More

    ಟೀಕೆ ಮಾಡುವವರಿಗೆ ಸೊಪ್ಪು ಹಾಕಲ್ಲ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ

    ಚನ್ನಪಟ್ಟಣ :  ಶಾಸಕನಾಗಿ 3 ವರ್ಷಗಳಲ್ಲಿ ವಾಡಿರುವ ಅಭಿವೃದ್ಧಿ ಹಾಗೂ ಕಳೆದ 20 ವರ್ಷಗಳಿಂದ ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿ ನೋಡಿ ವಾತನಾಡಬೇಕು. ಸುಮ್ಮನೆ ಟೀಕೆ ವಾಡುವವರಿಗೆ ಸೊಪ್ಪು ಹಾಕುವುದಿಲ್ಲ ಎಂದು ವಾಜಿ ಸಿಎಂ ಎಚ್.ಡಿ. ಕುವಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

    ಅರಳಾಳುಸಂದ್ರದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿಗಳ ನಿರ್ವಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ವಿರೋಧ ಪಕ್ಷದವರು ಟೀಕಿಸುವುದನ್ನು ಗಮನಿಸಿದ್ದೇನೆ. ಟೀಕೆ ವಾಡುವವರು ಸಿಂಧಗಿಗೆ ಹೋಗಿ ಅಲ್ಲಿನ ಜನ ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ನೋಡಿಕೊಂಡು ಬಂದು ವಾತನಾಡಲಿ. ಅಲ್ಲಿನ ಅಭಿವೃದ್ಧಿಗೂ, ಇಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಲಿ. ಬೇಕಾದರೆ ನಾನೇ ಬಸ್ ವ್ಯವಸ್ಥೆ ಮಾಡುತ್ತೇನೆ ಎಂದು ಸವಾಲೆಸೆದರು.

    ಸಿಪಿವೈ ವಿರುದ್ಧ ಗುಟುರು: ಪೇಮೆಂಟ್ ಇಲ್ಲದಿದ್ದರೆ ಹಿಂದಿನ ಶಾಸಕರು ಗುದ್ದಲಿ ಹಿಡಿಯುತ್ತಿರಲಿಲ್ಲ. ಕಳೆದ ಅವಧಿಯಲ್ಲಿ ಪ್ರತಿ ಕಾಮಗಾರಿಗೂ ಪೇಮೆಂಟ್ ಹೋಗಬೇಕಿತ್ತು. ಈಗ ಗಣಾತ್ಮಕ ಕೆಲಸ ವಾಡಿ ಜನರಿಗೆ ಅನುಕೂಲ ಕಲ್ಪಿಸಿ ಕೊಡಿ, ನನಗೆ ಯಾವುದೇ ಅಪೇಕ್ಷೆ ಇಲ್ಲ ಎಂದು ತಿಳಿಸಿದ್ದೇನೆ. ಬೇಕಿದ್ದರೆ ಈ ಕುರಿತು ಗುತ್ತಿಗೆದಾರರನ್ನು ಕೇಳಿ ನೋಡಿ ಎಂದು ಪರೋಕ್ಷವಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ಎಚ್‌ಡಿಕೆ ಟೀಕಿಸಿದರು.

    ಅಧಿಕಾರಿಗಳು ಹೆದರುತ್ತಾರೆ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜೀ ಇಲ್ಲ. ಆದರೆ, ಯಾವುದೇ ಕಟ್ಟಡ, ಅಭಿವೃದ್ಧಿ ಕಾಮಗಾರಿ ವೀಕ್ಷಣೆಗೆ ಬರುತ್ತೇನೆ ಎಂದರೆ ಅಧಿಕಾರಿಗಳು ಹೆದರುತ್ತಾರೆ. ಪ್ರೋಟೋಕಾಲ್ ಎನ್ನುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಜನಪ್ರತಿನಿಧಿಗಳಿಗೆ ಹೇಳಬೇಕು ಎನ್ನುತ್ತಾರೆ. ಇಲ್ಲಿ ಕೆಲಸ ವಾಡೋಕೆ ಕುವಾರಸ್ವಾಮಿ ಬೇಕು, ಬೇರೆ ವಿಷಯಕ್ಕೆ ಪ್ರೋಟೋಕಾಲ್ ಬೇಕು ಅನ್ನುತ್ತಾರೆ. ಜನಪರ ಕಾರ್ಯಗಳನ್ನು ವಾಡುವ ಅಧಿಕಾರಿಗಳು ಯಾವುದಕ್ಕೂ ಅಂಜದೆ ಕೆಲಸ ವಾಡಿ ಎಂದು ಎಚ್‌ಡಿಕೆ ಸೂಚಿಸಿದರು.

    ಎಚ್‌ಡಿಕೆ ಬೇಸರ: ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅರಳಾಳು ಸಂದ್ರದಲ್ಲಿ 2 ಕೋಟಿ ರೂ.ವೆಚ್ಚದಲ್ಲಿ 10 ನೂತನ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ನಗರದ ಪಾಲಿಟೆಕ್ನಿಕ್‌ನ ಕೆಲ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಅಲ್ಲಿನ ಕಟ್ಟಡದ ಗೋಡೆಗಳು ಕುಸಿದು ಬೀಳುವ ಸ್ಥಿತಿಯಲ್ಲಿದೆ. ನಾನು ಸಿಎಂ ಆಗಿದ್ದಾಗ ಹೊಸ ಕಟ್ಟಡ ನಿರ್ಮಿಸಲು 19.5 ಕೋಟಿ ರೂ. ಅನುದಾನ ನೀಡಿದ್ದೆ. ಆದರೆ, ನಂತರ ಬಂದ ಸರ್ಕಾರ ಆ ಅನುದಾನವನ್ನು ಹಿಂದಕ್ಕೆ ಪಡೆದಿದೆ ಎಂದು ಎಚ್‌ಡಿಕೆ ಬೇಸರ ವ್ಯಕ್ತಪಡಿಸಿದರು.
    ಭ್ರಷ್ಟಾಚಾರ ಸಹಿಸೋಲ್ಲ: ತಾಲೂಕಿನ ವಿರೂಪಾಕ್ಷಿಪುರ ನಾಡಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುವಾರಸ್ವಾಮಿ, ತಾಲೂಕು ಕಚೇರಿಗೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ, ಎಷ್ಟು ಬಾಕಿ ಉಳಿದಿವೆ ಎಂಬ ವಾಹಿತಿ ಕೇಳಿದ್ದೇನೆ. ರೈತರಿಗೆ, ಸಾವಾನ್ಯ ಜನತೆಗೆ ತೊಂದರೆಯಾಗಲು ಆಸ್ಪದ ನೀಡುವುದಿಲ್ಲ ಎಂದು ಭರವಸೆ ನೀಡಿದರು.
    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕುರುದೊಡ್ಡಿ ಜಯರಾಂ, ಜೆಡಿಎಸ್ ಮುಖಂಡರಾದ ಎಂ.ಸಿ.ಕರಿಯಪ್ಪ, ಅರಳಾಳುಸಂದ್ರ ಶಿವಪ್ಪ, ಬೋರ್‌ವೆಲ್ ರಾಮಚಂದ್ರು,ನಾಗವಾರ ರಂಗಸ್ವಾಮಿ, ಭಾನುಪ್ರಸಾದ್, ಯುವಟಕದ ಅಧ್ಯಕ್ಷ ವಿನೋದ್, ಮಹಿಳಾ ಟಕದ ರೇಖಾ ಉವಾಶಂಕರ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
    ಶ್ರೀದಲ್ಲಿ ಹೊಸ ಪೈಪ್‌ಲೈನ್:
    ಚನ್ನಪಟ್ಟಣದ ನ್ಯಾಯಾಲಯದ ಹಿಂಭಾಗವಿರುವ ಶವದ ಕಾಲು ದೊರೆತ ಟ್ಯಾಂಕ್ ಸ್ಥಳಕ್ಕೆ ಭೇಟಿ ನೀಡಿದ್ದ ಕುವಾರಸ್ವಾಮಿ, ನೀರು ಪೂರೈಕೆಯಾಗುತ್ತಿದ್ದ ಬಡಾವಣೆಗಳಿಗೆ ಹೊಸದಾಗಿ ಪೈಪ್ ಅಳವಡಿಸಲು ಅನುದಾನಕ್ಕೆ ಅನುಮೋದನೆ ಸಿಕ್ಕಿದೆ. ಕೆಲವು ದಿನಗಳಲ್ಲೇ ಒಟ್ಟು 11 ಕಿ.ಮೀ. ಪೈಪ್‌ಲೈನ್ ಕಾಮಗಾರಿ ಆರಂಭವಾಗಲಿದೆ. ಈ ಕಾರ್ಯ ಪೂರ್ಣಗೊಂಡ ನಂತರ ನೂತನ ಟ್ಯಾಂಕ್ ನಿರ್ವಾಣ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಚಿಕ್ಕಮಳೂರಿನಲ್ಲಿ ನಿರ್ಮಿಸಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯವನ್ನು ಕುವಾರಸ್ವಾಮಿ ಉದ್ಘಾಟಿಸಿದರು. ತಹಸೀಲ್ದಾರ್ ನಾಗೇಶ್, ತಾಪಂ ಇಒ ಚಂದ್ರು, ಪೌರಾಯುಕ್ತ ಶಿವನಂಕರಿಗೌಡ, ಡಿಡಿಪಿಐ ಸೋಮಶೇಖರಯ್ಯ, ಟಿಎಚ್‌ಒ ಡಾ. ಕೆ.ಪಿ. ರಾಜು, ಬಿಇಒ ನಾಗರಾಜು ಮತ್ತಿತರ ಅಧಿಕಾರಿಗಳು ಇದ್ದರು.

    ಕಾಮಗಾರಿ ವೀಕ್ಷಣೆ, ಅಹವಾಲು ಸ್ವೀಕಾರ :
    ಚನ್ನಪಟ್ಟಣ: ವಾಜಿ ಸಿಎಂ ಎಚ್.ಡಿ. ಕುವಾರಸ್ವಾಮಿ ಶನಿವಾರ ಸ್ವಕ್ಷೇತ್ರ ಪ್ರವಾಸ ನಡೆಸಿದರು. ಕಾಮಗಾರಿಗಳ ವೀಕ್ಷಣೆ, ಶಂಕುಸ್ಥಾಪನೆ, ಉದ್ಘಾಟನೆ ನಡೆಸುವ ಜತೆಗೆ ಕ್ಷೇತ್ರದ ಜನರ ಅಹವಾಲುಗಳನ್ನು ಸ್ವೀಕರಿಸಿದರು. ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಪಿಎಂ ಕೇರ್ಸ್‌ ನಿಧಿಯಲ್ಲಿ ನಿರ್ಮಿಸಿರುವ ನೂತನ ಆಕ್ಸಿಜನ್ ಟಕ ವೀಕ್ಷಿಸಿದರು. ಕೆಲ ವೈದ್ಯರು ಕರ್ತವ್ಯಕ್ಕೆ ತಡವಾಗಿ ಆಗಮಿಸುತ್ತಾರೆ ಮತ್ತು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ ಎಂಬ ದೂರಿದೆ. ಈ ಕುರಿತು ಗಮನಹರಿಸುವಂತೆ ಆಸ್ಪತ್ರೆ ಅಧೀಕ್ಷಕ ಡಾ. ವಿಜಯನರಸಿಂಹಗೆ ತಿಳಿಸಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts