More

    ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ… ಭ್ರಷ್ಟಾಚಾರ, ಕುದುರೆ ವ್ಯಾಪಾರದ ಬಗ್ಗೆಯೂ ಕಾಮೆಂಟ್ ಮಾಡಿ! ನೆಟ್ಟಿಗರ ತರಾಟೆಗೆ ಉಪೇಂದ್ರ ಪ್ರತಿಕ್ರಿಯೆ

    ಬೆಂಗಳೂರು: ಚುನಾವಣಾ ದಿನಾಂಕ ಮೇ 10 ಮತ್ತು ಮೇ 13ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡುತ್ತಿದ್ದಂತೆ, ನಟ-ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಟ್ವಿಟರ್​ನಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದರು. ಮತ ಎಣಿಕೆಗೆ ಎರಡು ದಿನ ಬೇಕೆ? ಬಲ್ಲವರು ತಿಳಿಸುತ್ತೀರಾ? ಎಂದು ಟ್ವೀಟ್ ಮಾಡಿದ್ದರು.

    ಉಪೇಂದ್ರ ಮಾಡಿದ್ದ ಟ್ವೀಟ್ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕವಾಗಿತ್ತು. ಬಳಕೆದಾರರು ತಮ್ಮ ತಮ್ಮ ದೃಷ್ಟಿಕೋನದಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿದ್ದರು. ಉಪೇಂದ್ರ ಕೇಳಿದ್ದ ಪ್ರಶ್ನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು. ಈ ಬಗ್ಗೆ ಟ್ರೋಲ್​ ಕೂಡ ನಡೆದಿದೆ.

    ಇದನ್ನೂ ಓದಿ: VIDEO | ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ

    ತಾವು ಮಾಡಿದ್ದ ಟ್ವೀಟ್​ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ಯವಾಗುತ್ತಿದ್ದಂತೆ ಕೆಲ ಸಮಯದ ಬಳಿಕ ಸ್ವತಃ ಉಪೇಂದ್ರ ಅವರೇ ಮತ್ತೊಂದು ಟ್ವೀಟ್‌ ಮಾಡಿ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದ್ದಾರೆ. ಡಿಜಿಟಲ್ ವೋಟಿಂಗ್ ಅಲ್ವಾ? ಮತ ಎಣಿಕೆಗೆ 2 ದಿನಾ ಬೇಕಾ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ. ಅಬ್ಬಬ್ಬಾ ಏನು ಕಾಮೆಂಟ್ಸ್​ಗಳು?! ವಾರೆ ವಾಹ್… ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ದಿವಂತರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂಬಾಲಕರು ಎಂದು ಟ್ವೀಟ್ ಮಾಡಿದ್ದಾರೆ.

    ಇದು ತಂತ್ರಜ್ಞಾನ ಯುಗ. ಅನಕ್ಷರಸ್ತ ರಸ್ತೆ ವ್ಯಾಪಾರಿಗಳು ಫೋನ್ ಮೂಲಕ ಡಿಜಿಟಲ್​ನಲ್ಲಿ ಹಣದ ವ್ಯವಹಾರ ಮಾಡುತ್ತಾರೆ. ವ್ಯಾಪಾರಸ್ತರು ಕೋಟ್ಯಾಂತರ ಹಣ ಸುರಕ್ಷಿತವಾಗಿ ಆನ್​ಲೈನ್​ನಲ್ಲಿ ವರ್ಗಾವಣೆ ಮಾಡುತ್ತಾರೆ. ಬಹು ಮುಖ್ಯ ದಾಖಲೆಗಳೊಂದಿಗೆ ವ್ಯವಹಾರ ಮಾಡುವ ದೊಡ್ಡ ದೊಡ್ಡ ಅಂತರರಾಷ್ಟ್ರೀಯ ಕಂಪನಿಗಳು ಡಿಜಿಟಲ್ ಮೂಲಕ ವ್ಯವಹರಿಸುತ್ತಾರೆ. ಪ್ರದಾನ ಮಂತ್ರಿಗಳು ತಮ್ಮ ಬೆರಳಿಂದಲೇ ಲಕ್ಷಾಂತರ ಬ್ಯಾಂಕ್ ಖಾತೆಗೆ ಏಕಕಾಲಕ್ಕೆ ಹಣ ವರ್ಗಾಯಿಸುತ್ತಾರೆ! ಇಷ್ಟೆಲ್ಲಾ ಬದಲಾವಣೆ ಆದರೂ ಚುನಾವಣೆಯಲ್ಲಿ ಮತದಾರರು ಅವರಿರುವ ಜಾಗದಿಂದಲೇ ಮತದಾನ ಮಾಡುವ ತಂತ್ರಜ್ಞಾನ ಏಕೆ ಬರುತ್ತಿಲ್ಲ? ಯೋಚಿಸಿ. ಇದು ಪ್ರಶ್ನೆ ಅಷ್ಟೇ. ಟೀಕೆ ಅಲ್ಲ ಎಂದು ಉಪೇಂದ್ರ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ರೈಲ್ವೇ ಫೇಸ್​ಬುಕ್ ಪೇಜ್ ಹ್ಯಾಕ್! ಕಾರ್ಟೂನ್ ಫೋಟೋ ಅಪ್ಲೋಡ್ ಮಾಡಿದ ಸೈಬರ್ ಕಳ್ಳರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts