಯೋ ಚಾನೆಲ್​ಗಳ ವಿಲೀನ ಬೇಡಾ; ಹಾಲಿ ನಿರೂಪಕರು ನೀರುದ್ಯೋಗಿಗಳಾಗುತ್ತಾರೆ.. ಈಗ ಇರುವ ರೀತಿಯಲ್ಲಿಯೇ ನಡೆಸಲು ಅನುಮತಿ ಕೋರಿ ಸಿಎಂಗೆ ಪತ್ರ

    “ಇದೀಗ ರಾಜ್ಯ ಸರ್ಕಾರ ವೈಎಸ್​​ಟಿ ತೆರಿಗೆ ಅಂತ ಶುರು ಮಾಡಿಕೊಂಡಿದ್ದಾರೆ. ವಸೂಲಿ ಮಾಡಿ ವರ್ಗಾವಣೆ ಮಾಡುವ ದಂಧೆ ಮಾಡದೇ ವಸೂಲಿ ಶುರುವಾಗಿದೆ. ಅಧಿಕಾರಿಗಳನ್ನು ಮನೆಗೆ ಕರೆಸಿ ರಾತ್ರಿ ಒಂದು ಗಂಟೆಯವರೆಗೆ ಸಭೆ ಮಾಡುತ್ತಿದ್ದಾರಲ್ಲ ಅದು ಏಕೆ? ಈ ಬಗ್ಗೆ ಸರಕಾರಿ ಕಚೇರಿ ಏಕೆ ಸಭೆಗಳನ್ನು ನಡೆಸಲ್ಲ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts