More

    ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಂಡಿದ್ದೀರಿ?: ಕಾಂಗ್ರೆಸ್​ ನಾಯಕರಿಗೆ ಎಚ್​ಡಿಕೆ ಪ್ರಶ್ನೆ 

    ಚನ್ನಪಟ್ಟಣ :  ಅಲ್ಪಸಂಖ್ಯಾತ ಹಾಗೂ ದಲಿತ ಮುಖಂಡರಿಗೆ ಕಾಂಗ್ರೆಸ್​ ಪಕ್ಷ ಯಾವ ರೀತಿ ಗೌರವ ನೀಡಿದೆ ಎಂಬುದು ತಿಳಿದಿದೆ. ಮಾಜಿ ಸಿಎಂ ಸಿದ್ಧರಾಮಯ್ಯ ಒಬಿಸಿ ಹೆಸರಿನಲ್ಲಿ ಸಮಾವೇಶ ಮಾಡಲು ಹೊರಟಿದ್ದಾರೆ. ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವುದಿರಲಿ. ಮೊದಲು ಕಣ್ಣ ಮುಂದೆ ನಡೆದಿರುವ ಕೆಲ ಘಟನೆಗಳ ಬಗ್ಗೆ ಉತ್ತರ ಕೊಡಲಿ ಎಂದು ಮಾಜಿ ಎಚ್​.ಡಿ. ಕುಮಾರಸ್ವಾಮಿ ಸವಾಲು ಹಾಕಿದರು. ನಗರದ ಕೆಎಚ್​ಬಿ ಬಡಾವಣೆಯಲ್ಲಿ ಬಿಸಿಎಂ ಹಾಸ್ಟೆಲ್​ ಕಟ್ಟಡಕ್ಕೆ ಶನಿವಾರ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಅವರು, ಸಿದ್ಧರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.

    ಕಾಂಗ್ರೆಸ್​ ಪಕ್ಷ ಹಾಗೂ ಸಿದ್ದರಾಮಯ್ಯ ಪದೇಪದೆ ಜೆಡಿಎಸ್​ ಮೇಲೆ ಗೂಬೆ ಕೂರಿಸುವ ಹಾಗೂ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣೆಗಳಲ್ಲಿ ಜೆಡಿಎಸ್​ ಅಲ್ಪಸಂಖ್ಯಾತ ಅಭ್ಯಥಿರ್ಗಳನ್ನು ಸ್ಪರ್ಧೆಗಿಳಿಸುವುದೇ ಕಾಂಗ್ರೆಸ್​ ಸೋಲಿಸುವುದಕ್ಕೆ ಎಂದು ಆ ಪಕ್ಷದ ನಾಯಕರು ಹಾಗೂ ಸಿದ್ದರಾಮಯ್ಯ ನಿರಂತರವಾಗಿ ಹೇಳುತ್ತಿದ್ದಾರೆ.

    ಅಲ್ಪಸಂಖ್ಯಾತ ಹಾಗೂ ದಲಿತ ನಾಯಕರ ರಾಜಕೀಯ ಶಕ್ತಿಯನ್ನು ಕಸಿದುಕೊಳ್ಳುವುದು ಅವರ ಪಕ್ಷದ ಕೆಲಸ ಎಂದು ಆರೋಪಿಸಿದರು. ಅಲ್ಪಸಂಖ್ಯಾತ ನಾಯಕರಿಗೆ ಕಾಂಗ್ರೆಸ್​ನಲ್ಲಿ ನೆಲೆಯಿಲ್ಲ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರಿಗೆ ಆದ ಅನುಭವದ ಮಾತು ಹೇಳಿದ್ದಾರೆ. ಇಬ್ರಾಹಿಂ ಅವರನ್ನು ಕಾಂಗ್ರೆಸ್​ ಪಕ್ಷ ಕೇವಲ ಭಾಷಣಕ್ಕಾಗಿ ಇರಿಸಿಕೊಂಡಿತ್ತು. ಅಲ್ಪಸಂಖ್ಯಾತರಿಗೆ ಯಾವ ರೀತಿ ರಕ್ಷಣೆ ನೀಡಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. ನಮ್ಮ ಪಕ್ಷದ ಮೇಲೆ ಅಪಪ್ರಚಾರ ನಡೆಸುತ್ತಿರುವ ಸಿದ್ದರಾಮಯ್ಯನವರಿಗೆ ಪಂಚ ಪ್ರಶ್ನೆಗಳನ್ನು ಕೇಳಿದ್ದೇನೆ ಅದಕ್ಕೆ ಅವರು ಉತ್ತರಿಸಲಿ.

    ಕಳೆದ ಚುನಾವಣೆಯಲ್ಲಿ ಜೆಡಿಎಸ್​ ಬಿಜೆಪಿಯ ಬಿ&ಟೀಮ್​ ಎಂದು ಕಾಂಗ್ರೆಸ್​ ನಾಯಕರು ಪ್ರಚಾರ ಮಾಡಿದರು. 2012ರ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಅಭ್ಯಥಿರ್ಗಳನ್ನು ಗೆಲ್ಲಿಸಿದ್ದರು ಎಂದು ಪ್ರಶ್ನಿಸಿದರು.

    ವಿಧಾನ ಪರಿಷತ್​ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಅಧಿಕೃತ ಅಭ್ಯಥಿರ್ ಇಕ್ಬಾಲ್​ ಸರಡಗಿ ಅವರನ್ನು ಸೋಲಿಸಿದವರು ಯಾರು? ಇದರಲ್ಲಿ ಸಿದ್ದರಾಮಯ್ಯನವರ ಪಾತ್ರ ಏನು? ಲೋಕಸಭಾ ಚುನಾವಣೆ ವೇಳೆ ಒಂದು ಹೇಳಿಕೆಯನ್ನೇ ಆಧರಿಸಿ ರೋಷನ್​ ಬೇಗ್​ ಅವರಿಗೆ ನೋಟಿಸ್​ ನೀಡದೆ 6 ವರ್ಷ ಸಸ್ಪೆಂಡ್​ ಮಾಡಿದ್ದು ಯಾರು? ಜಾಫರ್​ ಷರೀಫ್​ ಮೊಮ್ಮಗನನ್ನು ಚುನಾವಣೆಗೆ ನಿಲ್ಲಿಸಿ, ಆತನ ಸೋಲಿಗೆ ಕಾರಣರಾದವರು ಯಾರು? ಇದರಲ್ಲಿ ಸಿದ್ದರಾಮಯ್ಯ ಹಾಗೂ ಹಿಂಬಾಲಕರ ಪಾತ್ರ ಏನಿತ್ತು? ಮೈಸೂರು ಮೇಯರ್​ ಚುನಾವಣೆಯಲ್ಲಿ ಕಾಂಗ್ರೆಸ್​ & -ಜೆಡಿಎಸ್​ ಹೊಂದಾಣಿಕೆ ಮಾಡಿಕೊಳ್ಳುವಾಗ ಕಾಂಗ್ರೆಸ್​ ಶಾಸಕ ತನ್ವೀರ್​ ಸೇಠ್​ ಬಗ್ಗೆ ಸಿದ್ದರಾಮಯ್ಯ ಯಾವ ರೀತಿ ಪದ ಬಳಕೆಯನ್ನು ಮಾಡಿದ್ರು ಅನ್ನೋದನ್ನ ಅವರೇ ಹೇಳಬೇಕು.

    ಮೊನ್ನೆ ನಡೆದ ಸಲೀಮ್​ ವಿಚಾರದಲ್ಲಿ ಸಿದ್ದರಾಮಯ್ಯನವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದ್ದಾರೆ. ಇವುಗಳೇ ಸಾಕು ಅವರಿಗೆ ಅಲ್ಪಸಂಖ್ಯಾತ ನಾಯಕರ ಮೇಲೆ ಪ್ರೀತಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಕುಹಕವಾಡಿದದರು.ತಾಲೂಕು ಜೆಡಿಎಸ್​ ಅಧ್ಯಕ್ಷ ಎಚ್​.ಸಿ. ಜಯಮುತ್ತು. ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಮುಖಂಡರಾದ ಹಾಪ್​ಕಾಮ್ಸ್​ ದೇವರಾಜು, ಎಸ್​. ಲಿಂಗೇಶ್​ಕುಮಾರ್​, ನರ್ಸರಿ ಲೋಕೇಶ್​, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಖಾಉಮಾಶಂಕರ್​ ಹಾಗೂ ನಗರಸಭಾ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

    ಕೆ.ಎಚ್​.ಮುನಿಯಪ್ಪ
    ಸೋಲಿಗೆ ಯಾರು ಕಾರಣ? :  ಆರು ಬಾರಿ ಸಂಸದ ಕೋಲಾರದ ಮುನಿಯಪ್ಪರವರ ಸೋಲಿಗೂ ಸಿದ್ದರಾಮಯ್ಯನವರ ಹಿಂದೆ ಮುಂದೆ ಇದ್ದ ನಾಯಕರೇ ಕಾರಣ. ನಾನು ಪದ ಬಳಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್​ ಮಾಡಿ ಮಾತನಾಡಿಲ್ಲ. ರಾಜಕೀಯದ ನರಮೇಧ ಅಂತ ಹೇಳಿದ್ದೇನೆಯೇ ಹೊರತು, ಸಿದ್ದರಾಮಯ್ಯನವರ ನರಮೇಧ ಅಂತ ಹೇಳಿಲ್ಲ. ಕಾಂಗ್ರೆಸ್​ ಪಕ್ಷದಲ್ಲಿ ಅಲ್ಪಸಂಖ್ಯಾತ ನಾಯಕರ ನರಮೇಧ ಹೇಗೆ ನಡೆಯಿತು ಅಂತ ಹೇಳಿದ್ದೇನೆ. ನಾನು ಯಾರ ಬಗ್ಗೆಯೂ ಲಘುವಾಗಿ ಪದ ಬಳಕೆ ಮಾಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

    ರಾಮನ ಹೆಸರಿನಲ್ಲಿ ಅವ್ಯವಹಾರ :  ವಿಜಯದಶಮಿಯ ದಿನದಂದು ಆರ್​ಎಸ್​ಎಸ್​ನ ಭಾಗವತ್​ ಎಲ್ಲ ಹಿಂದೂ ದೇವಸ್ಥಾನಗಳನ್ನು ಆರ್​ಎಸ್​ಎಸ್​ ಸುಪದಿರ್ಗೆ ನೀಡಿ ಅಂತಾ ಹೇಳಿಕೆ ನೀಡಿದ್ದಾರೆ. ಹಿಂದು ದೇಗುಲಗಳನ್ನು ಅವರು ಗುತ್ತಿಗೆ ಪಡೆದಿದ್ದಾರ. ಈ ಹಿಂದೆ ರಾಮಮಂದಿರ ನಿಮಾರ್ಣಕ್ಕೆ ಅಡ್ವಾಣಿಯವರು ರಥಯಾತ್ರೆ ಮಾಡಿ ಇಟ್ಟಿಗೆ ಮತ್ತು ಹಣ ಸಂಗ್ರಹ ಮಾಡಿದರು. ಅದರ ಲೆಕ್ಕ ಇಲ್ಲ.., ಮತ್ತೆ ಇದೀಗ ರಾಮಮಂದಿರ ಹೆಸರಿನಲ್ಲಿ ಹಣ ಸಂಗ್ರಹ ಆಯ್ತು. ಇದರ ಹಣ ಎಲ್ಲಿ ಇಟ್ಟಿದ್ದಾರೆ? ಯಾರು ಲೆಕ್ಕ ಕೊಡುತ್ತಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ರಾಮನ ಹೆಸರಿನಲ್ಲಿ ಕೂಡ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

    ಸರ್ಕಾರದ ಸ್ಪಷ್ಟ ನಿರ್ಧಾರ ಅಗತ್ಯ : ರಾಜೀವ್​ ಗಾಂಧಿ ವಿವಿ ವಿಚಾರದಲ್ಲಿ ಸರ್ಕಾರ ಸಕಾರಾತ್ಮಾಕವಾಗಿ ಸ್ಪಂದಿಸುತ್ತಿದೆ. ಆದರೆ, ಯಾವುದೇ ಪ್ರಗತಿ ಕಾಣುತ್ತಿಲ್ಲ. ಉಸ್ತುವಾರಿ ಸಚಿವ ಡಾ. ಸಿ.ಎನ್​. ಅಶ್ವತ್ಥನಾರಾಯಣ ಹಾಗೂ ಸಚಿವ ಸುಧಾಕರ್​ ಜತೆ ಹಲವಾರು ಬಾರಿ ಸಭೆ ನಡೆಸಿದ್ದೇನೆ. ಎಲ್ಲರೂ ಪಾಸಿಟಿವ್​ ಆಗಿ ಮಾತನಾಡುತ್ತಿದ್ದಾರೆ. ಆದರೆ, ದ್ವೇಷದ ರಾಜಕೀಯವೋ ಅಥವಾ ನಿರ್ಲಕ್ಷ$್ಯವೋ ಅರ್ಥವಾಗುತ್ತಿಲ್ಲ. ಈ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

    ಹೊಸ ಓವರ್​ಹೆಡ್​ ಟ್ಯಾಂಕ್​ ನಿರ್ಮಾಣ

    ಚನ್ನಪಟ್ಟಣ: ಮಹಿಳೆ ಮೃತದೇಹದ ಕಾಲು ಪತ್ತೆಯಾದ ನಗರದ ನ್ಯಾಯಾಲಯದ ಹಿಂಭಾಗದ ಕುಡಿಯುವ ನೀರಿನ ಓವರ್​ ಹೆಡ್​ ಟ್ಯಾಂಕ್​ ಮತ್ತು ಪೈಪ್​ಲೈನ್​ ಹೊಸದಾಗಿ ನಿಮಾರ್ಣ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸೂಚಿಸಿದರು.
    ಶನಿವಾರ ಟ್ಯಾಂಕ್​ ಪರಿಶೀಲನೆ ನಡೆಸಿದ ಅವರು, ನೀರಿನ ಟ್ಯಾಂಕ್​ನಲ್ಲಿ ಶವದ ಕಾಲು ಪ್ರಕರಣ ಆತಂಕ ಮೂಡಿಸಿದೆ. ಈ ಟ್ಯಾಂಕ್​ ಅನ್ನು ಎಷ್ಟೇ ಸ್ವಚ್ಛಗೊಳಿಸಿ ನೀರು ಪೂರೈಸಿದರೂ ಬಳಕೆದಾರರಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಹೊಸದಾಗಿ ಟ್ಯಾಂಕ್​ ಮತ್ತು ಪೈಪ್​ಲೈನ್​ ಅಳವಡಿಸಲು ಅಧಿಕಾರಿಗಳು ನೀಲಿನೆ ಸಿದ್ಧಪಡಿಸಿ ಎಂದು ತಿಳಿಸಿದ ಎಚ್​ಡಿಕೆ, ಹೀಗಾದಾಗ ಮಾತ್ರ, ಜನರಲ್ಲಿ ನೆಮ್ಮದಿ ಮೂಡಲಿದೆ ಎಂದು ಅಭಿಪ್ರಾಯಪಟ್ಟರು.

    ಟ್ಯಾಂಕ್​ನಲ್ಲಿ ಶವದ ಕಾಲು ಪತ್ತೆ ಪ್ರಕರಣ ಬಹಳ ಗಂಭೀರವಾಗಿದ್ದು, ಪೊಲೀಸರು ಹೆಚ್ಚಿನ ಗಮನಹರಿಸಬೇಕು. ಜನನಿಬಿಡ ಪ್ರದೇಶದಲ್ಲಿ ಈ ರೀತಿ ನಡೆದಿರುವುದು ಸಣ್ಣ ವಿಚಾರವಲ್ಲ. ಪೊಲೀಸ್​ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
    ದೇವಸ್ಥಾನ ಅಭಿವೃದ್ದಿಗೆ ಒತ್ತು: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹದೇಶ್ವರ ದೇವಾಲಯದ ಅಭಿವೃದ್ದಿಗೆ ನೀಲಿನಕ್ಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಸಾಕಷ್ಟು ಅನುದಾನ ಹಾಗೂ ಮರಳು ಲಾರಿಗಳ ಹಣ ಸಂಗ್ರಹದ ಬಗ್ಗೆ ಮಾಹಿತಿ ಇದೆ. ನನ್ನ ಅಧಿಕಾರವಧಿಯಲ್ಲೂ ಎರಡು ಕೋಟಿ ರೂ. ಅನುದಾನ ನೀಡಿದ್ದೆ. ಅದರ ಪ್ರಗತಿಯ ಬಗ್ಗೆ ಮಾಹಿತಿ ಇಲ್ಲ. ಈ ದೇಗುಲವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ಕ್ಷೇತ್ರವನ್ನಾಗಿ ರೂಪಿಸಲು ಯೋಜನೆ ರೂಪಿಸಲು ತಿಳಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

    ಬಯಲು ರಂಗಮಂದಿರಕ್ಕೆ ಭರವಸೆ: ನಗರದ ಕೊಲ್ಲಾಪುರಮ್ಮ ದೇವಾಲಯದ ಆವರಣಕ್ಕೆ ಭೇಟಿ ನೀಡಿದ ಎಚ್​.ಡಿ.ಕೆ ತಾಲೂಕಿನ ರಂಗಭೂಮಿ ಕಲಾವಿದರ ಅಹವಾಲು ಆಲಿಸಿದರು. ಈ ಜಾಗದ ವಿವಾದ ಹಾಗೂ ಮಾಹಿತಿಗಳನ್ನು ಕಲೆಹಾಕಿದರು. ಈ ಜಾಗದಲ್ಲಿ ಸುಸಜ್ಜಿತ ಬಯಲು ರಂಗಮಂದಿರ ನಿಮಾರ್ಣಕ್ಕೆ ಸಹಕರಿಸುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅವರು, ಜಾಗದ ವಿವಾದ ಬಗೆಹರಿದ ತಕ್ಷಣ ಬಯಲು ರಂಗಮಂದಿರಕ್ಕೆ ಬೇಕಾದ ಅನುದಾನ ಕೊಡಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.

    ಇದಕ್ಕೂ ಮೊದಲು ನಗರದ ಹೌಸಿಂಗ್​ ಬೋರ್ಡ್​ನಲ್ಲಿ ಬಿಸಿಎಂ ಹಾಸ್ಟೆಲ್​ಗೆ ಕುಮಾರಸ್ವಾಮಿ ಗುದ್ದಲಿಪೂಜೆ ನೇರವೇರಿಸಿದರು. ಇತ್ತೀಚೆಗೆ ನಿಧನರಾದ ಕಾಂಗ್ರೆಸ್​ ಮುಖಂಡ ಹಾಗೂ ಉದ್ಯಮಿ ಎ.ಸಿ. ಚಂದ್ರರವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

     

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts