More

    ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾಗ ಟೀಕೆ ‌ಬೇಡ; ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂಬ ಸುಳಿವು ನೀಡಿದ್ರಾ ಎಚ್​ಡಿಕೆ?

    ಬೆಂಗಳೂರು: ಮಂಡ್ಯದಿಂದ ನಾನು ಚುನಾವಣೆಗೆ ನಿಲ್ಲಬೇಕಾದ ಅನಿವಾರ್ಯತೆ ಇಲ್ಲ. ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವುದೆಂದು ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದೇನೆ. ಮಂಡ್ಯದಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದರು. ಒಂದು ವೇಳೆ ಸ್ಪರ್ಧೆ ಮಾಡಿದ್ದೇ ಆದಲ್ಲಿ, ಕಾರ್ಯಕರ್ತರಿಗೆ ಬೇರೆಯೇ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಇದೇ ವೇಳೆ ತೀವ್ರಕುತೂಹಲ ಕೆರಳಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬ ವಿಚಾರದ ಬಗ್ಗೆ ಮಾತನಾಡುತ್ತಾ, ಹಾಸನ‌ ಅಭ್ಯರ್ಥಿ ಘೋಷಣೆ ವಿಚಾರ ಟೀಕೆಗೆ ಗ್ರಾಸವಾಗಬಾರದು ಎಂದರು. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾಗ ಸಾರ್ವಜನಿಕ ಟೀಕೆ‌ ಬೇಡ. ನನ್ನ ತೀರ್ಮಾನಕ್ಕೆ‌ ಬದ್ಧನಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂಬ ಸುಳಿವು ನೀಡಿದರು.

    ಇದನ್ನೂ ಓದಿ: ಮತ ಎಣಿಕೆಗೆ ಎರಡು ದಿನ ಬೇಕೆ? ಬಲ್ಲವರು ತಿಳಿಸಿ; ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಉಪೇಂದ್ರ ಪ್ರಶ್ನೆ

    ಎಚ್​ಡಿಕೆ ಮಾತನಾಡುತ್ತಾ, ಇಂದು ರಾಜ್ಯದ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಇದೊಂದು ರಾಜಕೀಯ ಪ್ರಕ್ರಿಯೆಯಾಗಿದ್ದು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ 5 ವರ್ಷಗಳ ನಂತರ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಚುನಾವಣಾ ದಿನಾಂಕ ಪ್ರಕಟವಾಗುವ‌ ನಿರೀಕ್ಷೆ ಇತ್ತು, ಎಲ್ಲರೂ ಗೌರವಿಸಿ ಚುನಾವಣಾ ಪಾರದರ್ಶಕತೆ ಉಳಿಸೋದಾಗಿ ಎಲ್ಲಾ ಪಕ್ಷಗಳು ಹೇಳಿದ್ದಾರೆ ಎಂದರು.

    ಚುನಾವಣೆಯ ನಿಮಿತ್ತ ಜೆಡಿಎಸ್ ಪಕ್ಷದಿಂದ ಈಗಾಗಲೇ 50-60% ತಯಾರಿ ಮಾಡಿದ್ದೇವೆ. ಸಧ್ಯದಲ್ಲೇ ನಾಮಪತ್ರಿಕೆ ಸಲ್ಲಿಕೆ ಮಾಡುತ್ತೇವೆ. 123 ಗುರಿ‌‌ ತಲುಪುವುದು ನಮ್ಮ ಮುಂದಿನ ಗುರಿ. ಇದಲ್ಲದೆ ಇವಿಎಂ‌ ಯಂತ್ರದ ಬಗ್ಗೆ ಇರುವ ಅನುಮಾನ ನಿವಾರಣೆಯಾಗಬೇಕು. ಜನ ಸಾಮಾನ್ಯರ ಅನುಮಾನ‌ ನಿವಾರಿಸಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು! ಕಠಿಣ ಕ್ರಮಕ್ಕೆ ಮುಂದಾದ ರೈಲ್ವೇ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts