More

    ಗೊಂದಲ ಸೃಷ್ಟಿ ಬೇಡ, ಚನ್ನಪಟ್ಟಣದಲ್ಲಿ ಸಮರ್ಥ ಅಭ್ಯರ್ಥಿ ಇದ್ದಿದ್ದರೆ ಮಂಡ್ಯದಿಂದ ಸ್ಪರ್ಧಿಸುತ್ತಿದ್ದೆ; ಎಚ್​ಡಿಕೆ

    ಮಂಡ್ಯ: ಮಂಡ್ಯದಲ್ಲಿ ನಾನು ಚುನಾವಣೆಗೆ ನಿಲ್ಲುತ್ತೇನೆ ಎಂಬುವುದು ಮಾಧ್ಯಮಗಳ ಸೃಷ್ಟಿ. ಇದಕ್ಕೆ ಸುಮಲತಾ ನನ್ನ ವಿರುದ್ಧ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ಅವರದ್ದು ದ್ವೇಷದ ರಾಜಕಾರಣ. ನಾನು ಸ್ಪರ್ಧೆ ಮಾಡದಿದ್ದರೂ ಮಂಡ್ಯ ಜನರು ಜೆಡಿಎಸ್‌ ಪಕ್ಷವನ್ನು ಗೆಲ್ಲಿಸುತ್ತಾರೆ. ಅನಿವಾರ್ಯವಾದರೆ ದೇವೇಗೌಡರು ಪ್ರಚಾರಕ್ಕಾಗಿ ಮಂಡ್ಯಕ್ಕೆ ಬರುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ; ದೇವೆಗೌಡರಿಂದ ಬಿ ಫಾರ್ಮ್ ಪಡೆಯುತ್ತಲೇ ಕಣ್ಣೀರು!

    ಮಂಡ್ಯದಿಂದ ಸ್ಪರ್ಧೆ ಮಾಡುತ್ತೇನೆ ಎಂದವರು ಯಾರು?

    ಶ್ರೀರಂಗಪಟ್ಟಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಾ, ನಾನು ಮಂಡ್ಯದಿಂದ ಸ್ಪರ್ಧೆ ಮಾಡುತ್ತೇನೆ ಎಂದವರು ಯಾರು? ಚನ್ನಪಟ್ಟಣದ ಅಭ್ಯರ್ಥಿಯಾಗಿ ವಂದಾರಗುಪ್ಪೆ ಶಾಖೆಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದೇನೆ. ಮಂಡ್ಯದಲ್ಲಿ ಕೇಂದ್ರ ಕಛೇರಿ ಇರುವ ಕಾರಣ ಅದರಲ್ಲಿ ಉಲ್ಲೇಖಿಸಿದ್ದಾರೆ. ಸುಮಲತಾರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರಷ್ಟು ವರ್ಚಸ್ಸು ನನಗಿಲ್ಲ. ಮಂಡ್ಯಕ್ಕೆ ಅವರು ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಹೀಗಾಗಿ ಅವರ ಸವಾಲನ್ನು ನಾನು ನಿರಾಕರಣೆ ಮಾಡುತ್ತೇನೆ. ಈ ಬಾರಿ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ. ಸಾಮಾನ್ಯ ಕಾರ್ಯಕರ್ತ, ರೈತನ ಮಗನ, ರೈತ ಮಹಿಳೆಯನ್ನು ನಿಲ್ಲಿಸಿ ಜೆಡಿಎಸ್ ಗೆಲ್ಲಿಸಿಕೊಳ್ಳುತ್ತೇನೆ. ಇವರ ದುರಹಂಕಾರದ ಮಾತುಗಳಿಗೆ ಮಂಡ್ಯದ ಜನ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.

    ಇದನ್ನೂ ಓದಿ: ಕದನ ಕಣದಲ್ಲಿ ತೊಡೆತಟ್ಟಿದ ಕೋಟಿವೀರರು; ಇಲ್ಲಿದೆ ಶತಕೋಟ್ಯಧೀಶ ರಾಜಕಾರಣಿಗಳ ಒಟ್ಟು ಆಸ್ತಿ ವಿವರ…

    ಚನ್ನಪಟ್ಟಣದಲ್ಲಿ ಸಮರ್ಥ ಅಭ್ಯರ್ಥಿ ತಯಾರಾಗಿದ್ದಿದ್ದರೆ….

    ಗೊಂದಲ ಸೃಷ್ಟಿ ಬೇಡ ಎಂದು ಸಾವಿರ ಬಾರಿ ಹೇಳಿದ್ದೇನೆ. ಚನ್ನಪಟ್ಟಣದಲ್ಲಿ ಸಮರ್ಥ ಅಭ್ಯರ್ಥಿ ತಯಾರಾಗಿದ್ದಿದ್ದರೆ, ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೆ. ಕಾರ್ಯಕರ್ತರನ್ನು ಉಳಿಸಿ ಪಕ್ಷ ಕಟ್ಟಲಿಕ್ಕೆ ಕಳೆದ ಬಾರಿ ಎರಡು ಕಡೆ ನಿಂತಿದ್ದೆ. ಈಗ ಆ ಅನಿವಾರ್ಯತೆ ಇಲ್ಲ. ಹಾಸನದಲ್ಲಿ ನಮ್ಮ ಕುಟುಂಬದವರು ಸ್ಪರ್ಧೆ ಮಾಡುವ ಅಗತ್ಯ ಇಲ್ಲ‌, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದೆ. ಆ ಮಾತೇ ಮಂಡ್ಯಕ್ಕೂ ಅನ್ವಯ ಆಗಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ಇದನ್ನೂ ಓದಿ: ಈಡುಗಾಯಿ ಹರಕೆ ತೀರಿಸಿದ ಡಿಕೆಶಿ; ದೇವಸ್ಥಾನದ ಹುಂಡಿಗೆ ಬಿತ್ತು 500 ರೂ. ನೋಟಿನ ಕಂತೆ ಕಂತೆ ಹಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts