More

    ‘ಇನ್ನು ಮುಂದೆ ನಾನು ಕಣ್ಣೀರು ಹಾಕೋದಿಲ್ಲ’ ಅಂದ್ರು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ

    ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಕಣ್ಣೀರಿನ ಕಥೆಗೆ ದೊಡ್ಡ ಹಿನ್ನೆಲೆ ಇದೆ. ಅವರು ಕಣ್ಣೀರು ಹಾಕಿದ್ದರ ಬಗ್ಗೆ ಈ ಹಿಂದೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್​ ವ್ಯಂಗ್ಯ ಮಾಡಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕುಮಾರಸ್ವಾಮಿ ಅವರ ಕಣ್ಣೀರಿನ ಕುರಿತು ಮಾತನಾಡಿದ್ದಷ್ಟೇ ಅ್ಲಲ, ಅವರನ್ನು ಕಣ್ಣೀರಸ್ವಾಮಿ ಎಂದು ವ್ಯಂಗ್ಯವಾಡಿದ್ದರು.

    ಈ ಎಲ್ಲ ಹಿನ್ನೆಲೆಯಲ್ಲಿ ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಕಣ್ಣೀರಿನ ಬಗ್ಗೆ ಮಾತನಾಡಿದ್ದಾರೆ. ಇಂದು ಮಂಡ್ಯದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು.

    ಇದನ್ನೂ ಓದಿ: ಕಳವಾದ ನಾಯಿಯನ್ನು ಹನ್ನೆರಡೇ ಗಂಟೆಗಳಲ್ಲಿ ಹುಡುಕಿಕೊಟ್ಟ ಪೊಲೀಸರು; ಹುಡುಕಿಕೊಡದಿದ್ದರೆ ಎಸ್​ಪಿಗೆ ತಿಳಿಸುವುದಾಗಿ ಹೇಳಿದ್ದ ದೂರುದಾರರು

    ನನ್ನನ್ನು ಕಣ್ಣೀರಸ್ವಾಮಿ ಎಂದು ಕರೆದಿರುವ ಸಿದ್ದರಾಮಯ್ಯ ಬಗ್ಗೆ ಹೇಳುವುದಾದರೆ, ಇನ್ನು ಮುಂದೆ ನಾನು ಕಣ್ಣೀರು ಹಾಕೋದಿಲ್ಲ. ಜನ ಸಾಮಾನ್ಯರ ಕಷ್ಟಗಳನ್ನು ನೋಡಿದಾಗ ಹಾಗೆ ಆಗುತ್ತದೆ. ನಾನು ಮೊದಲಿನಿಂದಲೂ ಭಾವನಾತ್ಮಕ ಸಂಸ್ಕೃತಿಯಲ್ಲಿ ಬೆಳೆದು ಬಂದಿದ್ದೇನೆ. ನಾವು ಕಟುಕ ಹೃದಯದ ಸಂಸ್ಕೃತಿಯಲ್ಲಿ ಬಂದವರಲ್ಲ ಎಂದರು. ರಾಜಕಾರಣದಲ್ಲಿ ಮತ ಪಡೆಯಲು ಕಣ್ಣೀರು ಹಾಕಿದವನಲ್ಲ ನಾನು. ಮಂಡ್ಯದ ಕನಕನಮರಡಿ ಬಳಿ ನಾಲೆಗೆ ಬಸ್‌ ಬಿದ್ದು ಪ್ರಯಾಣಿಕರು ಅಸುನೀಗಿದಾಗ, ಅದರಲ್ಲಿ ಪುಟ್ಟ ಮಕ್ಕಳು ಶವವಾಗಿ ಕಂಡಾಗ ನಾನು ದುಃಖ ವ್ಯಕ್ತಪಡಿಸಿದ್ದೇನೆ. ಆಗ ನಾನು ಮುಖ್ಯಮಂತ್ರಿ ಆಗಿದ್ದೆ ಎಂದು ಮಾಜಿ ಸಿಎಂ ಎಚ್​ಡಿಕೆ ಹೇಳಿದರು.

    ಇದನ್ನೂ ಓದಿ: ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ ಭಟ್​ ನಿಧನ

    ದೀನಸ್ಥಿತಿಯಲ್ಲಿ ಕಾಂಗ್ರೆಸ್‌ ನಾಯಕರು: ಬಿಜೆಪಿಯ ಪಕ್ಷಕ್ಕೆ ಸೇರಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ನಿನ್ನೆ ಮಂಡ್ಯದಲ್ಲಿ ಹೇಳಿರುವಂತೆ, ಕಾಂಗ್ರೆಸ್‌ ನಾಯಕರು 6 ರೂಪಾಯಿ, 5 ರೂಪಾಯಿ, 2 ರೂಪಾಯಿಗೆಲ್ಲ ಪಕ್ಷದ ಅಭ್ಯರ್ಥಿ ಮನೆ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದಾರೆ ಎಂದು ಹೇಳಿದ್ದಾರೆ. ಸಚಿವರ ಹೇಳಿಕೆಯನ್ನು ಗಮನಿಸಿದರೆ ಈ ಜಿಲ್ಲೆಯ ಕಾಂಗ್ರೆಸ್‌ ನಾಯಕರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಅಯ್ಯೋ ಎನಿಸುತ್ತಿದೆ. ಜೆಡಿಎಸ್‌ ಪಕ್ಷವನ್ನು ಮುಗಿಸೇಬಿಟ್ಟಿದ್ದೇವೆ ಎನ್ನುತ್ತಿರುವ ಮಹಾನ್‌ ನಾಯಕರ ಹೀನಾಯ ಸ್ಥಿತಿಯ ಬಗ್ಗೆ ಮರುಕ ಉಂಟಾಗುತ್ತಿದೆ. ಇಂಥ ಪರಿಸ್ಥಿತಿ ಯಾರಿಗೂ ಬರಬಾರದು ಅನಿಸುತ್ತಿದೆ ಎಂದರು.

    ಇದನ್ನೂ ಓದಿ: ಅವಳ ಮನೆಗೆ ಅವನು ಬಂದಾಗ ಹಿಡ್ಕೊಂಡ ಜನರು; ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ: ಅನೈತಿಕ ಸಂಬಂಧ ಹೊಂದಿದ್ದಕ್ಕೆ ಘೋರ ಶಿಕ್ಷೆ?

    ಕಾಂಗ್ರೆಸ್‌ ಜಾತಿ ಆಧಾರಿತವಾಗಿ ಮತ ಯಾಚನೆ ಮಾಡುತ್ತಿದೆ ಎಂದು ಒಂದು ಪತ್ರಿಕೆಯಲ್ಲಿ ವರದಿಯಾಗಿದೆ. ಒಬ್ಬ ವ್ಯಕ್ತಿ ಒಂದು ಸಮಾಜದ ಅಧ್ಯಕ್ಷರು ಎಂದು ಹೇಳಿಕೊಂಡು ಕಾಂಗ್ರೆಸ್‌ ಅಭ್ಯರ್ಥಿಪರ ಮತಯಾಚನೆ ಮಾಡುತ್ತಿದ್ದಾರೆ. ಯಾವುದೇ ಪಕ್ಷದಲ್ಲಿದ್ದರೂ ಕೈ ಪಕ್ಷಕ್ಕೆ ಮತ ನೀಡಬೇಕೆಂದು ಆ ವ್ಯಕ್ತಿ ಆಮಿಷವೊಡ್ಡುತ್ತಿರುವ ಬಗ್ಗೆ ಪತ್ರಿಕೆ ಬರೆದಿದೆ. ಇದು ಸಣ್ಣತನವಲ್ಲವೆ? ನಾವು ಜಾತ್ಯಾತೀತವಾದಿಗಳು ಅಂತಾರೆ. ನಾವು ಸಮಾಜದಲ್ಲಿ ಎಲ್ಲರನ್ನೂ ಪ್ರತಿನಿಧಿಸುತ್ತೇವೆ ಎಂದು ಹೇಳುತ್ತಾರೆ. ಮಂಡ್ಯ ಜನ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪರಿಷತ್‌ ಚುನಾವಣೆಯ ಮಂಡ್ಯ ಜಿಲ್ಲೆಯ ಪಕ್ಷದ ಅಭ್ಯರ್ಥಿ ಅಪ್ಪಾಜಿ ಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

    ಎರಡನೇ ಮದ್ವೆ ಆಗಲು ಹೆಂಡ್ತಿ-ಮಕ್ಳನ್ನು ಕೊಂದ, 11 ವರ್ಷಗಳ ಬಳಿಕ ಸಿಕ್ಕಿಬಿದ್ದ; ಈತ ತಪ್ಪಿಸಿಕೊಂಡಿದ್ದು, ಬಳಿಕ ಮಾಡಿದ್ದೆಲ್ಲ ಭಾರಿ ಕಿತಾಪತಿ!

    ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts